ಹುಬ್ಬಳ್ಳಿ: ‘ಆಲ್ ಕರ್ನಾಟಕ ಸುನ್ನಿ ಮಶಾಯಿಖ್ ಕೌನ್ಸಿಲ್ ವತಿಯಿಂದ ನಡೆದ ರಾಜ್ಯಮಟ್ಟದ ಸಾಮಾನ್ಯ ಸಭೆಯಲ್ಲಿ ಹಜರತ್ ಖ್ವಾಜಾ ಬಂದೆ ನವಾಜ್ ಸಜ್ಜಾದಾ ನಶೀನ್ ಹಾಗೂ ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರನ್ನು ಆಲ್ ಕರ್ನಾಟಕ ಸುನ್ನಿ ಮಶಾಯಿಖ್ ಕೌನ್ಸಿಲ್ನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು‘ ಎಂದು ಹಜರತ್ ಸಯ್ಯದ್ ಶಾ ಹಸನ್ ಶಬ್ಬಿರ್ ಮಹಮ್ಮದ್ ಅಲ್ ಹುಸೇನಿ ಅವರು ಸಭೆಯಲ್ಲಿ ಘೋಷಿಸಿದರು.

ನಗರದ ಹೋಟೆಲ್ನಲ್ಲಿ ಭಾನುವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಡಾ.ಸಯ್ಯದ್ ಮಹಮ್ಮದ್ ಅಲಿ ಅಲ್ ಹುಸೈನಿ ಅವರು, ‘ಇದು ದೊಡ್ಡ ಜವಾಬ್ದಾರಿಯಾಗಿದ್ದು, ಹಿರಿಯ ಮಾರ್ಗದರ್ಶನದಲ್ಲಿ ಸಮಾಜಕ್ಕಾಗಿ ಒಳ್ಳೆಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ’ ಎಂದರು.

ನಗರದ ದರ್ಗಾದ ಪೀಠಾಧಿಪತಿ ಹಜರತ್ ತಾಜುದ್ದಿನ್ ಖಾದ್ರಿ ಅವರು, ‘ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವೂ ಕೊರತೆಯಾಗದಂತೆ ಬೇಕಾದ ಸವಲತ್ತುಗಳನ್ನು ಕೊಡಿಸಲು ಶ್ರಮಿಸಲಾಗುವುದು’ ಎಂದರು.

ಇದೇ ವೇಳೆ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಅವರು ನೂತನ ಅಧ್ಯಕ್ಷರನ್ನು ಗೌರವಿಸಿದರು. ರಾಜ್ಯದ 500ಕ್ಕೂ ಹೆಚ್ಚಿನ ದರ್ಗಾಗಳ ಪೀಠಾಧಿಪತಿಗಳು, ರಾಘವೇಂದ್ರ ಹಿಟ್ನಾಳ್, ಬಸವರಾಜ ಹಿಟ್ನಾಳ್, ಎಸ್.ಡಿ.ಮಕಂದರ್ ಹಾಗೂ ಪ್ರಮುಖರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-24-13422902

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.