ಹುಬ್ಬಳ್ಳಿ: ಸಾಂಗಲಿ- ಬೆಳಗಾವಿ- ಹುಬ್ಬಳ್ಳಿ- ತುಮಕೂರು ಮಾರ್ಗದ ಮೂಲಕವೇ ಮುಂಬೈ- ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸುವಂತೆ ಮಾಡುವುದೊಂದಿಗೆ ಪ್ರಾದೇಶಿಕ ಅಸಮತೋಲನ ನಿವಾರಿಸಬೇಕು ಎಂದು ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ವಿನಂತಿಸಿದ್ದಾರೆ.

‘ಪುಣೆ- ಸಾಂಗಲಿ- ಬೆಳಗಾವಿ- ಹುಬ್ಬಳ್ಳಿ- ತುಮಕೂರು ಮಾರ್ಗವು ಈಚೆಗೆ ಡಬ್ಲಿಂಗ್ ಹಾಗೂ ವಿದ್ಯುದೀಕರಣಗೊಂಡಿದ್ದರೂ ಈ ಮಾರ್ಗದಲ್ಲಿ ದಿನಕ್ಕೆ ಕೇವಲ 15 ರೈಲುಗಳು ಸಂಚರಿಸುತ್ತಿವೆ. ಇನ್ನೊಂದೆಡೆ, ಸೋಲಾಪುರ- ಗುಂತಕಲ್- ಧರ್ಮಾವರಂ ಮಾರ್ಗದಲ್ಲಿ 150ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿದ್ದು, ಹೊಸ ರೈಲು ಸೇವೆಗಳನ್ನೂ ಅದೇ ಮಾರ್ಗಕ್ಕೆ ಸೀಮಿತಗೊಳಿಸಲಾಗುತ್ತಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬರೆದ ಮನವಿಯಲ್ಲಿ ಅವರು ತಿಳಿಸಿದ್ದಾರೆ.

‘ಸಾಂಗಲಿ, ಕಿರ್ಲೋಸ್ಕರವಾಡಿ, ಬೆಳಗಾವಿ, ಹುಬಳ್ಳಿ– ಧಾರವಾಡ, ಅರಸೀಕೆರೆ, ಶ್ರವಣಬೆಳಗೊಳ ಮತ್ತು ತುಮಕೂರು ಮುಂತಾದ ಪ್ರಮುಖ ಕೈಗಾರಿಕಾ ಹಾಗೂ ಆರ್ಥಿಕ ನಗರಗಳಿಗೆ ಪ್ರೀಮಿಯಂ ರೈಲು ಸಂಪರ್ಕದ ಅಗತ್ಯ ಹೆಚ್ಚಿದೆ. ಈ ನಗರಗಳಿಗೆ ವಂದೇ ಭಾರತ್ ಸೇವೆ ಲಭ್ಯವಿಲ್ಲದೇ ಇರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ’ ಎಂದು ಮನವರಿಕೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.