ರಾಮನಗರ: ‘ಕಡೆಗೂ ನಮ್ಮ ನಾಯಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಗಳಿಗೆ ಕೂಡಿ ಬಂತು. ಇದಕ್ಕಾಗಿ ಭಗವಂತನಲ್ಲಿ ನಾನು ಪ್ರಾರ್ಥನೆ ಮಾಡುತ್ತಿದ್ದೆ. ಬಕ್ರೀದ್ ಹಬ್ಬದ ದಿನವೇ ಆ ಬೇಡಿಕೆಯನ್ನು ಭಗವಂತ ಈಡೇರಿಸಿದ್ದಾನೆ’ ಎಂದು ಡಿಕೆಶಿ ಆಪ್ತ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸಂತಸ ವ್ಯಕ್ತಪಡಿಸಿದರು.

ಬಕ್ರೀದ್ ಪ್ರಯುಕ್ತ ನಗರದ ಈದ್ಗಾ ಮೈದಾನದಲ್ಲಿ ಗುರುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎಂದು ಪಕ್ಷದ ಲಕ್ಷಾಂತರ ಕಾರ್ಯಕರ್ತರು, ಮುಖಂಡರು ಸಹ ಆಸೆ ಪಟ್ಟಿದ್ದರು. ನಾಯಕತ್ವ ಬದಲಾವಣೆ ಕುರಿತು ನಾನು ಮೌನ ಮುರಿದು ಮಾತಾಡಿದ್ದೆ. ಉಳಿದವರು ಮೌನವಾಗಿಯೇ ಪ್ರಾರ್ಥಿಸಿದ್ದರು’ ಎಂದು ಹೇಳಿದರು.

ಡಾ. ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಒತ್ತಾಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪರಮೇಶ್ವರ್ ಕೂಡಾ ನಮ್ಮ ನಾಯಕರೇ. ಅವರು ಕೇಳುವುದರಲ್ಲಿ ತಪ್ಪೇನಿದೆ? ಅವರೂ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವಕಾಶ ಕೇಳುವುದರಲ್ಲಿ ತಪ್ಪಲ್ಲ. ಅದೇ ರೀತಿ ನಮ್ಮ ಜಿಲ್ಲೆಯವರು ಹಾಗೂ ನಮ್ಮ ನಾಯಕ ಶಿವಕುಮಾರ್ ಅವರಿಗೂ ಅವಕಾಶ ಕೊಡಬೇಕು ಅಂತ ನಾವು ಕೇಳಿದ್ದೆವು. ಅದು ಈಡೇರಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.