ಹುಬ್ಬಳ್ಳಿ: 12ನೇ ಮೇ ಸಾಹಿತ್ಯ ಮೇಳಕ್ಕೆ ಇಲ್ಲಿನ ಅರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ಚಾಲನೆ ನೀಡಲಾಯಿತು. 'ಸಾಂವಿಧಾನಿಕ ಪ್ರಜಾಸತ್ತೆಯ ಮೇಲಿನ ದಾಳಿ: ಚಹರೆ ಮತ್ತು ಹೊರದಾರಿಗಳು' ಪ್ರಸ್ತುತ ಮೇಳದ ಪ್ರಮುಖ ವಿಷಯವಾಗಿದೆ.

ಸಂವಿಧಾನ ಪ್ರಸ್ತಾವನೆ ಓದಲಾಯಿತು. ಸಿಂಧನೂರಿನ ಆರ್ಸಿಎಫ್ ಕಲಾ ತಂಡ, ಕೊಪ್ಪಳದ ಧರಣಿ ಕಲಾ ತಂಡ, ಗದುಗಿನ ದಲಿತ ಕಲಾ ಮಂಡಳಿ ಹಾಗೂ ವಿವಿಧ ಕಲಾತಂಡಗಳು ಹೋರಾಟದ ಹಾಡು ಪ್ರಸ್ತುತ ಪಡಿಸಿದರು.

ಗದುಗಿನ ಲಡಾಯಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ, ಕವಲಕ್ಕಿಯ ಕವಿ ಪ್ರಕಾಶನ ಹಾಗೂ ಮೇ ಸಾಹಿತ್ಯ ಮೇಳ ಹುಬ್ಬಳ್ಳಿ ಬಳಗದ ಸಹಯೋಗದಲ್ಲಿ ಮೇಳ ಆಯೋಜನೆಯಾಗಿದೆ.

ಉದ್ಘಾಟನಾ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಪತ್ರಕರ್ತ ಸನತ್ಕುಮಾರ ಬೆಳಗಲಿ, 'ಪ್ರಜಾಪ್ರಭುತ್ವ ರಾಷ್ಟ್ರ ನಾಶಮಾಡಿ ಮನುವಾದಿ ರಾಷ್ಟ್ರ ನಿರ್ಮಾಣ ಮಾಡುವ ದಿಕ್ಕಿನತ್ತ ಕೆಲವರು ಸಾಗುತ್ತಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ ಹಾಗೂ ಸಹಬಾಳ್ವೆಯಲ್ಲಿ ನಂಬಿಕೆ ಇರುವ ಶಕ್ತಿಗಳೆಲ್ಲ ಇದರ ವಿರುದ್ಧ ಒಂದಾಗಿ ಹೋರಾಡಬೇಕು. ರಾಜಕೀಯವಾಗಿ ಅವರು ಇನ್ನೂ ಯಶಸ್ವಿಯಾಗಿಲ್ಲ. ಅವರಿಂದ ಅಧಿಕಾರ ಕಿತ್ತುಕೊಳ್ಳುವವರೆಗೂ ಅಪಾಯ ತಪ್ಪಿದ್ದಲ್ಲ' ಎಂದರು.

'ಮನುವಾದಿ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಸಂವಿಧಾನ ನಾಶ ಮಾಡುವ ಹುನ್ನಾರ ಯಶಸ್ವಿಯಾಗಿ ಮಾಡುತ್ತ ಬಂದಿದ್ದಾರೆ. ಚುನಾವಣಾ ಆಯೋಗ, ನ್ಯಾಯಾಲಯಕ್ಕೆ ಅವರಿಂದ ಅಪಾಯ ಎದುರಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ತೊಂಬತ್ತುಲಕ್ಷ ಮಂದಿಯನ್ನು ಹೊರಗೆ ಹಾಕಿ ಚುನಾವಣೆ ನಡೆಸಿದರು. ಸಂಸದೀಯ ವ್ಯವಸ್ಥೆಯ ಅಡಿಯಲ್ಲಿರುವ ಹಕ್ಕನ್ನು ಒಂದೊಂದಾಗಿ ನಾಶ ಮಾಡುತ್ತ ಬಂದಿದ್ದಾರೆ. ಸಮಾನತೆ ಬಯಸುವ ವಿಚಾರಧಾರೆ ಉಳ್ಳವರು ಮೇ ಸಾಹಿತ್ಯ ಮೇಳ ಆಯೋಜಿಸುತ್ತ ಬಂದಿದ್ದು ಶ್ಲಾಘನೀಯ. ಇದು ದೇಶಕ್ಕೆ ಮಾದರಿಯಾಗಿದ್ದು, ರಾಷ್ಟ್ರ ಮಟ್ಟದಲ್ಲಿ ನಡೆಯಬೇಕು' ಎಂದು ಹೇಳಿದರು.

ದಿಕ್ಷೂಚಿ ಭಾಷಣ ಮಾಡಿದ ತೆಲುಗು ಸಾಹಿತಿ ಪಾಣಿ, 'ಹೋರಾಟವೇ ನಮ್ಮ ಪರಿಭಾಷೆಯಾಗಿದೆ. ಚೈತನ್ಯಶೀಲ ಸಮಾಜವನ್ನು ಪುನಶ್ಚೇತನ ಮಾಡುವುದು ಪ್ರತಿಯೊಬ್ಬ ಬರಹಗಾರನ ಕರ್ತವ್ಯವಾಗಿದೆ. ನಿರಂಕುಶ ಪ್ರಭುತ್ವವಾದಿಗಳು ಜಾತಿ, ಜಾತಿಗಳ ಮಧ್ಯೆ ಒಡಕು ಸೃಷ್ಟಿಸಿ ಅಮಾಯಕರನ್ನು ಛೂ ಬಿಡುತ್ತಿದ್ದಾರೆ. ಸಾಂಸ್ಕೃತಿಕ ಅಸ್ತ್ರವನ್ನು ಬಳಸಿಕೊಳ್ಳುತ್ತ ಸಮಾಜದಲ್ಲಿ ಬಿರುಕು ಮೂಡಿಸುತ್ತಿದ್ದಾರೆ. ಭಾರತವನ್ನು ಛಿದ್ರವಾಗಲು ಬಿಡದೆ, ನಾವೆಲ್ಲ ಒಗ್ಗಟ್ಟಾಗಿ ಹೋರಾಡಬೇಕು' ಎಂದರು.

'ತುಪ್ಪ ತಿಂದವರಲ್ಲಿ ಮಾತ್ರ ಪ್ರತಿಭೆಗಳಿಲ್ಲ, ಮಣ್ಣಿನಲ್ಲೂ ಪ್ರತಿಭೆಗಳಿವೆ ಎಂದು ಈ ಮೇಳ ಸಾಕ್ಷೀಕರಿಸುತ್ತಿದೆ. ಕೋಮುವಾದಿ, ಮನುವಾದಿಗಳನ್ನೆಲ್ಲ ಮೆಟ್ಟಿ ಎದ್ದು ನಿಲ್ಲಲು ಇಂತಹ ಸಮ್ಮೇಳನ ಸಹಕಾರಿಯಾಗಿದೆ. ನಾವೆಲ್ಲ ಸಂಸ್ಕೃತಿಯ ಉದ್ಧಾರಕ, ಸಾಹಿತ್ಯದ ಆರಾಧಾಕರು ಆಗಬೇಕು. ಕಸಿದು ಉಣ್ಣುವವರ ಕೈಗಳನ್ನು ಜವಾಬ್ದಾರಿಯಿಂದ ಹಿಡಿಯುವ ಹೋರಾಟದ ಭಾವನೆ ನಮ್ಮಲ್ಲಿ ಮೂಡಬೇಕು' ಎಂದು ಪ್ರೊ. ಐ.ಜಿ. ಸನದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹುಬ್ಬಳ್ಳಿ ಘೋಷಣೆ ಮತ್ತು ಸಾಹಿತಿ ಪಾಣಿ ಅವರ ಕಾದಂಬರಿ 'ಶಿಕಾರಿ' ಬಿಡುಗಡೆ ಮಾಡಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರೆವರೆಂಡ್ ಜಾರ್ಜ್ ಫರ್ಡಿನ್ಯಾಂಡ್ ಕಿಟೆಲ್, ಫ.ಗು. ಹಳಕಟ್ಟಿ, ಜಗದೀಶ ಮಂಗಳೂರಮಠ, ಪ್ರಹ್ಲಾದ ಅಗಸನಕಟ್ಟೆ, ಜಿ.ಎಚ್. ರಾಘವೇಂದ್ರ ಸ್ಮಾರಕ ಪುಸ್ತಕ ಮಳಿಗೆಗಳನ್ನು ಗಣ್ಯರು ಉದ್ಘಾಟಿಸಿದರು. ಹಾಗೂ ಡಿ.ವಿ. ಹಾಲಭಾವಿ, ಎಂ.ವಿ. ಮಿಣಜಗಿ, ಎಂ. ಜೀವನ, ನೀಲಗಂಗಯ್ಯ ಪೂಜಾರ, ಫಕ್ಕೀರವ್ವ ಗುಡಿಸಾಗರ ಅವರ 'ಸ್ಮಾರಕ ಚಿತ್ರಕಲಾ ಪ್ರದರ್ಶನ' ಮಳಿಗೆಯನ್ನು ಶ್ಯಾಮಲಾ ಗುರುಪ್ರಸಾದ ಅವರು ಉದ್ಘಾಟಿಸಿದರು.

ಬಸವರಾಜ ಸೂಳಿಭಾವಿ, ಕೆ. ನೀಲಾ, ಅನ್ವರ ಮುಧೋಳ, ಲಿಂಗರಾಜ ಅಂಗಡಿ, ಮಹೇಶ ಪತ್ತಾರ, ಗುರುನಾಥ ಉಳ್ಳಿಕಾಶಿ, ವಿ.ಬಿ. ಮಾಗನೂರ, ಶರೀಫ್ ಬಿಳೆಮಲೆ ಹಾಗೂ ಇತರರು ಉಪಸ್ಥಿತರಿದ್ದರು.

'ಸಂವಿಧಾನ ರಕ್ಷಣೆಗೆ ಮುಂದಾಗಬೇಕು'

'ಜನರ ಮುಂದೆ ಹುಟ್ಟಿರುವ ಸಂವಿಧಾನ ನಮ್ಮದಾಗಿದ್ದು, ಅದರ ರಹದಾರಿ ಮುಚ್ಚುವ ಕೆಲಸ ನಡೆಯುತ್ತಿದೆ. ಅದನ್ನು ರಕ್ಷಿಸಿಕೊಳ್ಳಲು ನಾವೆಲ್ಲರೂ ಮುಂದಾಗಬೇಕು' ಎಂದು ಕೆ. ನೀಲಾ ಹೇಳಿದರು.

'ನಮ್ಮ ಶತ್ರು ಯಾರು, ಮಿತ್ರರು ಯಾರು ಎಂಬುದನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ತಿಳಿಸಿದ್ದಾರೆ. ಆದರೆ ಮನುವಾದಿಗಳು ನಮ್ಮನ್ನು ನಾವಿದ್ದ ಜಾಗದಲ್ಲೇ ಜೈಲು ಖೈದಿಯನ್ನಾಗಿಸುವ ಹುನ್ನಾರ ನಡೆಸುತ್ತಿದ್ದಾರೆ. ನಮಗೆ ಆಕ್ರೋಶ ಮತ್ತು ಕೋಪ ಬರದಿದ್ದರೆ ಅವರು ಕೊಟ್ಟಿದ್ದನ್ನು ಒಪ್ಪಿಕೊಂಡಂತೆಯೇ. ಅನ್ಯಾದ ವಿರುದ್ಧ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.