ಕಲಬುರಗಿ: ‘ಕಳೆದ ಐದು ದಶಕ ಗಳಿಂದ ಸಕ್ರಿಯ ರಾಜಕಾರಣ ದಲ್ಲಿರುವ ನಾನು ಅಹಿಂದ ಚಳವಳಿ, ರೈತ ಹೋರಾಟ, ಪರಿಸರ ಹೋರಾಟ, ಕಾರ್ಮಿಕ ಚಳವಳಿ ಹಾಗೂ ವಿವಿಧ ನೀರಾವರಿ ಹೋರಾಟಗಳಲ್ಲಿ ತೊಡಗಿಸಿ ಕೊಂಡಿದ್ದೇನೆ. ಈ ಬಾರಿಯ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಕೊಡಬೇಕು’ ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ ಅವರು ಒತ್ತಾಯಿಸಿದ್ದಾರೆ.

‘ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಬಂದಾಗ ಏಕೈಕ ಲಿಂಗಾಯತ ಸಮುದಾಯದವನಾಗಿ ರಾಜ್ಯದಾದ್ಯಂತ ಅವರೊಂದಿಗೆ ಸುತ್ತಾಡಿ ಅಹಿಂದ ಚಳವಳಿ ಕಟ್ಟಿದ್ದೇನೆ. 8 ಜನ ಶಾಸಕರು ಜೆಡಿಎಸ್ ಬಿಟ್ಟು ಬಂದಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ವಿಧಾನಸಭೆ ಸದಸ್ಯತ್ವ ರದ್ದಾದರೂ ಚಿಂತಿಸದೇ ನೈತಿಕವಾಗಿ ಸಿದ್ದರಾಮಯ್ಯ ಅವರೊಟ್ಟಿಗೆ ಬೆನ್ನೆಲುಬಾಗಿ ನಿಂತಿದ್ದೆ. ನನ್ನೊಬ್ಬನನ್ನು ಬಿಟ್ಟು ಉಳಿದೆಲ್ಲ ಶಾಸಕರು ಸಚಿವರಾಗಿದ್ದಾರೆ. ಇದುವರೆಗೆ ಸಚಿವ ಸ್ಥಾನದಿಂದ ವಂಚಿತನಾಗಿರುವ ನನಗೆ ಸಿದ್ದರಾಮಯ್ಯ ಅವರೇ ಮುತುವರ್ಜಿ ವಹಿಸಿ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಲು ಕಾಳಜಿ ವಹಿಸಬೇಕು. ಆಳಂದ ಕ್ಷೇತ್ರದಿಂದ ಈವರೆಗೆ ಯಾರೊಬ್ಬರೂ ಸಚಿವರಾಗಿಲ್ಲ. ಆ ಬರವನ್ನು ನೀಗಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು ನನ್ನ ಆಳಂದ ಕ್ಷೇತ್ರದಲ್ಲಿ ವೋಟ್ ಚೋರಿ ಮಾಡಲು ರೂಪಿಸಿದ್ದ ವ್ಯವಸ್ಥಿತ ಕುತಂತ್ರವನ್ನು ನಾನು ಬಯಲಿಗೆಳೆದೆ. ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಈ ಪ್ರಕರಣವನ್ನು ದೇಶದ ಮುಂದಿಟ್ಟು ಹೋರಾಟಕ್ಕೆ ನಾಂದಿ ಹಾಡಿದರು. ಇಡೀ ದೇಶದಲ್ಲೇ ವೋಟ್ ಚೋರಿ ಸಂಬಂಧ ಚಾರ್ಜ್ಶೀಟ್ ದಾಖಲಾದ ಪ್ರಕರಣ ಇದೊಂದೇ ಆಗಿದೆ. ಹೀಗಾಗಿ, ನನಗೆ ಸಚಿವ ಸ್ಥಾನ ನೀಡುವಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಸಹಮತಿ ಸೂಚಿಸುತ್ತಾರೆ ಎಂಬ ಅಚಲ ವಿಶ್ವಾಸವಿದೆ’ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-4-1129615336

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.