ಭಾಲ್ಕಿ: ಭಾಲ್ಕಿಯ ಶಿವಾಜಿ ವೃತ್ತದಲ್ಲಿ ಶಾಸಕ ಈಶ್ವರ ಖಂಡ್ರೆಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಸಕಲ ಮರಾಠಾ ಸಮಾಜ ವತಿಯಿಂದ ಪಾಂಡುರಂಗ ಕಣಜೆ, ಕಿರಣ ಬಿರಾದಾರ ನೇತೃತ್ವದಲ್ಲಿ ಒತ್ತಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ‘ಈಶ್ವರ ಖಂಡ್ರೆ ಎಲ್ಲ ಸಮುದಾಯದವರನ್ನು ಸಮ ದೃಷ್ಟಿಯಿಂದ ನೋಡಿ ಎಲ್ಲರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಪೌರಾಡಳಿತ ಮತ್ತು ಅರಣ್ಯ ಇಲಾಖೆ ಸಚಿವರಾಗಿ ಈಶ್ವರ ಖಂಡ್ರೆ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಸುಮಾರು ₹10 ಸಾವಿರ ಕೋಟಿ ರೂಪಾಯಿ ಮೌಲ್ಯದ 250 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಮರು ವಶಕ್ಕೆ ಪಡೆದಿದ್ದಾರೆ. ಈಶ್ವರ ಖಂಡ್ರೆ ಅವರ ಸೇವಾ ಹಿರಿತನ ಪರಿಗಣಿಸಿ ಡಿಸಿಎಂ ಹುದ್ದೆಗೆ ಪರಿಗಣಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಮುಖರಾದ ಪಾಂಡುರಂಗ ಕಣಜೆ, ಕಿರಣ ಬಿರಾದಾರ, ಚಂದ್ರಕಾಂತ ಬಿರಾದಾರ, ಸತೀಶ ಬಾಮನೆ, ವೆಂಕಟ ತಗರಖೇಡೆ, ಪವನ ಬಿರಾದಾರ, ಗೋರಖ ಶ್ರೀಮಾಳೆ, ಸಂದೀಪ ಮಾನೆ, ರಾಹುಲ್ ಶೆಡೋಳೆ, ಮನೋಜ ಪಾಟೀಲ, ಪ್ರಶಾಂತ ಮಾನಕರಿ, ಸತೀಶ ವಾಡಿಕರ್, ಪ್ರಭಾಕರ ಜೋಳದಾಪ್ಕಾ, ವಿಶಾಲ ಭೋಸ್ಲೆ, ಸಾಯಿನಾಥ ಪಾಟೀಲ, ಅನಿಕೇತ ಶೇರಿಕಾರ, ಪ್ರದೀಪ ಬಿರಾದಾರ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-33-1701368366

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.