ಹುಬ್ಬಳ್ಳಿ: ‘ಪ್ರೀತಿ, ಪ್ರೇಮದ ವಿಷಯಕ್ಕೆ ಕೆಲವರು ಜಿಹಾದ್ ಶಬ್ದ ಸೇರಿಸಿದ್ದು ಅಕ್ಷಮ್ಯ ಅಪರಾಧವಾಗಿದ್ದು, ಭಾತೃತ್ವದಲ್ಲಿ ಸಹಬಾಳ್ವೆ ನಡೆಸುತ್ತಿರುವ ಹಿಂದೂ–ಮುಸ್ಲಿಮರಿಗೆ ಇದು ಮುಜುಗರ ತರಿಸುತ್ತಿದೆ’ ಎಂದು ಧಾರವಾಡ ಜಿಲ್ಲಾ ದುರ್ಬಲ ಹಾಗೂ ಅಲ್ಪ ಸಂಖ್ಯಾತರ ಅಭಿವೃದ್ಧಿ ಸೇವಾ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಐ.ಎಂ.ತೊರಗಲ್, ‘ಕೆಲವರು ವೋಟ್ ಬ್ಯಾಂಕ್ಗೋಸ್ಕರ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ. ಪ್ರಬುದ್ಧ ಜನತೆ ಇದನ್ನು ಅರ್ಥ ಮಾಡಿಕೊಂಡು, ಶಾಂತಿ ಸಹಬಾಳ್ವೆಗೆ ಮುಂದಾಗಬೇಕು. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು‘ ಎಂದು ಒತ್ತಾಯಿಸಿದ್ದಾರೆ.

‘ಕೆಲ ರಾಜರು ಹಿಂದಿನ ಕಾಲದಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಅದನ್ನು ಖಂಡಿಸಿ ಜನರು ಜಿಹಾದ್ಗೆ ನಿಲ್ಲುತ್ತಿದ್ದರು. ಇಸ್ಲಾಂ ಧರ್ಮದ ಉನ್ನತ ಸ್ಥಾನದಲ್ಲಿರುವ ಜಿಹಾದ್ ಶಬ್ದಕ್ಕೆ ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಸೇರಿಸಿದ್ದು ಸರಿಯಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.