2026ರ ಮಾರ್ಚ್ 3ರಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಬಾರಿಯ ಚಂದ್ರಗ್ರಹಣ ಭಾರತದಲ್ಲಿ ಭಾಗಶಃ ಗೋಚರಿಸಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 3:21ಕ್ಕೆ ಚಂದ್ರ ಗ್ರಹಣ ಆರಂಭವಾಗಿ ಸಂಜೆ 6:46 ಕ್ಕೆ ಕೊನೆಗೊಳ್ಳಲಿದೆ.
.ಕೇತುಗ್ರಸ್ತ ಮಹಾ ಚಂದ್ರಗ್ರಹಣ: ವೃಷಭ ರಾಶಿಯವರಿಗೆ ಕೌಟುಂಬಿಕ ಕಲಹ ಸಾಧ್ಯತೆ.
ಸೂರ್ಯಾಸ್ಥದ ಸಮೀಪ ನಡೆಯುವ ಖಗೋಳದ ಈ ಬೆಳವಣಿಗೆಯ ಅವಧಿಯಲ್ಲಿ ಚಂದ್ರನು ಕೆಂಪು ಬಣ್ಣದಿಂದ ಗೋಚರಿಸಲಿದ್ದಾನೆ. ಭೂಮಿಯ ಸಂಪೂರ್ಣ ಛಾಯೆ ಚಂದ್ರನ ಮೇಲೆ ಬೀಳಲಿದೆ. ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಮಾತ್ರ ಪೂರ್ಣ ಚಂದ್ರಗ್ರಹಣ ಗೋಚರಿಸುತ್ತದೆ. ಉಳಿದ ಭಾಗದಲ್ಲಿ ಭಾಗಶಃ ಗೋಚರಿಸಲಿದೆ. ಗ್ರಹಣದ ಅಂತಿಮ ಭಾಗ ಮಾತ್ರ ಬೆಂಗಳೂರಿನಲ್ಲಿ ಕಾಣಿಸಲಿದೆ.

ಎಲ್ಲಿ ಗ್ರಹಣ ವೀಕ್ಷಿಸಬಹುದು?

ಗ್ರಹಣದ ನೇರ ವೀಕ್ಷಣೆಗೆ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದ ಸಿ.ವಿ. ವಿಶ್ವೇಶ್ವರ ಸಭಾಂಗಣದಲ್ಲಿ ಮಧ್ಯಾಹ್ನ 3ರಿಂದ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಚಂದ್ರಗ್ರಹಣಕ್ಕೆ ಸಂಬಂಧಿಸಿದ ಚಿತ್ರಗಳು ಹಾಗೂ ಪೂರಕ ಮಾಹಿತಿಯನ್ನು ಒದಗಿಸುವ ವ್ಯವಸ್ಥೆಯನ್ನು ತಾರಾಲಯ ಮಾಡಿದೆ. ಮನೆಯಲ್ಲಿ ಕುಳಿತು ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಗ್ರಹಣದ ಕುರಿತ ವಿವರಣೆಯು ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಇರಲಿದೆ.
.ಚಂದ್ರಗ್ರಹಣ: ಮಧ್ಯಾಹ್ನ 12ಕ್ಕೆ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳು ಬಂದ್.
ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ಸಂಜೆ 6:20 ರಿಂದ 6:30ರ ನಡುವೆ ಚಂದ್ರಗ್ರಹಣ ಗೋಚರಿಸಲಿದೆ.

ಎಲ್ಲೆಲ್ಲಿ ಪೂರ್ಣ ಚಂದ್ರಗ್ರಹಣ ಗೋಚರವಾಗಲಿದೆ

ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ನಲ್ಲಿ ಗೋಚರಿಸಲಿದೆ. ಜತೆಗೆ ಜೈಪುರ, ಬೆಂಗಳೂರು, ಚೆನ್ನೈ, ಲಖನೌ, ದೆಹಲಿ ಮತ್ತು ಮುಂಬೈನಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.