ನವದೆಹಲಿ: ಬೆಂಗಳೂರಿನ ಜಮ್ನಾಲಾಲ್ ಬಜಾಜ್ ಟ್ರಸ್ಟ್ನ ಭೂ ವಿವಾದವನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ಪೀಠಕ್ಕೆ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಹಾಗೂ ಸತೀಶ್ ಚಂದ್ರ ಶರ್ಮಾ ಅವರ ಪೀಠವು ವರ್ಗಾಯಿಸಿದೆ.

ಹೈಕೋರ್ಟ್ ಆದೇಶ ಪ್ರಶ್ನಿಸಿ ಟ್ರಸ್ಟ್ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ‘ಸತ್ಯ ಹಾಗೂ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ನ್ಯಾಯದ ಹಿತಾಸಕ್ತಿಗಾಗಿ ಈ ತೀರ್ಮಾನಕ್ಕೆ ಬಂದಿದ್ದೇವೆ’ ಎಂದು ತಿಳಿಸಿದೆ.

ಭೂ ಸುಧಾರಣಾ ಕಾಯ್ದೆಯ ಮಿತಿಗಿಂತಲೂ ಹೆಚ್ಚುವರಿ ಜಮೀನನ್ನು ಹೊಂದಿದೆ ಎಂಬ ಕಾರಣಕ್ಕೆ ದಾಖಲಾಗಿದ್ದ ಪ್ರಕರಣದಲ್ಲಿ ಭೂ ನ್ಯಾಯಮಂಡಳಿ, ‘ಟ್ರಸ್ಟ್ ತನ್ನ ಸುಪರ್ದಿಯಲ್ಲಿರುವ ಹೆಚ್ಚುವರಿ ಜಮೀನನ್ನು ಸರ್ಕಾರಕ್ಕೆ ಮರಳಿಸಬೇಕು’ ಎಂದು 2010ರಲ್ಲಿ ಆದೇಶ ನೀಡಿತ್ತು. ಇದನ್ನು ಟ್ರಸ್ಟ್ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ‘ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಭೂ ನ್ಯಾಯಮಂಡಳಿಯೇ ಪ್ರಕರಣವನ್ನು ಮರುಪರಿಶೀಲಿಸಿ ತೀರ್ಪು ನೀಡಬೇಕು’ ಎಂದು 2014ರ ಮಾರ್ಚ್ 3ರಂದು ಆದೇಶಿಸಿತ್ತು.

ಈ ಆದೇಶದ ಅನುಸಾರ ವಿಚಾರಣೆ ನಡೆಸಿದ್ದ ಎಂ.ಕೆ.ಜಗದೀಶ್ ನೇತೃತ್ವದ ಭೂ ನ್ಯಾಯಮಂಡಳಿ, ‘ಕಾಯ್ದೆಯ ಮಿತಿಗಿಂತ 354 ಎಕರೆ ಹೆಚ್ಚುವರಿ ಜಮೀನನ್ನು ಟ್ರಸ್ಟ್ ಹೊಂದಿದೆ. ಇದನ್ನು ಸರ್ಕಾರ ಮರಳಿ ತನ್ನ ವಶಕ್ಕೆ ಪಡೆಯಬೇಕು’ ಎಂದು 2017ರ ನವೆಂಬರ್ 28ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್ ಪುನಃ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಭೂ ನ್ಯಾಯಮಂಡಳಿಯ ಆದೇಶ ರದ್ದುಪಡಿಸಿ 2021ರ ಜೂನ್ 30ರಂದು ತೀರ್ಪು ನೀಡಿತ್ತು.

ಮಾಗಡಿ ಮುಖ್ಯ ರಸ್ತೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ‘ಮೆಗಾ ಕೃಷಿ ಮಾರುಕಟ್ಟೆ’ ನಿರ್ಮಾಣಕ್ಕಾಗಿ 272 ಎಕರೆಗೂ ಹೆಚ್ಚಿನ ವಿಶಾಲ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ 2025ರಲ್ಲಿ ಎತ್ತಿಹಿಡಿದಿತ್ತು. ಭೂ ಸ್ವಾಧೀನ ಕ್ರಮವನ್ನು ಪ್ರಶ್ನಿಸಿ, ‘ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್’ ಅಧ್ಯಕ್ಷ ರಾಹುಲ್ ಬಜಾಜ್ ಸೇರಿದಂತೆ ಒಟ್ಟು ಎಂಟು ಜನ ಟ್ರಸ್ಟಿಗಳು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳನ್ನು ವಜಾಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.