ಹುಬ್ಬಳ್ಳಿ: ‘ಇತ್ತೀಚಿಗೆ ಕೆಲವರು ಬಸವಣ್ಣನವರ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ. ಮುಂದೊಂದು ದಿನ ಅವರೇ ಇರಲಿಲ್ಲ, ಅವರೊಬ್ಬ ಕಾಲ್ಪನಿಕ ವ್ಯಕ್ತಿ ಎಂದು ಹೇಳಿದರೂ ಅಚ್ಚರಿಯಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ನಡೆದ ‘ಅಹಿಂದ 25 ವರ್ಷಗಳ ಹೋರಾಟ, ಸಾಧನೆ, ಸಂಕಲ್ಪ– ರಾಜ್ಯಮಟ್ಟದ ವಿಚಾರ ಸಂಕಿರಣ’ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವಣ್ಣನ ವಿರೋಧಿಸುವರಿಗೆ ತಕ್ಷಣ ಪ್ರತಿಕ್ರಿಯಿಸಬೇಕು. ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆ ಮಾಡಿಕೊಂಡು, ಅವರಿಗೆ ಸತ್ಯದ ಅರಿವು ಮಾಡಿಸಬೇಕು. ಜನ ಸಮೂಹವೇ ಅವರಿಗೆ ಉತ್ತರಿಸುವಂತಾಗಬೇಕು’ ಎಂದರು.

‘20 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ಸಮಾವೇಶವು ರಾಜಕೀಯ ಬದಲಾವಣೆಗೆ ಕಾರಣವಾಗಿತ್ತು. ಆ ದಿನಗಳನ್ನು ನೆನಪಿಟ್ಟುಕೊಂಡು ಈವರೆಗೆ ಏನೆಲ್ಲ ಬದಲಾವಣೆಗಳಾಗಿವೆ, ಏನೇನು ಆಗಬೇಕು ಎನ್ನುವ ಕುರಿತು ಚಿಂತನ–ಮಂಥನ ನಡೆಯಬೇಕು. ನಾನು ಮುಖ್ಯಮಂತ್ರಿ ಆಗಬೇಕು, ಪ್ರಮುಖ ಸ್ಥಾನಕ್ಕೆ ಹೋಗಬೇಕು ಎನ್ನುವ ರಾಜಕೀಯ ಕಾರ್ಯಾಗಾರ, ಸಮಾವೇಶ ಇದಲ್ಲ’ ಎಂದು ಹೇಳಿದರು.

‘ಜಾತಿವ್ಯವಸ್ಥೆ ಬಲ ವಾಗಿ ಬೇರೂರಿದ್ದು, ವ್ಯಕ್ತಿ ಸತ್ತ ನಂತರವೂ ಅದು ಮುಂದುವರಿಯುತ್ತಿದೆ. ಅನೇಕ ಸಮುದಾಯಗಳ ಮುಖಂಡರು, ರಾಜಕೀಯ ನಾಯಕರು ಬಂದು–ಹೋದರೂ, ಯಾರಿಂದಲೂ ಅದನ್ನು ಹೊಡೆದೋಡಿಸಲು ಸಾಧ್ಯವಾಗಿಲ್ಲ. ಹೀಗಾಗಿ, ನಾಯಕರನ್ನು ಬದಲಿಸಬೇಕಿದೆ. ಹೋರಾಟದ ದಾರಿ ಹಾಗೂ ವ್ಯಾಖ್ಯಾನಗಳು ಸ್ಪಷ್ಟವಾಗಿರಬೇಕು. ವಿರೋಧಿಗಳು ಯಾರು ಎನ್ನುವುದನ್ನು ಪತ್ತೆಹಚ್ಚಬೇಕು’ ಎಂದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಪ್ರೊ. ಪ್ರದೀಪ ರಾಮಾವತ್, ರಾಜಾ ನಾಯಕ, ದಾನಪ್ಪ ಕಬ್ಬೇರ ಮಾತನಾಡಿದರು. ಶಾಸಕ ಯಾಸೀರ ಅಹ್ಮದ್ ಖಾನ್ ಪಠಾಣ, ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ರಾಹುಲ್ ಜಾರಕಿಹೊಳಿ, ವಿನೋದ ಅಸೂಟಿ, ಗುರುನಾಥ ಉಳ್ಳಿಕಾಶಿ, ಪಾಂಡುರಂಗ ಪಮ್ಮಾರ ಸೇರಿದಂತೆ ವಿವಿಧ ಜಿಲ್ಲೆಗಳ ಅಹಿಂದ ಮುಖಂಡರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-24-1729546203

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.