ಶ್ರೀರಂಗಪಟ್ಟಣ: ‘ಮೈಸೂರು ಸಂಸ್ಥಾನದ ನವಾಬ ಆಗಿದ್ದ ಹೈದರ್ ಅಲಿ ತನ್ನ ರಾಜ್ಯದಲ್ಲಿ ಗೋ ಹತ್ಯೆಯನ್ನು ನಿಷೇಧಿಸಿದ್ದ’ ಎಂದು ನಿವೃತ್ತ ನ್ಯಾಯಾಧೀಶ ವಸಂತ ಮುಳಸಾವಳಗಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಮುಸ್ಲಿಂ ಸೌಹಾರ್ದ ಒಕ್ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನವೀನ್ ಸೂರಿಂಜೆ ಅವರ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಹಿಂದೂಗಳು ಬಹುಸಂಖ್ಯಾತರಾಗಿದ್ದ ಕಾರಣ ಅವರ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಗೋಹತ್ಯೆಯನ್ನು ನಿಷೇಧಿಸಲಾಗಿತ್ತು. ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಕೂಡ ಈ ನಿಯಮ ಜಾರಿಯಲ್ಲಿತ್ತು’ ಎಂದರು.

‘ಮೂರನೇ ಆಂಗ್ಲೋ – ಮೈಸೂರು ಯುದ್ಧದಲ್ಲಿ ಟಿಪ್ಪು ಸೋತಾಗ ದೇವಾಲಯಗಳನ್ನು ಒತ್ತೆ ಇಡುವಂತೆ ಬ್ರಿಟಿಷರು ಪ್ರಸ್ತಾಪ ಇಟ್ಟಿದ್ದರು. ಆದರೆ ಅದನ್ನು ಟಿಪ್ಪು ನಿರಾಕರಿಸಿ ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಟ್ಟನು. ರೈತರಿಗೆ ತಕಾವಿ ಸಾಲ, ಹೊಸ ಬೆಳೆಗಳ ಪರಿಚಯ, ಮದ್ಯ ಮತ್ತು ಜೂಜು ನಿಷೇಧ, ಮಲಬಾರ್ನಲ್ಲಿ ಮಹಿಳೆಯರು ಮೇಲು ವಸ್ತ್ರ ಧರಿಸುವಂತೆ ಕಾನೂನು ಮಾಡಿದ್ದು ಟಿಪ್ಪು ಸುಲ್ತಾನ್’ ಎಂದು ಹೇಳಿದರು.

ಹಿರಿಯ ವೈದ್ಯ ಡಾ.ಬಿ. ಸುಜಯಕುಮಾರ್ ಮಾತನಾಡಿ, ‘ಜನರು ಹೈದರ್ ಮತ್ತು ಟಿಪ್ಪು ಸುಲ್ತಾನ್ ಆಡಳಿತದ ಬಗ್ಗೆ ವಿಶ್ವಾಸ ಇಟ್ಟಿದ್ದರು. ಹೈದರ್ ಮತ್ತು ಟಿಪ್ಪು ಆಡಳಿತ ಕೇಂದ್ರವಾದ ಶ್ರೀರಂಗಪಟ್ಟಣದಲ್ಲಿ ಇದುವರೆಗೆ ಒಂದೇ ಒಂದು ಕೋಮು ಗಲಭೆ ನಡೆದಿಲ್ ’ ಎಂದರು.

ಕೃತಿಯ ಲೇಖಕ ನವೀನ್ ಸೂರಿಂಜೆ ಪ್ರಾಸ್ತಾವಿಕ ಮಾತುಗಳಾಡಿದರು. ‘ಸಾಕಷ್ಟು ಪುಸ್ತಕಗಳನ್ನು ಪರಾಮರ್ಶನ ಮಾಡಿ ಕರಾವಳಿಯ ಚರಿತ್ರೆಯಲ್ಲಿ ಹೈದರ್ ಮತ್ತು ಟಿಪ್ಪು ಸುಲ್ತಾನ್’ ಕೃತಿಯನ್ನು ಬರೆದಿದ್ದೇನೆ ’ ಎಂದು ಹೇಳಿದರು.

ಮೈಸೂರು ವಿವಿ ಪ್ರಾಧ್ಯಾಪಕಿ ಪ್ರೊ. ಶಹಸೀನ ಬೇಗಂ, ‘ಹೈದರ್ ಮತ್ತು ಟಿಪ್ಪು ಹಿಂದೂಗಳ ಬಗ್ಗೆ ಗೌರವ ಭಾವನೆ ಹೊಂದಿದ್ದರು. ಟಿಪ್ಪು ಸುಲ್ತಾನ್ ಮಲಬಾರಿನ ಗುರುವಾಯೂರು ದೇಗುಲಕ್ಕೆ 504 ಎಕರೆ ಭೂಮಿಯನ್ನು ಉಂಬಳಿ ನೀಡಿದ್ದ. ಶೃಂಗೇರಿ ಮಠವನ್ನು ಮರಾಠರ ದಾಳಿಯಿಂದ ರಕ್ಷಿಸಿದ್ದ. ನಂಜನಗೂಡಿನ ನಂಜುಂಡೇಶ್ವರ ದೇಗುಲದಲ್ಲಿ ಹಕೀಂ ನಂಜುಂಡ ಶಿವಲಿಂಗವನ್ನು ಸ್ಥಾಪಿಸಿದ್ದನು. ಇಂತಹ ವ್ಯಕ್ತಿಗೆ ಕೋಮುವಾದದ ಬಣ್ಣ ಹಚ್ಚುವುದು ಸರಿಯಲ್ಲ ಎಂದರು.

ಪ್ರಜ್ಞಾವಂತರ ವೇದಿಕೆ ಸಂಚಾಲಕ ಹಾಗೂ ವಕೀಲ ಸಿ.ಎಸ್. ವೆಂಕಟೇಶ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಅಬ್ದುಲ್ಲಾ ಬೇಗ್ ಹಾಗೂ ಭತ್ತ ಮತ್ತು ಮಾವಿನ ತಳಿಗಳ ಸಂರಕ್ಷಕ ಸಯ್ಯದ್ ಘನಿಖಾನ್ ಅವರಿಗೆ ‘ಸೌಹಾರ್ದ ಸೇತು ಸಾಧಕ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.

ಮುಸ್ಲಿಂ ಸೌಹಾರ್ದ ಒಕ್ಕೂಟದ ಗೌರವಾಧ್ಯಕ್ಷ ಪ್ರೊ. ಇಲ್ಯಾಸ್ ಅಹಮದ್ಖಾನ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಬಿ. ಬಸವಲಿಂಗಯ್ಯ, ಸವಿತಾ ಪ. ಮಲ್ಲೇಶ್, ಕಾರ್ಮಿಕ ಮುಖಂಡ ಜಿ. ರಾಮಕೃಷ್ಣ, ಪ್ರೊ. ನಾಜ್ಹಿಯಾ ಕೌಶರ್, ಸಾಹಿತಿ ಕ್ಯಾತನಹಳ್ಳಿ ಚಂದ್ರಣ್ಣ, ಮುಸ್ಲಿಂ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅಪ್ಸರ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-40-1568441556

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.