ಜಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಯಾವುದೇ ಹೊಸ ಯೋಜನೆಗಳು ಜಾರಿಯಾಗುತ್ತಿಲ್ಲ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಆರೋಪಿಸಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಶನಿವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಗಳೇ ಈಗಲೂ ಮುಂದುವರಿದಿವೆ. ಹೊಸ ಅನುದಾನವನ್ನೂ ತಂದಿಲ್ಲ. ನನ್ನ ಆಡಳಿತಾವಧಿಯಲ್ಲಿ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಬಹುತೇಕ ಪೂರ್ಣವಾಗಿತ್ತು. ಜಿಲ್ಲಾ ಕೇಂದ್ರದಲ್ಲೂ ಕಾಣಸಿಗದ ಎರಡು ಸುಸಜ್ಜಿತ ವಾಲ್ಮೀಕಿ ಭವನಗಳು, ಅಂಬೇಡ್ಕರ್ ಭವನ, ಬಾಬೂಜಿ ಭವನ ಸೇರಿ ಒಟ್ಟು 5 ಸಮುದಾಯ ಭವನಗಳು ಮತ್ತು ಪಟ್ಟಣದಲ್ಲಿ 3 ಬಸ್ ನಿಲ್ದಾಣಗಳನ್ನು ನಿರ್ಮಿಸಿದ್ದೆ. ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದ್ದು ನನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸುತ್ತೇವೆ’ ಎಂದು ಹೇಳಿದರು.

ವಿಧಾನಸಭಾ ಕ್ಷೇತ್ರದ 7 ಪಂಚಾಯಿತಿ ವ್ಯಾಪ್ತಿಯ ಅರಸೀಕೆರೆ ಹಾಗೂ ಉಚ್ಚಂಗಿದುರ್ಗದಲ್ಲಿ ಅಭಿವೃದ್ಧಿ ಸ್ಥಗಿತವಾಗಿದೆ. ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ ಪ್ರಕ್ರಿಯೆ ಗೊಂದಲಗಳ ಗೂಡಾಗಿದೆ ಎಂದು ಆರೋಪಿಸಿದರು.

‘ಪ್ರತಿ 4 ವರ್ಷಕ್ಕೊಮ್ಮೆ ನಡೆಯುವ ಪ್ರಶಿಕ್ಷಣ ಅಭಿಯಾನದಲ್ಲಿ ಕ್ಷೇತ್ರದ 263ಕ್ಕೂ ಅಧಿಕ ಬೂತ್ ಮಟ್ಟದ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿದ್ದು, ಇವರು ಬೂತ್ ಮಟ್ಟದಲ್ಲಿ ಎಲ್ಲ ವರ್ಗದ ಜನರನ್ನು ತಲುಪಿ ಪಕ್ಷ ಸಂಘಟನೆ ಮಾಡಬೇಕು. ಪ್ರಶಿಕ್ಷಣ ವರ್ಗದಲ್ಲಿ ಪಕ್ಷದ ಕಾರ್ಯಸಾಧನೆ, ವಿಸ್ತರಣೆ ದೃಷ್ಟಿಕೋನ, ಸಾಮಾಜಿಕ ಮಾಧ್ಯಮ ಸದ್ಬಳಕೆ, ಸೈದ್ಧಾಂತಿಕ ಅನುಷ್ಠಾನ ಸೇರಿದಂತೆ 7 ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಪಕ್ಷ ಸಂಘಟನೆಗೆ ಎಲ್ಲರೂ ಕಟಿಬದ್ಧರಾಗಬೇಕಿದೆ’ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.

‘ತಾಲ್ಲೂಕಿನಲ್ಲಿ ಕಳೆದ ಬಾರಿ ಬಿಜೆಪಿಗೆ ಅಲ್ಪಮತಗಳಿಂದ ಸೋಲಾಗಿರಬಹುದು. ಆದರೆ ಪಕ್ಷ ಸಂಘಟನೆ ಗಟ್ಟಿಯಾಗಿದೆ. ಕಾರ್ಯಕರ್ತರು ತಳಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು’ ಎಂದು ಮುಖಂಡ ಜಿ.ಎಸ್. ಅನಿತ್ ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ. ಮರುಳಾರಾಧ್ಯ, ಮುಖಂಡರಾದ ಶಿವಕುಮಾರ್, ಎಚ್.ಸಿ ಮಹೇಶ್, ಸೊಕ್ಕೆ ನಾಗರಾಜ್, ಜಯಲಕ್ಷ್ಮಿ, ಬಿಸ್ತುವಳ್ಳಿ ಬಾಬು, ರೇಖಾ, ಗಡಿಮಾಕುಂಟೆ ಸಿದ್ದೇಶ್, ಡಿ.ವಿ ನಾಗಪ್ಪ, ಮುರುಳಿ, ಎಸ್.ಕೆ.ಮಂಜುನಾಥ್, ಶಿವಕುಮಾರ ಸ್ವಾಮಿ, ಧರ್ಮನಾಯ್ಕ, ಸಂಪತ್ ಕುಮಾರ್, ಜೆ.ವಿ.ನಾಗರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-43-804373056

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.