ಬೆಂಗಳೂರು: ಮಲೆನಾಡು, ಕರಾವಳಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಶಾಲಾ– ಕಾಲೇಜು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಿ, ಸಂಶೋಧನೆ ಮತ್ತಿತರ ಚಟುವಟಿಕೆಯತ್ತ ಸೆಳೆಯುವ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಬೃಹತ್ ವಿಜ್ಞಾನ ಕೇಂದ್ರವೊಂದು ಸ್ಥಾಪನೆಗೊಳ್ಳಲಿದೆ.

ಇಸ್ರೊದ ಬಾಹ್ಯಾಕಾಶ ವಿಜ್ಞಾನಿ ಹಾಗೂ ‘ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ’ಯ ಕುಲಪತಿಯೂ ಆಗಿರುವ ಡಾ.ಬಿ.ಎನ್.ಸುರೇಶ್ ಮತ್ತು ಸಮಾನ ಮನಸ್ಕರ ಪ್ರಯತ್ನದಿಂದ ಮಲೆನಾಡು ಭಾಗದಲ್ಲಿ ‘ಶ್ರೀ ಶೃಂಗೇರಿ ವಿಜ್ಞಾನ ಕೇಂದ್ರ’ ಅಸ್ತಿತ್ವಕ್ಕೆ ಬರಲಿದೆ.

‘ರಾಜ್ಯದ ಇತರ ಭಾಗಗಳಿಗಿಂತ ಮಲೆನಾಡು ಮತ್ತು ಕರಾವಳಿ ಪ್ರದೇಶದ ಕೆಲ ಜಿಲ್ಲೆಗಳಲ್ಲಿ ವಿಜ್ಞಾನ ಶಿಕ್ಷಣ, ಸಂಶೋಧನೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಕೊಂಚ ಹಿಂದುಳಿದಿದೆ. ಇದಕ್ಕೆ ಮುಖ್ಯ ಕಾರಣ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉಡುಪಿ ಮತ್ತು ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳಿಲ್ಲ. ಆದ ಕಾರಣ ಶೃಂಗೇರಿಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದು ಡಾ.ಬಿ.ಎನ್.ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೃಂಗೇರಿಯಲ್ಲಿ ಶ್ರೀ ಶಾರದಾ ಪೀಠ ವತಿಯಿಂದ ನಡೆಯುತ್ತಿರುವ ಜೆಸಿಬಿಎಂ ಕಾಲೇಜಿನ ಆವರಣದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 3 ಎಕರೆ 20 ಗುಂಟೆ ಜಮೀನನ್ನು ನೀಡಲು ಕರ್ನಾಟಕ ಸರ್ಕಾರವನ್ನು ವಿನಂತಿಸಿದ್ದೇವೆ. ಶೈಕ್ಷಣಿಕ ಉದ್ದೇಶ ಮತ್ತು ಲಾಭ ರಹಿತವಾದ ಕಾರಣ ತಾಲ್ಲೂಕು ಮತ್ತು ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಲು ಯಾವ ಅಭ್ಯಂತರ ಇಲ್ಲ ಎಂದು ಸೂಚಿಸಿದ್ದಾರೆ. ಇದಕ್ಕಾಗಿ ಅಂತಿಮ ಆದೇಶ ಹೊರಡಿಸಬೇಕಾಗಿದೆ. ಈ ಆದೇಶ ಆಗದ ಹೊರತು ನಿರ್ಮಾಣ ಕಾರ್ಯ ಆರಂಭಿಸಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳು ತ್ವರಿತ ಗತಿಯಲ್ಲಿ ಒಪ್ಪಿಗೆ ನೀಡಿದರೆ, ವಿಜ್ಞಾನ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಗುತ್ತದೆ’ ಎಂದು ಹೇಳಿದರು.

‘ಶೃಂಗೇರಿ ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಸಾಂಸ್ಕೃತಿಕ ರಾಜಧಾನಿ. ಸದಾ ಜೀವಂತಿಕೆಯಿಂದ ಕೂಡಿರುವ ಪಟ್ಟಣ. ಆಧ್ಯಾತ್ಮಿಕ ಮತ್ತು ತತ್ವಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆಗಳು ವರ್ಷವಿಡೀ ನಡೆಯುತ್ತಿರುತ್ತವೆ. ವರ್ಷಕ್ಕೆ 40 ರಿಂದ 45 ಲಕ್ಷ ಯಾತ್ರಿಗಳು ಭೇಟಿ ನೀಡುತ್ತಾರೆ. ಆದರೆ, ಸುತ್ತಮುತ್ತಲಿನ ತಾಲ್ಲೂಕು ಮತ್ತು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ವಿಜ್ಞಾನದ ನಂಟು ಕಡಿಮೆಯೇ. ಆ ಕೊರತೆ ನೀಗಿಸಲು ಶೃಂಗೇರಿಯೇ ಸೂಕ್ತ’ ಎನ್ನುವ ಅಭಿಪ್ರಾಯ ಅವರದು.

‘ಈ ಕಾರ್ಯಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಕೇಳಿಲ್ಲ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ಮೂಲಕ ಹಣ ಪಡೆಯಲಾಗುತ್ತಿದೆ. ಕೇಂದ್ರ ಸರ್ಕಾರ ಮತ್ತು ಖಾಸಗಿ ವಲಯದ ಪ್ರಮುಖ ಸಂಸ್ಥೆಗಳು ಈ ಯೋಜನೆಗೆ ಹಣ ನೀಡಲು ಮುಂದೆ ಬಂದಿವೆ. ನಮಗೆ 33 ವರ್ಷಕ್ಕೆ ಲೀಸ್ ಆಧಾರದಲ್ಲಿ ಭೂಮಿ ನೀಡಲು ಸರ್ಕಾರದ ಅನುಮತಿ ಬೇಕು. ಅದಕ್ಕೆ ರಿಯಾಯ್ತಿ ದರದಲ್ಲಿ ಶುಲ್ಕ ಪಾವತಿಗೆ ಅವಕಾಶ ನೀಡಬೇಕು. ಇದು ಬಡ ಮಧ್ಯಮ ವರ್ಗದ ಮಕ್ಕಳಿಗ ಅನುಕೂಲ ಆಗುವ ಯೋಜನೆ ’ ಎಂದು ಮನವಿ ಮಾಡಿದರು.

ಯೋಜನೆ ವೆಚ್ಚ: ₹53.15 ಕೋಟಿ

ಮೊದಲ ಹಂತದ ವೆಚ್ಚ:₹15.38 ಕೋಟಿ

ನಿರ್ಮಾಣದ ಅವಧಿ: ನಾಲ್ಕು ವರ್ಷ

ವಿಜ್ಞಾನ ಕೇಂದ್ರದಲ್ಲಿ ಏನೇನಿರಲಿವೆ?

ಸೈನ್ಸ್ ಹಾಲ್ (ವಿಜ್ಞಾನದ ಮೂಲಭೂತ ಅಂಶಗಳು)

ಪ್ರದರ್ಶನ ಭವನ (ವಿಜ್ಞಾನದ ಈಗಿನ ವಿದ್ಯಮಾನಗಳ ಪ್ರದರ್ಶನ)

ವಿಜ್ಞಾನ ವಸ್ತು ಪ್ರದರ್ಶನ ಕೊಠಡಿ

ವಿಜ್ಞಾನ–ವಿನೋದ

ಸೈನ್ಸ್ ಗಾರ್ಡನ್ (ಚಿಣ್ಣರಿಗೆ ವಿಜ್ಞಾನದ ಮೂಲಕ ಮಾಡಿ ಕಲಿ )

ವಿಜ್ಞಾನ ಮತ್ತು ತಂತ್ರಜ್ಞಾನ ಗ್ಯಾಲರಿ (ಬಾಹ್ಯಾಕಾಶ ಅಣು ಇಂಧನ ರಕ್ಷಣೆ ಜೈವಿಕ ತಂತ್ರಜ್ಞಾನ ಔಷಧ ಐಟಿ ಮುಂತಾದವುಗಳ ಗ್ಯಾಲರಿ)

ಕಿರು ತಾರಾಲಯ

ಬಾಹ್ಯಾಕಾಶದಲ್ಲಿ ಗ್ರಹ–ತಾರೆಗಳ ಆಸಕ್ತಿದಾಯಕ ವಿದ್ಯಮಾನಗಳ ವೀಕ್ಷಣೆಗೆ ವೀಕ್ಷಣಾಲಯ (ಅಬ್ಸರ್ವೇಟರಿ)

3 ಡಿ ಪ್ರದರ್ಶನಗಳ ಹಾಲ್

ವಿಜ್ಞಾನಗಳ ಚಿತ್ರಗಳ ಪ್ರದರ್ಶನ ಮತ್ತು ಉಪನ್ಯಾಸಕ್ಕಾಗಿ ಕೊಠಡಿ

ಮಕ್ಕಳಿಗಾಗಿ ವಿಜ್ಞಾನದ ಪ್ರಾಜೆಕ್ಟ್ ಹಾಲ್

ಬಿ.ಎನ್.ಸುರೇಶ್ ಅವರು ಇಸ್ರೊದ ತಿರುವನಂತಪುರ ಕೇಂದ್ರದಲ್ಲಿ ನಿರ್ದೇಶಕರಾಗಿದ್ದರು. ಉದ್ದೇಶಿತ ಮಾನವ ಸಹಿತ ‘ಗಗನಯಾನ’ ಮಿಷನ್ನ ಕ್ಯಾಪ್ಸೂಲ್ (ಕೋಶ) ತಯಾರಿಕೆಯಲ್ಲಿ ಇವರ ಪಾತ್ರ ಮಹತ್ವದ್ದು. ಸದ್ಯ ಇವರು ‘ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ’ಯ ಕುಲಪತಿಯೂ ಆಗಿದ್ದಾರೆ. ಇವರು ಶಂಗೇರಿಯ ಸಮೀಪದ ಗ್ರಾಮದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.