ಹುಬ್ಬಳ್ಳಿ: ‘ರಾಷ್ಟ್ರೀಯ ಸ್ವಯಂಸೇವಕ ಸಂಘ ಎನ್ನುವ ಗಂಗೆಯನ್ನು ಭೂಮಿಗೆ ತಂದ ಕೇಶವ ಬಲಿರಾಮ್ ಹೆಡ್ಗೆವಾರ್ ಅವರು, ಅಪ್ರತಿಮ ದೇಶಭಕ್ತರಾಗಿದ್ದರು. ಸ್ವಂತಕ್ಕೆ ಯೋಚಿಸದೆ ಸಂಘಟನೆ ಕಾರ್ಯದಲ್ಲಿ ಹಗಲಿರುಳು ಶ್ರಮಿಸಿದ ಮಹಾನ್ ಸಂತ ಅವರಾಗಿದ್ದರು’ ಎಂದು ಆರ್ಎಸ್ಎಸ್ ಉತ್ತರ ಪ್ರಾಂತ ಪ್ರಚಾರಕ ನರೇಂದ್ರ ಹೇಳಿದರು.

ನಗರದ ಲೋಕಹಿತ ಟ್ರಸ್ಟ್ ಮತ್ತು ಸಂಸ್ಕಾರ ಭಾರತಿ ಸಹಯೋಗದಲ್ಲಿ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶನಿವಾರ ನಡೆದ ವಿಶೇಷ ಸಂಗೀತ ನೃತ್ಯ ಕಾರ್ಯಕ್ರಮ ‘ಕೇಶವ ನಮನ’ದಲ್ಲಿ ಅವರು ಮಾತನಾಡಿದರು.

ಹೆಡ್ಗೆವಾರ್ ಅವರು 11ನೇ ವಯಸ್ಸಿನಲ್ಲಿಯೇ ತಂದೆ–ತಾಯಿಯನ್ನು ಕಳೆದುಕೊಂಡು ಅನಾಥರಾಗುತ್ತಾರೆ. ಆದರೂ ದಾರಿ ತಪ್ಪದ ಮಗುವಾಗಿ ಶಾಲಾ ದಿನಗಳಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ನಂತರದ ಕ್ರಾಂತಿ ದಿನಗಳಲ್ಲಿ ಗುಲಾಮಗಿರಿಗೆ ಕಾರಣವೇನು ಎಂದು ಚಿಂತಿಸಿ, ರಾಜಿ ಇಲ್ಲದ ದೇಶಭಕ್ತಿ, ನಡವಳಿಕೆ ನಮ್ಮದಾಗಬೇಕು ಎಂದು ಯೋಚಿಸಿದರು. ಹಿಂದೂಗಳ ಸ್ವಯಂ ಸೇವಕ ಸಂಘಟನೆಯಲ್ಲಿ ನಿರತರಾದರು’ ಎಂದರು.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿಶ್ವದ ಅತಿದೊಡ್ಡ ಸಂಘಟನೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಬಲಿಷ್ಠ ಸಂಘಟನೆಯೂ ಹೌದು. ಇದರ ಹಿಂದೆ ಇರುವುದು ಹೆಡ್ಗೆವಾರ್ ಅವರ ಪರಿಶ್ರಮವಾಗಿದೆ. ಇಂದು ಸಂಘ ಸಮಾಜದ ಎಲ್ಲಾ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಭಾರತ ಮಾತೆಯನ್ನು ಜಗನ್ಮಾತೆ ಮಾಡುವುದು ಸಂಘದ ಉದ್ದೇಶ. ಜಗತ್ತಿನಲ್ಲಿ ಗೊಂದಲವಿದ್ದು, ಎಲ್ಲರೂ ದೇಶಕ್ಕಾಗಿ ಹೆಚ್ಚು ಸಮಯ ವಿನಿಯೋಗಿಸಬೇಕು’ ಎಂದರು.

ಏಕಕಾಲದಲ್ಲಿ ನೂರು ಕಲಾವಿದರಿಂದ ದೇಶ ಭಕ್ತಿ ಗೀತೆ ಗಾಯನ ನಡೆಯಿತು. ಭರತನಾಟ್ಯ ಕಲಾವಿದ ಸುಜಯ ಶಾನಭಾಗ ಅವರ ತಂಡದಿಂದ ‘ಸಂಘಾಂತರಂಗ ನೃತ್ಯ ರೂಪಕ’, ಕೃಷ್ಣೇಂದ್ರ ವಾಡೇಕರ ಮತ್ತು ಗಾಯತ್ರಿ ದೇಶಪಾಂಡೆ ಅವರಿಂದ ‘ಹಿಂದೂಸ್ತಾನಿ ಸಂಗೀತ’ ಕಾರ್ಯಕ್ರಮ ನಡೆಯಿತು. ತೇಜೋಮಯಿ ಮಾತಾ ಸಾನ್ನಿಧ್ಯ ವಹಿಸಿದ್ದರು. ಕಲಾವಿದರಾದ ಶ್ರೀಧರ ನಾಡಿಗೇರ, ಬಾಲಚಂದ್ರ ನಾಕೋಡ್ ಹಾಗೂ ಕಿರಣ ಗುಡ್ಡದಕೇರಿ, ಸುಭಾಸಸಿಂಗ ಜಮಾದಾರ, ರಘು ಅಕ್ಮಂಚಿ, ಶ್ರೀನಿವಾಸ, ದಿನೇಶ ವಾಘಮೋಡೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-24-1524744066

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.