ಹುಬ್ಬಳ್ಳಿ: ‘ಪಶ್ಚಿಮ ಘಟ್ಟದ ನದಿಕಣಿವೆಗಳ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಸಮಗ್ರ ಯೋಜನೆ ಪ್ರಕಟಿಸಬೇಕು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಸ್ಥಳ ಸಮೀಕ್ಷೆ ನಡೆಸಿದ ಕೇಂದ್ರ ವನ್ಯಜೀವಿ ಮಂಡಳಿ ತಜ್ಞರ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸಬೇಕು’ ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಆಗ್ರಹಿಸಿದರು.

‘ಶರಾವತಿ ಕೊಳ್ಳ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅವಕಾಶ ನೀಡಬಾರದು. ಯೋಜನೆಯಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕೇಂದ್ರ ವನ್ಯಜೀವಿ ಮಂಡಳಿ ವಿಜ್ಞಾನಿಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ. ಹೀಗಿದ್ದರೂ ರಾಜ್ಯ ಸರ್ಕಾರವು ಹಠಕ್ಕೆ ಬಿದ್ದು ಯೋಜನೆ ಅನುಷ್ಠಾನಕ್ಕೆ ಮುಂದಾಗುತ್ತಿದೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆಗಳು ಪಶ್ಚಿಮ ಘಟ್ಟಕ್ಕೆ ಮಾರಕವಾಗಿದ್ದು, ವಿಸ್ತೃತಾ ಯೋಜನಾ ವರದಿ ತಯಾರಿಕೆಗೆ ತಡೆ ನೀಡಬೇಕು. ಪಶ್ಚಿಮ ಘಟ್ಟದಲ್ಲಿ ನದಿ ತಿರುವು ಯೋಜನೆಗಳು ಜಾರಿಯಾದರೆ ಅರಣ್ಯ ನಾಶವಾಗುತ್ತದೆ. ಭೂಕುಸಿತ ಸಂಭವಿಸುತ್ತದೆ. ರೈತರು, ಮೀನುಗಾರರು ನಿರಾಶ್ರಿತರಾಗುವರು’ ಎಂದರು.‘ಪಶ್ಚಿಮ ಘಟ್ಟದ ಪ್ರಾಮುಖ್ಯ ಮತ್ತು ನದಿಗಳ ಕೊಡುಗೆಗಳ ಬಗ್ಗೆ ಬಯಲುಸೀಮೆ ಜನರಿಗೆ ಸಮಗ್ರ ಮಾಹಿತಿ ನೀಡುತ್ತೇವೆ. ಹುಬ್ಬಳ್ಳಿ ಯಲ್ಲಿ ಸ್ವರ್ಣವಲ್ಲೀ ಸ್ವಾಮೀಜಿ ನೇತೃತ್ವದಲ್ಲಿ ಶೀಘ್ರವೇ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು. ಏಪ್ರಿಲ್ 20ರಂದು ಶಿರಸಿಯಲ್ಲಿ ಸಭೆ ನಡೆಸಿ ವಿಜ್ಞಾನಿಗಳ ಅಭಿಪ್ರಾಯ ಪಡೆಯಲಾಗುವುದು’ ಎಂದರು.

ವಿಜ್ಞಾನಿಗಳ, ಸಮಿತಿಗಳ ವರದಿ ಮೀರಿ ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ಮುಂದಾದರೆ, ಕೋರ್ಟ್ ಮೊರೆ ಹೋಗುತ್ತೇವೆ

ಬಸವರಾಜ ಪಾಟೀಲ, ಅಧ್ಯಕ್ಷ, ಸ್ವಾಭಿಮಾನ ಆಂದೋಲನ ಸಮಿತಿ

ಉತ್ತರ ಕನ್ನಡ ಜಿಲ್ಲೆ ಧಾರಣಾ ಸಾಮರ್ಥ್ಯ ಕಳೆದುಕೊಂಡಿದೆ. ಯೋಜನೆ ಅನುಷ್ಠಾನಕ್ಕೆ ಅವಕಾಶ ಇಲ್ಲ. ಸರ್ಕಾರವೇ ಕಾನೂನು ಉಲ್ಲಂಘಿಸುತ್ತಿರುವುದು ಅಕ್ಷಮ್ಯ
ಅನಂತ ಹೆಗಡೆ ಆಶೀಸರ, ಅಧ್ಯಕ್ಷ, ಬೇಡ್ತಿ ಅಘನಾಶಿನಿ ಸಂರಕ್ಷಣಾ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.