ಕಲಬುರಗಿ: ‘ರಾಜ್ಯ ಸರ್ಕಾರವು ಶಾಲಾ ವಿದ್ಯಾರ್ಥಿಗಳ ತೃತೀಯ ಭಾಷೆಯ ಕಲಿಕೆಯನ್ನು ಬೋಧನೆಗೆ ಮಾತ್ರ ಸೀಮಿತಗೊಳಿಸಿ ಅಂಕಗಳನ್ನು ಪರಿಗಣಿಸದೇ ಕೇವಲ ಗ್ರೇಡ್ ನೀಡುವ ನಿರ್ಧಾರ ತೆಗೆದುಕೊಂಡಿರುವುದು ಖಂಡನೀಯ’ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನೊಬ್ಬ ಕನ್ನಡಿಗನಾಗಿದ್ದು, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದಿದ್ದೇನೆ. ತೃತೀಯ ಭಾಷೆ ಎಂದರೆ ಕೇವಲ ಹಿಂದಿ ಅಲ್ಲ. ಗಡಿ ಭಾಗಗಳಲ್ಲಿ ತೃತೀಯ ಭಾಷೆಗಳಾಗಿ ಕನ್ನಡ, ಸಂಸ್ಕೃತ, ಮರಾಠಿ, ತೆಲುಗು, ಉರ್ದು ಭಾಷೆಗಳನ್ನು ಬೋಧಿಸಲಾಗುತ್ತದೆ. ಈ ವಿಷಯಗಳಿಗೆ ಮಹತ್ವ ಇಲ್ಲದಂತೆ ಮಾಡಿ ಎಸ್ಎಸ್ಎಲ್ಸಿ ಪರೀಕ್ಷೆಯ ಅಂಕಗಳನ್ನು 525ಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ’ ಎಂದರು.

‘ತೃತೀಯ ಭಾಷೆ ರದ್ದುಗೊಳಿಸುವುದರಿಂದ ಉದ್ಯೋಗದ ಅವಕಾಶಗಳೂ ಇಲ್ಲದಂತಾಗುತ್ತವೆ. ಈ ಭಾಷೆಗಳನ್ನು ಬೋಧಿಸುವ ಶಿಕ್ಷಕರ ಭವಿಷ್ಯವೇನು? ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲೇ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿರುವುದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಪೋಷಕರಲ್ಲಿ ಗೊಂದಲಕ್ಕೂ ಕಾರಣವಾಗಿದೆ’ ಎಂದರು.

‘ರಾಜ್ಯ ಸರ್ಕಾರವು ಉರ್ದು, ತೆಲುಗು, ಆಂಗ್ಲ ಮಾಧ್ಯಮದ ಶಾಲೆಗಳನ್ನು ನಡೆಸಲು ಅವಕಾಶ ನೀಡಿದೆ. ಆದರೆ ಈ ಶಾಲೆಗಳಲ್ಲಿ ಮಕ್ಕಳು ತೃತೀಯ ಭಾಷೆಯನ್ನಾಗಿ ನಮ್ಮ ರಾಜ್ಯದ ಮಾತೃಭಾಷೆಯಾದ ಕನ್ನಡವನ್ನು ಆಯ್ಕೆ ಮಾಡುತ್ತ ಬಂದಿದ್ದಾರೆ. ಇಂತಹ ಶಾಲೆಗಳಲ್ಲಿ ತೃತೀಯ ಭಾಷೆ ರದ್ದು ಮಾಡಲು ಹೊರಟಿರುವುದು, ಹಿಂದಿ ಭಾಷೆಯ ಮೇಲಿನ ಸಿಟ್ಟಿನಿಂದಾಗಿ ಕನ್ನಡ ಭಾಷೆಯನ್ನೇ ಕೊಲ್ಲಲು ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರದ ನಿರ್ಧಾರದಿಂದ ವಿದ್ಯಾರ್ಥಿಗಳಲ್ಲಿ ಗಂಭೀರತೆ ಕಡಿಮೆಯಾಗುತ್ತದೆ. ಶಿಕ್ಷಕರ ವರ್ಷದ ಪರಿಶ್ರಮ ವ್ಯರ್ಥವಾಗುತ್ತದೆ. ಮೌಲ್ಯಮಾಪನ ವ್ಯವಸ್ಥೆಯೇ ಪ್ರಶ್ನಾರ್ಥಕವಾಗುತ್ತದೆ. ಆದ್ದರಿಂದ ಈ ನೀತಿಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-34-334076712

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.