ಕಲಬುರಗಿ: ಭಾರತ ಸಂವಿಧಾನದಲ್ಲಿ ಅಗತ್ಯ ತಿದ್ದುಪಡಿ ತಂದು ಸಂಪೂರ್ಣ ದೇಶಿ ಗೋವಂಶಕ್ಕೆ ‘ರಾಷ್ಟ್ರಮಾತಾ’ ಮಾನ್ಯತೆ ನೀಡಬೇಕು ಎಂದು ಗೋ ಮಾತಾ ಸನ್ಮಾನ ಅಭಿಯಾನ ಸದಸ್ಯರು ಮತ್ತು ಗೋ ಭಕ್ತರು ಒತ್ತಾಯಿಸಿದರು.

ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರಗಳನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿ ಅವರು ಮಾತನಾಡಿದರು.

‘ದೇಶದ ಅನೇಕ ಸಾಧು ಸಂತರು ಕೈಗೊಂಡ ನಿರ್ಣಯದಂತೆ ಗೋಸಂತತಿ ರಕ್ಷಣೆಗಾಗಿ ಎಲ್ಲಾ ವಯೋಮಾನದ ಗೋವಂಶದ ವಧೆ ಮತ್ತು ದೈಹಿಕ ಹಾನಿಯನ್ನು ನಿಷೇಧಿಸಬೇಕು ಹಾಗೂ ಗೋಹತ್ಯೆಯನ್ನು ಸಂಜ್ಞೇಯ ಮತ್ತು ಜಾಮೀನು ರಹಿತ ಅಪರಾಧಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ದೇಶದ 5,400 ತಹಶೀಲ್ ಕಚೇರಿಯಲ್ಲಿ ಏಕಕಾಲದಲ್ಲಿ ಮನವಿ ಪತ್ರ ಸಲ್ಲಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಗೋವುಗಳ ಸಂರಕ್ಷಣೆಗಾಗಿ ಸ್ವತಂತ್ರ ಸಚಿವಾಲಯ ಸ್ಥಾಪಿಸಬೇಕು. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪಂಚಗವ್ಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಕಡ್ಡಾಯವಾಗಿ ಸ್ಥಾಪಿಸಬೇಕು. ಅಲ್ಲದೆ ರಾಸಾಯನಿಕ ಗೊಬ್ಬರಗಳನ್ನು ತ್ಯಜಿಸಿ ಗೋ-ಆಧಾರಿತ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ರೈತರಿಗೆ ವಿಶೇಷ ಸಬ್ಸಿಡಿ ಮತ್ತು ಆರ್ಥಿಕ ನೆರವು ಮತ್ತು ಗೋ ಆಧರಿತ ವಸ್ತುಗಳಿಗೂ ಮಾರುಕಟ್ಟೆಯಲ್ಲಿ ಸಬ್ಸಿಡಿ ನೀಡಬೇಕು’ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

‘ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕೈಬಿಟ್ಟ ಗಂಡು ದನಗಳಿಗಾಗಿ ನಂದಿಶಾಲೆಯನ್ನು ಸ್ಥಾಪಿಸಬೇಕು. ಗೋಶಾಲೆಗಳನ್ನು ಮನರೇಗಾ ಯೋಜನೆಯೊಂದಿಗೆ ಸಂಪರ್ಕಿ ಸಬೇಕು. ಗೋವಿನ ಜನಸಂಖ್ಯೆಯ ಆಧಾರದ ಮೇಲೆ, ಗೋಶಾಲೆಗಳಿಗೆ ನಿಗದಿತ ಪ್ರಮಾಣದ ವಿದ್ಯುತ್ ಅನ್ನು ಉಚಿತವಾಗಿ ನೀಡಬೇಕು ಅಥವಾ ವಿದ್ಯುತ್ ಬಿಲ್ಗಳಲ್ಲಿ ನಿಗದಿತ ರಿಯಾಯಿತಿ ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಪಂಚಗವ್ಯ ಆಸ್ಪತ್ರೆಗಳನ್ನು ಸ್ಥಾಪಿಸಬೇಕು. ಮಧ್ಯಾಹ್ನದ ಊಟದಲ್ಲಿ, ದೇಸಿ ಹಸುಗಳ ತಾಜಾ ಹಾಲು ಅಥವಾ ದೇಸಿ ಹಸುವಿನ ಹಾಲಿನ ಪುಡಿಯನ್ನು ಸೇರಿಸಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 90 ದಿನಗಳ ಒಳಗಾಗಿ ನಮ್ಮ ಬೇಡಿಕೆಗಳಿಗೆ ಈಡೇರಿಕೆಯ ಭರವಸೆ ನೀಡದಿದ್ದರೆ ಮತ್ತೆ ಜು. 27ರಂದು ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಇದಕ್ಕೂ ಮೊದಲು ನಗರದ ಸೂಪರ್ ಮಾರ್ಕೆಟ್ನಲ್ಲಿನ ಮಾಯಾಮಂದಿರದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹುಮನಾಬಾದ್ ಬೇಸ್, ಕಿರಾಣಾ ಬಜಾರ್, ಮಾರ್ಕೆಟ್ ಚೌಕ, ಕಪಡಾ ಬಜಾರ್, ಬಿಇಒ ಕಚೇರಿ ಮೂಲಕ ಜನತಾ ಬಜಾರ್ನಿಂದ ತಹಶೀಲ್ದಾರ ಕಚೇರಿ ತಲುಪಿತು.

ಮೆರವಣಿಗೆಯಲ್ಲಿ ಡಿಜೆ, ಹಲಗೆ ವಾದನಕ್ಕೆ ಕೆಲವರು ಹೆಜ್ಜೆ ಹಾಕಿದರೆ ಇನ್ನು ಕೆಲವರು ಭಜನೆ ಮೂಲಕ ದೇವರ ಸ್ಮರಣೆ ಮಾಡಿದರು. ಹಲವೆಡೆ ವರ್ತಕರು ಗೋಮಾತೆಯ ಭಾವಚಿತ್ರಕ್ಕೆ ಪುಷ್ಪ ವೃಷ್ಟಿಗೈದು ಸ್ವಾಗತಿಸಿದರು. ಯುವಕರು ‘ಗೋ ಹತ್ಯೆ ನಿಲ್ಲಿಸಿ’ ಹಾಗೂ ‘ಗೋಮಾತೆಗೆ ಜಯವಾಗಲಿ’ ಎಂಬ ಘೋಷಣೆ ಕೂಗಿದರು. ಗೋಹತ್ಯೆ ನಿಷೇಧಿಸಿ ಸಾರ್ವಜನಿಕರ ಸಹಿ ಸಂಗ್ರಹದ ಪ್ರತಿ ಹಾಗೂ ಮನವಿ ಪತ್ರಗಳನ್ನು ತಲೆ ಮೇಲೆ ಹೊತ್ತ ಯುವಕ ಹಾಗೂ ಯುವತಿಯರು ಎಲ್ಲರ ಗಮನ ಸೆಳೆದರು.

ಚಿದಾನಂದ ಹಿರೇಮಠ, ಅಮೃತ ತೇಲಿಕರ್, ನಾಗೇಶ ಭುಜಂಗೆ, ಬಸವಾಮೃತ ಗೋರಕ್ಷ ಶರಣರು, ಸಂತೋಷ ಚತ್ರಬಂದಿ, ಲಕ್ಷೀಕಾಂತ ಸ್ವಾಧಿ, ಸಿದ್ದು ಹಿರೇಮಠ, ಸಿದ್ದು ಬಿರಾದಾರ, ಸುಧೀಂದ್ರ ದೇಶಪಾಂಡೆ, ಅನೀಲ ಕಾಂಬ್ಳೆ, ಕಿರಣ್ ಬೋನಾಲ, ಪ್ರಭು ಪಾಟೀಲ, ಶಶಿಕಾಂತ ದೀಕ್ಷಿತ್, ಮಹಾದೇವಿ ಪಾಟೀಲ ಇತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-34-1315787331

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.