ಬೆಂಗಳೂರು: ’ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾರ್ಚ್ 25ರಂದು ಮಾದಿಗ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅಂದೇ ಬೆಳಿಗ್ಗೆ 11ಕ್ಕೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ರ್ಯಾಲಿ ನಡೆಸಲಾಗುವುದು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ತಿಳಿಸಿದರು.

ಒಳಮೀಸಲಾತಿ ಇಲ್ಲದೇ 56,432 ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಲು ಆದೇಶ ಹೊರಡಿಸಿರುವ ಸರ್ಕಾರದ ಕ್ರಮ ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಆರಂಭದಿಂದಲೂ ಒಳಮೀಸಲಾತಿ ಜಾರಿಗೆ ವಿರೋಧಿಸುತ್ತಲೇ ಬಂದಿದ್ಧಾರೆ. ಇದಕ್ಕೆ ವಿಶೇಷ ಸಚಿವ ಸಂಪುಟ ಸಭೆ ಕರೆದು ದೀರ್ಘ ಚರ್ಚೆಯ ಅಗತ್ಯವೂ ಇಲ್ಲ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಎಂದು ನೆಪ ಹೇಳಿ ವಿಳಂಬ ಮಾಡುವ ಬದಲು ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಅಧಿವೇಶನದಲ್ಲಿಯೇ ಒಳ ಮೀಸಲಾತಿ ಜಾರಿ ಮಾಡುವ ಭರವಸೆಯನ್ನು ನೀಡಲಾಗಿತ್ತು. ಆದರೆ ಮೂರು ವರ್ಷ ಆಗುತ್ತಾ ಬಂದರೂ ಇದನ್ನು ಪ್ರಾಮಾಣಿಕವಾಗಿ ಜಾರಿಗೊಳಿಸದೇ ದಲಿತ ಸಮುದಾಯಕ್ಕೆ ಮೋಸ ಮಾಡುತ್ತಿದೆ. ಒಳಮೀಸಲಾತಿ ವಿರೋಧಿಗಳ ಷಡ್ಯಂತ್ರದಿಂದ ಆಗುತ್ತಿರುವ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಕಳೆದ ತಿಂಗಳು ಹೊರಡಿಸಿರುವ ನೇಮಕ ಸುತ್ತೋಲೆ ಹಿಂಪಡೆದು ಒಳಮೀಸಲಾತಿ ಅಳವಡಿಸಿ ಶೇ 15ರಷ್ಟು ಉದ್ಯೋಗ ನೇಮಕ ಮಾಡಲಿ. ವಿಶ್ವವಿದ್ಯಾಲಯ ಒಂದು ಘಟಕವಾಗಿ ನೇಮಕ ಮಾಡುವುದನ್ನು ಕೈ ಬಿಡಿ. ಅಲೆಮಾರಿ, ಅರೆ ಅಲೆಮಾರಿ ಮುದಾಯಗಳಿಗೆ ಶೇ 1ರಷ್ಟು ಪ್ರತ್ಯೇಕ ಮೀಸಲಾತಿ ನೀಡಿ. ಶೇ 56ಕ್ಕೆ ಮೀಸಲಾತಿ ಪ್ರಮಾಣವನ್ನು ಸಂವಿಧಾನದ 9ನೇ ಅನುಸೂಚಿಯಡಿ ಹೆಚ್ಚಿಸಬೇಕು. ನೇರ ನೇಮಕ, ಬ್ಯಾಕ್ ಲಾಗ್, ಬಡ್ತಿ, ಒಳಗುತ್ತಿಗೆ, ಎಸ್ಸಿಎಸ್ಪಿ ಟಿಎಸ್ಪಿ ಸಹಿತ ಎಲ್ಲಾ ಹಂತದಲ್ಲೂ ಒಳಮೀಸಲಾತಿ ಅನುಷ್ಠಾನಗೊಳ್ಳಿಸಬೇಕು ಎಂದು ಹೇಳಿದರು.

ಕರ್ನಾಟಕ ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಶಂಕರಪ್ಪ, ಮಾದಿಗ ಮೀಸಲು ಹೋರಾಟ ಸಮಿತಿಯ ಮಹಾಸಭಾ ಗೌರವಾಧ್ಯಕ್ಷ ಕೇಶವಮೂರ್ತಿ, ವಿಶ್ವ ಜಾಂಬವ ಮಹಾಸಭಾದ ಭೀಮ್ರಾಜ್, ಶ್ರೀರಾಮ್, ಬಿ.ನರಸಪ್ಪ, ಹನುಮಂತಪ್ಪ, ಜೆ.ಸಿ.ಪ್ರಕಾಶ್, ಕೈವಾರ ದೇವರಾಜು, ಶಿವರಾಜ್, ಹುಸೇನಪ್ಪಸ್ವಾಮಿ, ಬಿ.ಆರ್.ಮುನಿರಾಜು ಉಪಸ್ಥಿತರಿದ್ದರು.
.ಒಳಮೀಸಲಾತಿ: ಮಾರ್ಚ್ 24ರಂದು ಬೆಂಗಳೂರು ಚಲೊ.ಪರಿಶಿಷ್ಟ ಪಂಗಡಕ್ಕೂ ಒಳಮೀಸಲಾತಿ ಕಲ್ಪಿಸಿ: ಶಾಂತಾರಾಮ್ ಬುಡ್ನ ಸಿದ್ದಿ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.