ಕಲಬುರಗಿ: ‘ಪೊಲೀಸ್ ಹುದ್ದೆಯು ಬರೀ ಸಂಬಳ ತರುವ ಹುದ್ದೆಯಲ್ಲ. ಠಾಣೆಗೆ ನೊಂದುಕೊಂಡು ಬರುವ ಅಸಹಾಯಕರ ಕಣ್ಣೀರು ಒರೆಸುವ ಕೆಲಸವನ್ನು ಪೊಲೀಸರು ಮಾಡಬೇಕು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಪೊಲೀಸ್ ಸಿಬ್ಬಂದಿಗೆ ಸಲಹೆ ನೀಡಿದರು.

ನಗರದ ಹೊರವಲಯದ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಮಧುಕರ ಶೆಟ್ಟಿ ಕವಾಯತು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ 97 ಪಿಎಸ್ಐಗಳ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ವೀಕ್ಷಿಸಿ, ಉತ್ತಮ ಸಾಧನೆ ಮಾಡಿದವರಿಗೆ ಮುಖ್ಯಮಂತ್ರಿಗಳ, ಗೃಹಸಚಿವರ ಹಾಗೂ ಡಿಜಿ, ಐಜಿಪಿಯವರ ಟ್ರೋಫಿಗಳನ್ನು ವಿತರಿಸಿ ಅವರು ಮಾತನಾಡಿದರು.

ಪೊಲೀಸರದು ಉದ್ಯೋಗವಲ್ಲ ಜನ ಸೇವೆಯಾಗಿದೆ. ಎಲ್ಲರಿಗೂ ಖಾಕಿ ಹಾಕಲು ಅವಕಾಶವಿಲ್ಲ. ಸ್ವತಃ ಮೂರು ಬಾರಿ ಗೃಹ ಸಚಿವನಾಗಿದ್ದರೂ ನನಗೆ ಈ ಅವಕಾಶ ಇಲ್ಲ. ಠಾಣೆಗೆ ಬರುವ ನೊಂದವರಿಗೆ ಸಮಯೋಚಿತ ಪರಿಹಾರ ಕಂಡುಕೊಳ್ಳುವ ಕೆಲಸ ನಿಮ್ಮಿಂದಾಗಬೇಕು. ತುಳಿತಕ್ಕೊಳಗಾದಂತಹ ಬಡವರು, ಅಲ್ಪಸಂಖ್ಯಾತರು, ಪರಿಶಿಷ್ಟ ಸಮದಾಯದ ಜನರನ್ನು ಮುಖ್ಯವಾಹಿನಿಗೆ ತರಲು ನೆರವಾಗುವ ಮೂಲಕ ಪೊಲೀಸರು ಸೇವಾ ಧರ್ಮ ಪಾಲಿಸಬೇಕು ಎಂದು ಹೇಳಿದರು.

‘ಆಧುನಿಕ ತಂತ್ರಜ್ಞಾನದ ಯುಗದಲ್ಲಿ ವಂಚನೆ ಪ್ರಕರಣಗಳು ಹೊಸ ರೂಪಗಳನ್ನು ಪಡೆದುಕೊಂಡಿದ್ದು, ಅದಕ್ಕೆ ತಕ್ಕಂತೆ ಡ್ರೋನ್, ಸಿಸಿಟಿವಿ, ಬಾಡಿ ಕ್ಯಾಮೆರಾಗಳನ್ನು ಪೊಲೀಸರಿಗೆ ಒದಗಿಸಿದ್ದೇವೆ. 52 ವರ್ಷದ ಹಳೆಯದ ಸ್ಲೌಚ್ ಹ್ಯಾಟ್ ಬದಲಾಗಿ ಪಿ ಕ್ಯಾಪ್ ನೀಡಿ ಪೊಲೀಸರ ಮನೋಸ್ಥೈರ್ಯ ಹೆಚ್ಚಿಸಲಾಗಿದೆ. ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ ಹೆಚ್ಚುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ನೀತಿ ಜಾರಿಗೆ ತರಲಾಗಿದೆ’ ಎಂದರು.

ದೇಶದಲ್ಲಿ ಕರ್ನಾಟಕ ಪೊಲೀಸ್ಗೆ ಮಹತ್ವದ ಸ್ಥಾನವಿದೆ. ಇಂಡಿಯಾ ಜಸ್ಟಿಸ್ ಸಂಸ್ಥೆ ಸಲ್ಲಿಸಿದ ವರದಿಯ ಪ್ರಕಾರ ರಾಜ್ಯದ ಪೊಲೀಸ್ ಇಲಾಖೆ ನ್ಯಾಯ ಒದಗಿಸುವಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಯಚೂರು ಜಿಲ್ಲೆಯ ಕವಿತಾಳ ಠಾಣೆಯನ್ನು ದೇಶದಲ್ಲಿ ಮೂರನೇ ಅತ್ಯುತ್ತಮ ಪೊಲೀಸ್ ಠಾಣೆ ಅಂತ ಗುರುತಿಸಿದ್ದಾರೆ. ರಾಜ್ಯದ ಸಾವಿರಕ್ಕೂ ಅಧಿಕ ಪೊಲೀಸ್ ಠಾಣೆಗಳು ಕವಿತಾಳ ಠಾಣೆಯಂತೆ ಆಗಬೇಕು ಎಂದು ಆಶಿಸಿದರು.

‘ಕಳೆದ ಮೂರು ವರ್ಷಗಳಲ್ಲಿ ಶಾಂತಿ ನೆಲೆಸಿದೆ. ಪೊಲೀಸರು ನೋವು, ಟೀಕೆಗಳನ್ನು ಅನುಭವಿಸಿದರೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೊರರಾಜ್ಯದ ದರೋಡೆಕೋರರು ಕಳ್ಳತನ ಮಾಡಿದ ಶೇ 99 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ಬೀದರ್ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳು ವಿದೇಶದಲ್ಲಿ ನೆಲೆಸಿರುವ ಶಂಕೆ ವ್ಯಕ್ತವಾಗಿದೆ. ಅವರನ್ನೂ ಹಿಡಿದು ತರುವ ಪ್ರಯತ್ನಗಳು ನಡೆದಿವೆ’ ಎಂದು ಹೇಳಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರಬೇತಿ) ದೇವಜ್ಯೋತಿ ರೇ, ಈಶಾನ್ಯ ವಲಯದ ಐಜಿಪಿ ಶಾಂತನು ಸಿನ್ಹಾ, ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು ಶ್ರೀನಿವಾಸುಲು, ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್, ಬೀದರ್ ಎಸ್ಪಿ ಪ್ರದೀಪ ಗುಂಟಿ, ಡಿವೈಎಸ್ಪಿ ರಾಜಣ್ಣ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲ ಪುಟ್ಟಮಾದಯ್ಯ ಸಂಸ್ಥೆಯ ವರದಿ ವಾಚನ ಮಾಡಿದರು. ಸುಮಾರು 2 ಗಂಟೆ ನಡೆದ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳು ಬಿಸಿಲಿನಲ್ಲಿಯೇ ನಿಂತಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-34-1050470868

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.