ಹುಣಸೂರು: ರಾಜ್ಯದ ಎಲ್ಲ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಲ್ಲಿ 24 ಗಂಟೆಯೂ ಸೇವೆ ಸಿಗಲಿದೆ. ಜನರಿಗೆ ಸೇವೆ ಕಲ್ಪಿಸಲು ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ನಗರದ ಬೈಪಾಸ್ ರಸ್ತೆಯ ಹೈಟೆಕ್ ಆಸ್ಪತ್ರೆಯ ಕಟ್ಟಡದ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಮಾತನಾಡಿದರು.

‘ನಗರದಲ್ಲಿ ₹ 31.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಡಿ.ಡಿ.ಅರಸು ಹೈಟೆಕ್ ಆಸ್ಪತ್ರೆಗೆ ಆಧುನಿಕ ಯಂತ್ರೋಪಕರಣ ಸೌಲಭ್ಯ ಕಲ್ಪಿಸಿ, ಮೂರು ತಿಂಗಳಲ್ಲಿ ಮುಖ್ಯಮಂತ್ರಿ ಸೇವೆಗೆ ಸಮರ್ಪಿಸಲಿದ್ದಾರೆ. ಹಿಂದೆ ಶಾಸಕರಾಗಿದ್ದ ಎಚ್.ಪಿ.ಮಂಜುನಾಥ್ ಅವರ ಮನವಿ ಮೇರೆಗೆ ಮಂಜೂರಾದ 100 ಹಾಸಿಗೆಯ ಹೈಟೆಕ್ ಆಸ್ಪತ್ರೆ ಬಾಕಿ ಕಾಮಗಾರಿ ಹಾಗೂ ಉಪಕರಣ ಖರೀದಿಗೆ ₹ 9.5 ಕೋಟಿ ಅನುದಾನ ಅವಶ್ಯವಿತ್ತು. ಈ ಬಗ್ಗೆ ಮಂಜುನಾಥ್ ನನ್ನ ಮೇಲೆ ಒತ್ತಡ ಹಾಕಿದ್ದರು. ಅದರಂತೆ ಅನುದಾನ ಬಿಡುಗಡೆಯಾಗಿ ಈಗ ಕಟ್ಟಡ ಪೂರ್ಣಗೊಂಡಿದೆ’ ಎಂದರು.

₹1.5 ಕೋಟಿ ಬೇಡಿಕೆ: ಆಸ್ಪತ್ರೆಯ ಕೆಲ ಕಾಮಗಾರಿ ಬಾಕಿ ಇದ್ದು, ಅಗತ್ಯ ಆಧುನಿಕ ಯಂತ್ರೋಪಕರಣ ಖರೀದಿಗೆ ₹ 1.5 ಕೋಟಿ ಅನುದಾನದ ಬೇಡಿಕೆ ಇದ್ದು, ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯ ಉಪಕರಣಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.

ಎಂಆರ್ಐ ಸೌಲಭ್ಯ: ಹೈಟೆಕ್ ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್, ಅಲ್ಟ್ರಾ ಸೌಂಡ್ ಸೇರಿದಂತೆ ಆಧುನಿಕ ಸೌಲಭ್ಯ ಕಲ್ಪಿಸಲಾಗುವುದು. ವ್ಯವಸ್ಥಿತ ಲ್ಯಾಬ್, ಶವಾಗಾರ ಸೇರಿದಂತೆ ಎಲ್ಲ ವಿಭಾಗಗಳನ್ನು ಆರಂಭಿಸಲಾಗುತ್ತಿದೆ. ಡಯಾಲಿಸಿಸ್ ಘಟಕ, ತಾಯಿ ಮತ್ತು ಮಕ್ಕಳ ವಿಭಾಗವೂ ಇಲ್ಲಿದೆ ಎಂದರು.

ರಾಜ್ಯದ ಎಲ್ಲಾ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಲ್ಲಿ 24 ಗಂಟೆ ಸೇವೆ ಕಲ್ಪಿಸಲು ಅನುಕೂಲವಾಗುವಂತೆ ಇಬ್ಬರು ಪ್ರಸೂತಿ ತಜ್ಞರು, ಫಿಜಿಷಿಯನ್ ಸೇರಿದಂತೆ ಅಗತ್ಯ ವೈದ್ಯರನ್ನು ನೇಮಿಸಲಾಗುವುದು. ಈಗಾಗಲೇ ರಾಜ್ಯದ 145 ತಾಲ್ಲೂಕು ಆಸ್ಪತ್ರೆಗಳಿಗೆ ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ ಎಂದು ವಿವರಿಸಿದರು.

ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅನುದಾನ ಬಿಡುಗಡೆ ಮಾಡಿದ್ದಕ್ಕೆ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಹಳೇ ಆಸ್ಪತ್ರೆಯನ್ನು ತಾಯಿ ಮತ್ತು ಮಗುವಿನ ಆಸ್ಪತ್ರೆಯನ್ನಾಗಿ ಪರಿವರ್ತಿಸುವಂತೆ ಹಾಗೂ ಆಸ್ಪತ್ರೆಯ ಬಾಕಿ ಕಾಮಗಾರಿಗಾಗಿ ₹ 1.5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಗ್ಯಾರಂಟಿ ಯೋಜನೆ ರಾಜ್ಯ ಘಟಕದ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ಆರೋಗ್ಯ ಇಲಾಖೆ ವಿಭಾಗೀಯ ಸಹ ನಿರ್ದೇಶಕ ಡಾ.ಪ್ರಕಾಶ್ ಪುರಾಣಿಕ್, ಪೌರಾಯುಕ್ತೆ ಮಾನಸ, ಹುಡಾ ಅಧ್ಯಕ್ಷ ಎಚ್.ಪಿ.ಅಮರ್ನಾಥ್, ಡಿಎಚ್ಒ ಡಾ.ಕುಮಾರಸ್ವಾಮಿ, ಟಿಎಚ್ಒ ಡಾ. ದರ್ಶನ್, ಆಡಳಿತಾಧಿಕಾರಿ ಡಾ.ಮಹದೇವಸ್ವಾಮಿ, ಡಾ.ಉಮೇಶ್, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ರವಿಪ್ರಸನ್ನ, ಪ್ರೇಮಕುಮಾರ್, ದೇವರಾಜ್, ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಜಯರಾಮೇಗೌಡ, ಮುಖಂಡರಾದ ರಾಘು, ಪುಟ್ಟರಾಜು, ಚಿಕ್ಕಸ್ವಾಮಿ, ಸುರೇಶ್, ಶಾಂತ, ಫೈಸಲ್, ದರ್ಶನ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-38-1718975820

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.