ಕಲಬುರಗಿ: ‘ವಿಜಯಲಕ್ಷ್ಮಿ ವೃದ್ಧಾಶ್ರಮ’ ಹೆಸರಿನಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಫೈಲ್ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ₹30 ಲಕ್ಷ ಬಿಲ್ ಎತ್ತಿಹಾಕಿದ್ದು ಈ ಕುರಿತು ಕ್ರಮ ಕೈಗೊಳ್ಳಲು ಒತ್ತಾಯಿಸಿ ಜಿ.ಪಂ ಸಿಇಒ ಅವರಿಗೆ ದೂರು ಸಲ್ಲಿಸಿದ್ದೇನೆ’ ಎಂದು ನವ ಕರ್ನಾಟಕ ಎಂ.ಆರ್.ಡಬ್ಲ್ಯು, ವಿಆರ್ಡಬ್ಲ್ಯು, ಯುಆರ್ಡಬ್ಲ್ಯು ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಪಿ. ಮೇಟಿ ಹೇಳಿದರು.

‘ಲಿಂಗರಾಜ ಅವರು ಸೇಡಂ ಪಟ್ಟಣದ ಭವಾನಿ ನಗರದಲ್ಲಿ ಈ ವೃದ್ಧಾಶ್ರಮ ನಡೆಸುತ್ತಿರುವುದಾಗಿ ತೋರಿಸಿ ಸರ್ಕಾರದಿಂದ 2023–24 ಹಾಗೂ 2024–25 ಸಾಲಿನಲ್ಲಿ ಅನುದಾನ ಪಡೆದುಕೊಂಡಿದ್ದು, ಈ ಕುರಿತು ಗಂಭೀರ ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ‘ವಿಜಯಲಕ್ಷ್ಮಿ ವೃದ್ಧಾಶ್ರಮ’ ಸಂಸ್ಥೆಯ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದೇನೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ದೃಷ್ಟಿ ವಿಕಲಚೇತನರ ನಕಲಿ ಪ್ರಮಾಣ ಪತ್ರ ಸಲ್ಲಿಸಿ ಕೆಪಿಎಸ್ಸಿ ಮೂಲಕ ಅಕ್ರಮವಾಗಿ ಆಯ್ಕೆಗೊಂಡು ಪ್ರಸ್ತುತ ದೇವದುರ್ಗ ತಾಲ್ಲೂಕಿನ ತಹಶೀಲ್ದಾರ್ ಆಗಿರುವ ನಾಗಮ್ಮ ತಾರಫೈಲ್ ಹಾಗೂ ಬಸವಕಲ್ಯಾಣ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತ ಆಗಿರುವ ಮಲ್ಲಿಕಾರ್ಜುನ ಶರಣಪ್ಪ ತಾರಫೈಲ್ ವಿರುದ್ಧವೂ ಕಾನೂನು ಕ್ರಮಕ್ಕೆ ಒತ್ತಾಯಿಸಿ ಈ ಹಿಂದೆ ನಾನು ಪತ್ರಿಕಾಗೋಷ್ಠಿ ನಡೆಸಿದ್ದೆ. ಬಳಿಕ ಈ ಅಧಿಕಾರಿಗಳ ಸಹೋದರನಾಗಿರುವ ಲಿಂಗರಾಜ ತಾರಫೈಲ್ ತನ್ನ ಅಕ್ಕನ ಗಂಡ ತಿಮ್ಮಣ್ಣ ಕವಳೇಕರ್ ಮೂಲಕ ನನಗೆ ಮತ್ತು ನನ್ನ ತಾಯಿಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ಕೂಡ ನೀಡಿದ್ದೇನೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-34-1958922297

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.