ನವದೆಹಲಿ: ಮೇಲ್ಮನವಿ ನ್ಯಾಯಾಲಯವು ಒಂದು ವೇಳೆ ಪರಿಹಾರ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದರೂ, ಭೂಮಾಲೀಕರು 1894ರ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 28-ಎ ಅಡಿಯಲ್ಲಿ ಪರಿಹಾರದ ಮರು ನಿಗದಿಗಾಗಿ ಎರಡನೇ ಅರ್ಜಿ ಸಲ್ಲಿಸಲು ಅರ್ಹರು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಪರಿಹಾರದ ಮರು ನಿಗದಿಗಾಗಿ ಕಾಯ್ದೆಯ ಸೆಕ್ಷನ್ 28-ಎ ಅಡಿಯಲ್ಲಿ ತಾವು ಸಲ್ಲಿಸಿದ್ದ ಎರಡನೇ ಅರ್ಜಿಯನ್ನು ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ಪ್ರಶ್ನಿಸಿ ಅಂದಾನಯ್ಯ ಹಾಗೂ ಇತರರು ಸಲ್ಲಿಸಿದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಹಾಗೂ ಎನ್.ಕೋಟೀಶ್ವರ್ ಸಿಂಗ್ ಪೀಠವು ಈ ತೀರ್ಪು ನೀಡಿದೆ.

'ಈ ಕಾಯ್ದೆಯು ದ್ವಿಗುಣ ಸ್ವರೂಪದ್ದಾಗಿದೆ. ಇದು ಸ್ವಾಧೀನಪಡಿಸಿಕೊಳ್ಳುವುದಕ್ಕೂ ಮತ್ತು ಭೂಮಾಲೀಕರಿಗೂ ಪ್ರಯೋಜನಕಾರಿಯಾಗಿದೆ. ಪರಿಹಾರ ಮರುನಿರ್ಣಯವನ್ನು ಉಲ್ಲೇಖ ನ್ಯಾಯಾಲಯದ ತೀರ್ಪಿನಿಂದ ಭಾಗಶಃ ಮಾಡಲು ಸಾಧ್ಯವಿಲ್ಲ. ಭೂಮಾಲೀಕರ ನಡುವೆ ಪರಿಹಾರದ ಅಸಮಾನತೆ ಬಗೆಹರಿಸಲು ಸೆಕ್ಷನ್ 28-ಎ ಅನ್ನು ನಿರ್ದಿಷ್ಟವಾಗಿ ಪರಿಚಯಿಸಲಾಗಿದೆ‘ ಎಂದು ಪೀಠ ಹೇಳಿದೆ.

ಭೂಸ್ವಾಧೀನ ಅಧಿಕಾರಿಯ ಆದೇಶ ಹಾಗೂ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪನ್ನು ನ್ಯಾಯಪೀಠ ರದ್ದುಪಡಿಸಿದೆ. ಹೈಕೋರ್ಟ್ನ 2013 ರ ತೀರ್ಪಿನ ಆಧಾರದಲ್ಲಿ ಮೇಲ್ಮನವಿದಾರರಿಗೆ ಎಕರೆಗೆ ₹3.50 ಲಕ್ಷ ಪರಿಹಾರವನ್ನು ಮರು ನಿಗದಿ ಮಾಡಬೇಕು ಎಂದು ಪ್ರತಿವಾದಿಗೆ ನಿರ್ದೇಶನ ನೀಡಿದೆ. ಈ ಪ್ರಕ್ರಿಯೆಯನ್ನು ಎಂಟು ವಾರಗಳಲ್ಲಿ ಪೂರ್ಣಗೊಳಿಸಬೇಕು ಎಂದೂ ತಾಕೀತು ಮಾಡಿದೆ.

ಪ್ರಕರಣವೇನು?:

ಹುಬ್ಬಳ್ಳಿ-ಅಂಕೋಲಾ ಬ್ರಾಡ್ ಗೇಜ್ ಮಾರ್ಗ ನಿರ್ಮಾಣಕ್ಕಾಗಿ ಹುಬ್ಬಳ್ಳಿ ತಾಲ್ಲೂಕಿನ ಮಾವನೂರ ಗ್ರಾಮದಲ್ಲಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. 2002ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರತಿ ಎಕರೆಗೆ ₹40 ಸಾವಿರ ಪರಿಹಾರವನ್ನು ಭೂಸ್ವಾಧೀನ ಅಧಿಕಾರಿ ನಿಗದಿಪಡಿಸಿದ್ದರು.

ಕೆಲವು ಭೂಮಾಲೀಕರು ಸೆಕ್ಷನ್ 18ರ ಅಡಿಯಲ್ಲಿ ಉಲ್ಲೇಖ ಕೋರಿದ್ದರೂ, ಮೇಲ್ಮನವಿ ಸಲ್ಲಿಸಿದವರು ಮೇಲ್ಮನವಿ ಸಲ್ಲಿಸಿರಲಿಲ್ಲ. ಉಲ್ಲೇಖ ನ್ಯಾಯಾಲಯವು ಪರಿಹಾರವನ್ನು ₹2 ಲಕ್ಷಕ್ಕೆ ಏರಿಸಿ 2006ರಲ್ಲಿ ಆದೇಶ ಹೊರಡಿಸಿತ್ತು.

ನಂತರ ಮೇಲ್ಮನವಿದಾರರು ಸೆಕ್ಷನ್ 28-ಎ ಅಡಿಯಲ್ಲಿ 2007ರಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಮರು ನಿಗದಿ ಮಾಡಬೇಕು ಎಂದು ಕೋರಿದ್ದರು. ಈ ಅರ್ಜಿ ಪರಿಗಣಿಸಲು ನ್ಯಾಯಾಲಯ ಒಪ್ಪಿತ್ತು. ಆದಾಗ್ಯೂ, ಆ ಅರ್ಜಿಯ ವಿಚಾರಣೆಯ ಸಮಯದಲ್ಲಿ, ಇತರ ಭೂಮಾಲೀಕರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಪರಿಹಾರ ಮೊತ್ತವನ್ನು ಎಕರೆಗೆ ₹3.5 ಲಕ್ಷಕ್ಕೆ ಹೈಕೋರ್ಟ್ ಏರಿಸಿತ್ತು. ಆ ಬಳಿಕ ಅಂದಾನಪ್ಪ ಹಾಗೂ ಇತರರು ಪರಿಹಾರ ಹೆಚ್ಚಳಕ್ಕೆ ಸೆಕ್ಷನ್ 28 ಎ ಅಡಿಯಲ್ಲಿ ಎರಡನೇ ಅರ್ಜಿಸಲ್ಲಿಸಿದ್ದರು. ಭೂಮಾಲೀಕರ ಪರವಾಗಿ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿತ್ತು. ಈ ಆದೇಶವನ್ನು ವಿಭಾಗೀಯ ಪೀಠ ರದ್ದುಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.