ತರೀಕೆರೆ: ಪರಿಶಿಷ್ಟ ಜಾತಿಯಲ್ಲಿರುವ 101 ಒಳಜಾತಿಗಳಿಗೆ ಜನಸಂಖ್ಯೆವಾರು ಒಳ ಮೀಸಲು ಜಾರಿಗಾಗಿ ಸುಮಾರು 40 ವರ್ಷಗಳಿಂದ ಹಲವಾರು ಸಂಘಟನೆಗಳು ನಡೆಸಿರುವ ಹೋರಾಟಕ್ಕೆ ಫಲ ಸಿಕ್ಕಿದಂತಾಗಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮಾಜ ಮತ್ತು ವಿವಿಧ ಸಂಘಟನೆಗಳು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಶೋಷಣೆಗೆ ಒಳಗಾಗಿದ್ದ ಮಾದಿಗ ಸಮಾಜದ ವಿದ್ಯಾವಂತರು ಪರಿಶಿಷ್ಟರಲ್ಲೇ ಇರುವ ಪ್ರಬಲ ಜಾತಿಗಳೊಂದಿಗೆ ಪೈಪೋಟಿ ಮಾಡಲಾಗದೆ ನಿರುದ್ಯೋಗಿಗಳಾಗಿ ಬೀದಿ ಅಲೆಯುತ್ತಿದ್ದರು. ಈ ಕುರಿತು ದಲಿತ ಮತ್ತು ಮಾದಿಗ ಸಮಾಜದ ಸಂಘಟನೆಗಳು ನಡೆಸಿದ ಹೋರಾಟದ ಪರಿಣಾಮ 1999ರಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆಯೋಗ ರಚಿಸಿ ವರದಿ ಪಡೆಯಲು ಯೋಜನೆ ರೂಪಿಸಲಾಯಿತು ಎಂದರು.

ಈ ನಡುವೆ ಆಂಧ್ರ ಪ್ರದೇಶದಲ್ಲಿ ಜಾರಿ ಇದ್ದ ಒಳಮೀಸಲಾತಿ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಯಿತು. ಹಲವು ಸುತ್ತಿನ ವಿಚಾರಣೆ ಬಳಿಕ, 2024 ಆಗಸ್ಟ್ 1ರಂದು ಸುಪ್ರೀಂಕೋರ್ಟ್, ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ತೀರ್ಪು ನೀಡಿತು ಎಂದರು.

ಈ ಒಳಮೀಸಲಾತಿಗೆ ಸಂಬಂಧಿಸಿದಂತೆ ರಚಿಸಲಾದ ಎಲ್ಲಾ ಆಯೋಗ ಮತ್ತು ವರದಿಗಳು ಪರಿಶಿಷ್ಟರಲ್ಲಿ ಆಯಾ ಜಾತಿ ಜನಸಂಖ್ಯೆ ಅನುಗುಣವಾಗಿ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳನ್ನು ಪರಿಶೀಲಿಸಿ ಸಂವಿಧಾನದಡಿಯಲ್ಲಿ ಒಳ ಮೀಸಲಾತಿ ನೀಡಬಹುದು ಎಂದು ತಿಳಿಸಿವೆ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ವರಿಷ್ಠರು ಮತ್ತು ಸಚಿವ ಸಂಪುಟದ ಎಲ್ಲಾ ಸಚಿವರು ಹಾಗೂ ಶಾಸಕರ ಸಹಕಾರದಿಂದ ಒಳ ಮೀಸಲಾತಿಯಲ್ಲಿ ಉಂಟಾಗಿದ್ದ ಗೊಂದಲಗಳಿಗೆ ತೆರೆ ಎಳೆದು ಯಾರಿಗೂ ಆನ್ಯಾಯವಾಗದೇ ನ್ಯಾಯ ಒದಗಿಸಿದ್ದಕ್ಕೆ ರಾಜ್ಯ ಮಾದಿಗ ಸಮಾಜದ ಪರವಾಗಿ ಸರ್ಕಾರ ಮತ್ತು ಪಕ್ಷಕ್ಕೆ ಅಭಿನಂದಿಸುತ್ತೇನೆ’ ಎಂದರು.

ಕಾಂಗ್ರೆಸ್ ಮುಖಂಡ ಜಿ.ಜಿ. ತಿಪ್ಪೇಶ್, ಮಹೇಂದ್ರಸ್ವಾಮಿ, ಎಚ್.ಕೆ.ಶೇಖರಪ್ಪ, ಮುಖಂಡರಾದ ಅಣ್ಣಯ್ಯ, ಪ್ರಮೋದ್, ವೈ.ಎಸ್. ಮಂಜಪ್ಪ, ಜಿ.ಟಿ. ರಮೇಶ್, ಬಸವರಾಜು, ಮಂಜಪ್ಪ, ನಾಗೇಶ್, ರಂಗನಾಥ್, ಹರೀಶ್, ಮಂಜಪ್ಪ, ಅಶೋಕ್, ಅಂಜನೇಯ, ಎಸ್.ಕೆ. ರಂಗಪ್ಪ, ಕುಮಾರಪ್ಪ, ರಘು, ಶಿವರಾಜ್, ಎಸ್.ಎನ್. ಸಿದ್ದರಾಮಪ್ಪ, ಗುರುಮೂರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-126-1930553065

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.