ರಾಜರಾಜೇಶ್ವರಿನಗರ: ‘ಜೆಡಿಎಸ್ ದೋಣಿ ಮುಳುಗುತ್ತಿದೆ. ರಕ್ಷಣೆಗಾಗಿ ಎನ್ಡಿಎ ಸೇರಿ ಕೇಂದ್ರ ಮಂತ್ರಿಯಾಗಿರುವ ಎಚ್.ಡಿ. ಕುಮಾರಸ್ವಾಮಿ ಕೆಲವೇ ದಿನಗಳಲ್ಲಿ ಮೈತ್ರಿಕೂಟ ತೊರೆಯಲಿದ್ದಾರೆ’ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದರು.

ತಾವರೆಕೆರೆ ಹೋಬಳಿಯ ಚಂದ್ರಪ್ಪ ಸರ್ಕಲ್ನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಗೆ ಹಾಜರಾಗುವ ಜೆಡಿಎಸ್ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದರು.

ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ವಿಧಾನಸೌಧಕ್ಕೆ ಬಾರದೇ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲೇ ಕುಳಿತು ಆಡಳಿತ ನಡೆಸಿದ್ದರಿಂದ ಶಾಸಕರಿಗೆ ಕ್ಷೇತ್ರದ ಸಮಸ್ಯೆ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಕೊನೆಗೆ ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದರಿಂದ ಅಭಿವೃದ್ಧಿ ನಡೆಸಲು ಸಾಧ್ಯವಾಯಿತು ಎಂದು ಹೇಳಿದರು.

ಗಾಯಕಿ ಸಂಗೀತ ಕಟ್ಟಿ ಮಾತನಾಡಿ, ‘ಹೆಣ್ಣಿಗೆ ಎಲ್ಲಿ ಬೆಲೆ ಸಿಗುತ್ತದೆಯೋ ಅಲ್ಲಿ ಲಕ್ಷ್ಮೀ ನೆಲಸಿರುತ್ತಾರೆ. ಅಂತಹ ಕಾಯಕದಲ್ಲಿ ಎಸ್.ಟಿ. ಸೋಮಶೇಖರ್ ತೊಡಗಿಸಿಕೊಂಡಿದ್ದಾರೆ’ ಎಂದರು.

ನಿಶಾಂತ್ ಸೋಮಶೇಖರ್, ಹಾಪ್ಕಾಮ್ಸ್ ಮಾಜಿ ನಿರ್ದೇಶಕ ಎಂ. ಜೈ ಕುಮಾರ್, ಎಪಿಎಂಸಿ ಮಾಜಿ ನಿರ್ದೇಶಕ ಕೆಂಚಪ್ಪ, ಬಮೂಲ್ ನಿರ್ದೇಶಕ ಕೃಷ್ಣಯ್ಯ, ದೊಡ್ಡೇರಿ ಉಮಾಶಂಕರ್, ತಾವರೆಕೆರೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿನೋದ ನರಸಿಂಹಮೂರ್ತಿ, ಟಿ.ಎಲ್.ಕೆಂಪೇಗೌಡ, ಕೆಂಚನಪುರ ತಿಮ್ಮೇಗೌಡ, ಎಚ್.ಶ್ರೀಧರ್, ಲಕ್ಷ್ಮೀ ಪ್ರಭು, ಗಿಲ್ಕಾ ನಾಯಕ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-4-548126305

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.