ಹುಬ್ಬಳ್ಳಿ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಲೆಕ್ಕಪತ್ರ ವಿವಾದ ಬಗೆಹರಿಸಲು ಮತ್ತು ಸಮಾಜವನ್ನು ಒಗ್ಗೂಡಿಸಲು ಲಿಂಗಾಯತ ಪಂಚಮಸಾಲಿ ಸಮಾಜದ ಸಮಾನ ಮನಸ್ಕ ಮುಖಂಡರು ನಗರದಲ್ಲಿ ಬುಧವಾರ ಸಭೆ ನಡೆಸಿದರು.

ಸಭೆಯಲ್ಲಿ ವಚನಾನಂದ ಸ್ವಾಮೀಜಿ ಭಕ್ತರು ಮತ್ತು ಗುರುಪೀಠದ ಟ್ರಸ್ಟ್ನ ಮುಖಂಡರ ನಡುವೆ ಏರುಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು ಎಂದು ತಿಳಿದು ಬಂದಿದೆ.

ಹರಿಹರ ಪೀಠ ಮತ್ತು ಕೂಡಲಸಂಗಮ ಪೀಠದವರನ್ನು ಆಹ್ವಾನಿಸಲಾಗಿತ್ತು ಎಂದು ಮುಖಂಡರು ಹೇಳಿದರೂ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸೇರಿ, ಕೂಡಲಸಂಗಮ ಪೀಠದ ಪ್ರಮುಖರು ಗೈರಾಗಿದ್ದರು.

ಸಭೆ ಬಳಿಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ಹರಿಹರ ಪೀಠದಲ್ಲಿ ಲೆಕ್ಕಪತ್ರ ವಿಷಯದ ಬಗ್ಗೆ ಆರೋಪ, ಪ್ರತ್ಯಾರೋಪ ಕೇಳಿ ಬಂದಿದ್ದವು. ಇದನ್ನು ಬಗೆಹರಿಸಲು ವಚನಾನಂದ ಸ್ವಾಮೀಜಿ ಭಕ್ತರು, ಗುರುಪೀಠದ ಟ್ರಸ್ಟ್ ಪ್ರಮುಖರ ಸಭೆ ನಡೆಸಿ, ಭಿನ್ನಾಭಿಪ್ರಾಯ, ಗೊಂದಲ ನಿವಾರಿಸುವ ಕೆಲಸ ಮಾಡಲಾಗಿದೆ’ ಎಂದರು.

‘ಪಂಚಮಸಾಲಿ ಸಮಾಜದ ಎರಡೇ ಪೀಠಗಳಿವೆ. ಯಾವುದೇ ಹೊಸ ಪೀಠ ಸ್ಥಾಪಿಸುವ ಉದ್ದೇಶ ಇಲ್ಲ. ಈಗ ಇರುವ ಪೀಠಗಳನ್ನು ಸುಧಾರಿಸಲಾಗುವುದು. ಮೊದಲು ಸಮಾಜ ಒಂದಾಗಬೇಕಿದೆ. ಅದಕ್ಕೆ ಸಭೆಗೆ ಸ್ವಾಮೀಜಿಗಳನ್ನು ಆಹ್ವಾನಿಸಿಲ್ಲ. ನಾವು ಹೇಳಿದ್ದನ್ನೇ ಸ್ವಾಮೀಜಿಗಳು ಕೇಳಬೇಕು’ ಎಂದರು.

ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ‘ಸಮಾಜದ ಗುರುಪೀಠಗಳು, ಟ್ರಸ್ಟ್ಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿವೆ. ಮೊದಲ ಹಂತದಲ್ಲಿ ಶೇ 75ರಷ್ಟು ಸಮಸ್ಯೆ ಬಗೆಹರಿಸಲಾಗಿದೆ. ಹಂತ ಹಂತವಾಗಿ ಎಲ್ಲ ಸಮಸ್ಯೆ ನಿವಾರಣೆಯಾಗಲಿದೆ. ಲೆಕ್ಕಪತ್ರ ಸಮಸ್ಯೆ ಬಗೆಹರಿಸುವ ಹೊಣೆಯನ್ನು ಬಸನಗೌಡ ಪಾಟೀಲ ಯತ್ನಾಳ ಅವರಿಗೆ ವಹಿಸಲಾಗಿದೆ’ ಎಂದು ಹೇಳಿದರು.

‘ಸಮಾಜದ 80 ಲಕ್ಷ ಜನಸಂಖ್ಯೆಗೆ ಒಂದೇ ಪೀಠ ಇದ್ದರೆ ಎಲ್ಲರಿಗೂ ಒಂದೇ ಕಡೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಒಂದು ಮಹಿಳಾ ಪೀಠ ಸೇರಿ ಪಂಚ ಪೀಠಗಳನ್ನು ಮಾಡುವ ಉದ್ದೇಶ ಇದೆ’ ಎಂದರು.

ಶಾಸಕ ಅರವಿಂದ ಬೆಲ್ಲದ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಚಿವ ಸಿ.ಸಿ. ಪಾಟೀಲ, ಸೋಮಣ್ಣ ಬೇವಿನಮರದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-51-303374631

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.