ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ (ನಾರಿ ಶಕ್ತಿ ವಂದನ ಅಧಿನಿಯಮ) ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ನಗರದಲ್ಲಿ ಸೋಮವಾರ ಬೈಕ್ ರ್ಯಾಲಿ ನಡೆಸಲಾಯಿತು.

ಹುಬ್ಬಳ್ಳಿ– ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾ ಘಟಕದ ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಲದ್ವಾ, ಶಾಸಕ ಮಹೇಶ್ ಟೆಂಗಿನಕಾಯಿ, ಮಾಜಿ ಶಾಸಕಿ ಸೀಮಾ ಮಸೂತಿ ರ್ಯಾಲಿಗೆ ಚಾಲನೆ ನೀಡಿದರು.

ನಗರದ ಟೆಂಡರ್ ಶೂರ್ ರಸ್ತೆ, ಶಿರೂರು ಪಾರ್ಕ್, ಹಳೆ ಆದಾಯ ತೆರಿಗೆ ಇಲಾಖೆ ಕಚೇರಿ, ಕೆಎಂಸಿಆರ್ಐ ಹಿಂಭಾಗ, ದೇಶಪಾಂಡೆ ನಗರ, ಸಾಯಿಬಾಬಾ ಮಂದಿರ, ಕೊಪ್ಪಿಕರ್ ರಸ್ತೆ ಮೂಲಕ ಮೂರು ಸಾವಿರ ಮಠದ ಮೈದಾನವರೆಗೆ ರ್ಯಾಲಿ ನಡೆಯಿತು.

‘ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ತುಂಬುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಬೈಕ್ ರ್ಯಾಲಿ ನಡೆಸಲಾಗಿದೆ’ ಎಂದು ಸೀಮಾ ಲದ್ವಾ ಹೇಳಿದರು.

ಮಾಜಿ ಶಾಸಕಿ ಸೀಮಾ ಮಸೂತಿ, ಅಕ್ಕಮಹಾದೇವಿ ಹೆಗಡೆ, ಪುಷ್ಪಾ ನವಲಗುಂದ, ಸಂಗೀತಾ ಬದ್ದಿ, ವೀಣಾ ಬರದ್ವಾಡ, ಚಂದ್ರಿಕಾ ಮೇಸ್ತ್ರಿ, ಶೀಲಾ ಕಾಟಕರ್, ದುರ್ಗಮ್ಮ ಬಿಜವಾಡ, ಶಾಂತಾ ಹಿರೇಮಠ, ಉಮೇಶಗೌಡ ಕೌಜಗೇರಿ, ಶಿವು ಮೆಣಸಿನಕಾಯಿ, ಗಂಗಾ ಅಂಗಡಿ, ವಸಂತ ನಾಡಜೋಶಿ, ಮಂಜುನಾಥ ಕಾಟಕರ, ರಾಜು ಕೋರ್ಯಾಣಮಠ, ಅಮೃತ ಕಲ್ಪವೃಕ್ಷ, ಮಂಜುನಾಥ ಹೆಬಸೂರ, ಸುಮಾ ಶಿವನಗೌಡರ್, ವಿಜಯಾ ಗುಡಗೇರಿ, ಲಕ್ಷ್ಮಿ ದೊಡ್ಡಮನಿ, ಗೀತಾ ದೆಸಳ್ಳಿ, ಅನ್ನಪೂರ್ಣ ಪಾಟೀಲ, ಸರೋಜ ಛಬ್ಬಿ, ಮೇಘನಾ ಶಿಂಧೆ, ಮಧು ಏನಗಿಮಠ, ವಿಜಯಲಕ್ಷ್ಮಿ ತಿಮ್ಮೋಳಿ, ಅನುರಾಧಾ ಚಿಲ್ಲಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-24-1802335864

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.