ಹುಬ್ಬಳ್ಳಿ: ‘ಸಾರಿಗೆ ನೌಕರರ ಬೇಡಿಕೆ ಈಡೇರಿಕಾಗಿ ಮೇ 20ರಂದು ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು, ಎಲ್ಲ ನೌಕರರು ಮುಷ್ಕರದಲ್ಲಿ ಪಾಲ್ಗೊಂಡು ಕಾರ್ಮಿಕರ ಶಕ್ತಿ ಪ್ರದರ್ಶಿಸಬೇಕು’ ಎಂದು ಸಾರಿಗೆ ನೌಕರರ ಮಹಾಮಂಡಳದ ಮುಖಂಡ ಬಿ. ಜಯದೇವರಾಜೇ ಅರಸು ಹೇಳಿದರು.

ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ನಗರದ ಕೆ.ಎಸ್. ಶರ್ಮಾ ಸಭಾಭವನದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರ 38 ತಿಂಗಳಿನಿಂದ ವೇತನ ಹಿಂಬಾಕಿ ಇಟ್ಟುಕೊಂಡಿದೆ. 2024ರ ಜನವರಿಯಿಂದ ವೇತನ ಪರಿಷ್ಕರಣೆಯಾಗಬೇಕಿತ್ತು. ಅದು ಸಹ ಮಾಡದೆ, ಕಾರ್ಮಿಕರ ಸ್ವಾಭಿಮಾನ ಕೆಣುಕುತ್ತಿದೆ. ಪ್ರತಿಭಟನೆ, ಮುಷ್ಕರ ಹಮ್ಮಿಕೊಂಡಾಗಲೆಲ್ಲ ಭರವಸೆ ನೀಡುತ್ತ ಕಾಲ ಹರಣ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2024ರ ವೇತನ ಪರಿಷ್ಕರಣೆಯನ್ನು 2025ರ ಜನವರಿಯಿಂದ ನೀಡುವುದಾಗಿ ಹೇಳಿತ್ತು. ಅದು ಕಾನೂನು ವಿರುದ್ಧವಾಗಿದೆ ಎಂದು ತಿರಸ್ಕರಿಸಲಾಯಿತು. ಸಂಸ್ಥೆಯ ಆದಾಯ ಹೆಚ್ಚಿಸುವಲ್ಲಿ ಕಾರ್ಮಿಕರ ಪಾತ್ರ ದೊಡ್ಡದಾಗಿದೆ. ಆದರೆ, ಅಧಿಕಾರಿಗಳ ಅವೈಜ್ಞಾನಿಕ ನೀತಿಯಿಂದ ನಿಗಮಗಳು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಶಕ್ತಿಯೋಜನೆ ತಮ್ಮಿಂದಲೇ ಯಶಸ್ವಿಯಾಗಿದೆ ಎಂದು ಸಚಿವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಆ ಕೀರ್ತಿ ತಂದುಕೊಟ್ಟಿದ್ದು, ಕಾರ್ಮಿಕ ಶಕ್ತಿ. ವೇತನ ಹಿಂಬಾಕಿ ಪಾವತಿಗೆ ಸುಮಾರು ₹500 ಕೊಟಿ ಬೇಕಾಗುತ್ತದೆ. ಕಾರ್ಮಿಕರಿಗೆ ದ್ರೋಹ ಮಾಡಬೇಡಿ’ ಎಂದರು.

ಜಂಟಿ ಕ್ರಿಯಾ ಸಮಿತಿಯ ಕಾರ್ಯದರ್ಶಿ ವಿಜಯ ಭಾಸ್ಕರ್ ಮಾತನಾಡಿ, ‘ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದ್ದು, ಸಾರಿಗೆ ಇಲಾಖೆಯ ಕಾರ್ಮಿಕರೆಲ್ಲ ಒಗ್ಗಟ್ಟಾಗಬೇಕು. ನಾವ್ಯಾರು ಭಿಕ್ಷೆ ಬೇಡುತ್ತಿಲ್ಲ, ಸಂವಿಧಾನ ಬದ್ಧವಾದ ಹಕ್ಕನ್ನು ಪ್ರತಿಪಾದಿಸುತ್ತಿದ್ದೇವೆ. ಈಗ ಹುಬ್ಬಳ್ಳಿ ವಿಭಾಗದಲ್ಲಿ ಪೂರ್ವಭಾವಿ ಸಮಾವೇಶ ನಡೆಯುತ್ತಿದ್ದು, ಮೇ 12ರಂದು ಕಲಬುರ್ಗಿಯಲ್ಲಿ, 14ರಂದು ಮೈಸೂರು ಹಾಗೂ 17ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಬೇಡಿಕೆ ಈಡೇರಿಕೆಯೊಂದೇ ನಮ್ಮ ಏಕೈಕ ಉದ್ದೇಶ’ ಎಂದು ಹೇಳಿದರು.

ಸಭೆಯಲ್ಲಿ ಹಾಜರಿದ್ದ ನಿವೃತ್ತ ಹಾಗೂ ಹಾಲಿ ಕಾರ್ಮಿಕರು ಸರ್ಕಾರದ ನಡೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೈ ಎತ್ತುವ ಮೂಲಕ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸಾರಿಗೆ ನೌಕರರ ಫೆಡರೇಷನ್ನ ಎಚ್.ಡಿ. ರೇವಪ್ಪ ಹಾಗೂ ಕಾರ್ಮಿಕ ಮುಖಂಡರಾದ ವೆಂಕಟರಮಣಪ್ಪ, ಎ. ಸೋಮಣ್ಣ, ಜಗದೀಶ ಕೆ.ಆರ್., ಆರ್.ಎಫ್. ಕವಳಿಕಾಯಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-24-194780241

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.