ಕೊಪ್ಪಳ: ‘ರಾಜಕೀಯ ಪುನರ್ಜನ್ಮ ನೀಡಿದ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದಲೇ 2028ರಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವೆ. ಹಿಟ್ನಾಳ ಕುಟುಂಬ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಡುವಿನ ಕಿತ್ತಾಟದಿಂದ ಬಿಜೆಪಿಗೇ ಹೆಚ್ಚು ಲಾಭವಾಗಲಿದೆ’ ಎಂದು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.

ತಾಲ್ಲೂಕಿನ ಇರಕಲ್ಲಗಡ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಅನ್ಸಾರಿ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಹುಡುಕಿಕೊಂಡು ಯಾರೂ ನನ್ನನ್ನು ಗಂಗಾವತಿಗೆ ಕರೆದುಕೊಂಡು ಬಂದಿಲ್ಲ. ಪರಣ್ಣ ಮುನವಳ್ಳಿ ಹಿಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾಗ ಅವರ ಪರ ಎರಡು ಬಾರಿ ಪ್ರಚಾರ ಮಾಡಿದ್ದೇನೆ. ಗಂಗಾವತಿ ಹಾಗೂ ಬಳ್ಳಾರಿಗೆ ಹೆಚ್ಚು ವ್ಯತ್ಯಾಸವೇನಿಲ್ಲ. ಎರಡೂ ಕಡೆ ಜನರ ಪ್ರೀತಿ, ವಿಶ್ವಾಸದಿಂದಲೇ ಕೆಲಸ ಮಾಡಿದ್ದೇನೆ. ಅನ್ಸಾರಿ ಯಾವ ಪಕ್ಷಕ್ಕಾದರೂ ಸೇರಿಕೊಳ್ಳಲಿ’ ಎಂದರು.

‘ಹಿಂದೆ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಕಪ್ಪುಪಟ್ಟಿ ಕಟ್ಟಿದ್ದರು. ಈಗ ಕೊಪ್ಪಳವೂ ಅದೇ ರೀತಿ ಆಗುತ್ತಿರುವುದು ಸತ್ಯ’ ಎಂದರು.

’ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹಾಗೂ ಪಡೆದುಕೊಳ್ಳಲು ಡಿ.ಕೆ. ಶಿವಕುಮಾರ್ ಗುದ್ದಾಟ ನಡೆಸಿದ್ದಾರೆ. ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಹಾಳಾಗಿದ್ದು ಮುಂದಿನ ದಿನಗಳು ಇನ್ನಷ್ಟು ದುರ್ಬರವಾಗಿರಲಿವೆ. ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಶಾಂತಿ ಹಾಳು ಮಾಡುತ್ತಿದೆ. ಮುಸ್ಲಿಮರ ಮತಗಳ ವಿಭಜನೆ ತಡೆಯಲು ಓಲೈಕೆ ಮಾಡುತ್ತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.