ಜಗಳೂರು: ‘ಶಾಶ್ವತ ಬರಪೀಡಿತ ವೆಂದು ಹೆಸರಾಗಿದ್ದ ಜಗಳೂರು ತಾಲ್ಲೂಕಿಗೆ ತುಂಗಭದ್ರಾ ನದಿಯಿಂದ 57 ಕೆರೆಗಳನ್ನು ತುಂಬಿಸುವ, ಇತಿಹಾಸದ ನೆನಪಿನಲ್ಲುಳಿಯುವ ಮಹತ್ವದ ಯೋಜನೆಯನ್ನು ಕೊಡುಗೆಯಾಗಿ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶೀಘ್ರವೇ ತಾಲ್ಲೂಕಿಗೆ ಕರೆಯಿಸಿ ಬೃಹತ್ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ತಾಲ್ಲೂಕಿನ ಅಸಗೋಡು ಹೊಸೂರು ಗ್ರಾಮದಲ್ಲಿ ಭಾನುವಾರ ಉಪ್ಪಾರ ಸಮಾಜದಿಂದ ಆಯೋಜಿಸಿದ್ದ ಭಗೀರಥ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.

‘2017ರಲ್ಲಿ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಅಂದಿನ ಸಿ.ಎಂ. ಸಿದ್ದರಾಮಯ್ಯ ಅವರು ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಕನಸಿನ ಬಯಲುಸೀಮೆ ಏತ ನೀರಾವರಿ ಯೋಜನೆಯನ್ನು ಘೋಷಿಸಿದ್ದರು. ನಂತರ ಬಜೆಟ್ನಲ್ಲಿ ಸೇರಿಸಿ ಅನುದಾನ ಕಲ್ಪಿಸಿದ್ದರು. ಅಲ್ಲದೇ ಪ್ರಸ್ತುತ ನನ್ನ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಲು ಸಹಕರಿಸಿದೆ. ಪರಿಣಾಮ ಕೆರೆಗಳು ಮೈದುಂಬಿವೆ. ಸಿಎಂ ಅವರನ್ನು ನಾನು ಖುದ್ದು ಆಹ್ವಾನಿಸಿದ್ದು, ಶೀಘ್ರವೇ ಬೃಹತ್ ಸಮಾರಂಭ ಆಯೋಜಿಸಿ ಸಿದ್ದರಾಮಯ್ಯ ಹಾಗೂ ಸಿರಿಗೆರೆ ಶ್ರೀಗಳನ್ನು ಗೌರವಿಸಲಾಗುವುದು’ ಎಂದು ತಿಳಿಸಿದರು.

‘ಅಸಗೋಡು ಭಾಗದ ಮತಗಳು ನನಗೆ ರೋಚಕ ಗೆಲುವು ತಂದು ಕೊಟ್ಟಿದ್ದನ್ನು ಮರೆಯಲಾಗದು. ಅಸಗೋಡು ಜಯಸಿಂಹ ಅವರು ನನ್ನ ರಾಜಕೀಯ ಗುರು. ನನ್ನ ಬೆಳವಣಿಗೆಯಲ್ಲಿ ಅವರ ಪಾತ್ರ ಇದೆ. ಪೌರಾಣಿಕ ಹಿನ್ನೆಲೆಯಿರುವ ಶ್ರಮಿಕ ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತೇನೆ’ ಎಂದು ಹೇಳಿದರು.

ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿದರು.

ಉಪ್ಪಾರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ರಂಗಪ್ಪ ಜಮ್ಮಾಪುರ, ಮುಖಂಡರಾದ ಗಿಡ್ಡನಕಟ್ಟೆ ಕಾಂತರಾಜ್ , ಯು.ಎಂ. ಗುರುಸ್ವಾಮಿ, ದೇವಿಕೆರೆ ಗುರುಸಿದ್ದಪ್ಪ, ನಾಗೇಂದ್ರಪ್ಪ, ಎಸ್. ಬಂಗಾರಪ್ಪ, ಈರಮ್ಮ, ನರಸಿಂಹಪ್ಪ, ಶಿವಣ್ಣ, ಲೋಕಪ್ಪ, ತಿಪ್ಪೇಸ್ವಾಮಿ ಗಿಡ್ಡನಕಟ್ಟೆ, ಪಲ್ಲಾಗಟ್ಟೆ ಶೇಖರಪ್ಪ, ಮಹಮ್ಮದ್ ಗೌಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-43-1138882377

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.