ಕಲಘಟಗಿ: ತಾಲ್ಲೂಕಿನ ಹುಲ್ಲಂಬಿ ಗ್ರಾಮದ ರೈತರ ಕೃಷಿ ಜಮೀನುಗಳ ವಿಸ್ತೀರ್ಣ ನಿಗದಿಪಡಿಸಿ ಪೋಡಿ ಮಾಡಿಕೊಡುವಂತೆ ಒತ್ತಾಯಿಸಿ ಏ. 20ರಿಂದ ಬೆಂಗಳೂರಿನ ವಿಧಾನಸೌಧ ಮುಂದೆ ಗ್ರಾಮದ ರೈತರೊಂದಿಗೆ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡರಾದ ಸುಭಾಸ ಸುಣಗಾರ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲ್ಲಂಬಿ ಗ್ರಾಮದ ರಿ.ಸ.ನಂ 23 ರ ಕ್ಷೇತ್ರ 59 ಎಕ್ಕರೆ 27 ಗುಂಟೆ ಹಾಗೂ 145 ರ 121 ಎಕ್ಕರೆ 32 ಗುಂಟೆ ಜಮೀನಿಗೆ ಆಕಾರ ನಿಗದಿ ಪಡಿಸಿ ಪೋಡಿ ಮಾಡಿಕೊಡಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ 3 ವರ್ಷ ಮುಗಿಯುತ್ತಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದರು.

ಪೂರ್ವಜರ ಕಾಲದಿಂದ ಜಮೀನು ಉಳುಮೆ ಮಾಡುತ್ತಿದ್ದು ಅವರು ಕೂಡಾ ಅಲೆದಾಡಿ ಸುಸ್ತಾಗಿ 3 ವರ್ಷಗಳ ಹಿಂದೆ ಮಕ್ಕಳು ಕೂಡಾ ಅರ್ಜಿ ಸಲ್ಲಿಸಿದರು ಪ್ರಯೋಜನವಾಗುತ್ತಿಲ್ಲ. ಈಗಾಗಲೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ನೀಡಿದ್ದು ಕಾನೂನು ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದರು ಗಮನಹರಿಸುತ್ತಿಲ್ಲ ಎಂದರು.

ಒಂದು ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು 2025ರ ಡಿಸೆಂಬರ್ನಲ್ಲಿ ನಡೆಸಿದ ಪ್ರತಿಭಟನೆ ವೇಳೆ ಭರವಸೆ ನೀಡಿದ್ದರು. ಇದರಿಂದ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ ಇದುವರೆಗೂ ನಮ್ಮ ಕಡೆ ತಿರುಗಿ ನೋಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ರಾಜ್ಯ ಸರ್ಕಾರವಾದರೂ ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಬೆಂಗಳೂರು ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ಕುಳಿತುಕೊಳ್ಳಲು ಗ್ರಾಮದ ರೈತರೊಂದಿಗೆ ತೆರಳುತ್ತಿದ್ದೇವೆ ಎಂದರು.

ಗ್ರಾಮದ ರೈತರಾದ ಬಸಪ್ಪ ಬಿಸರಳ್ಳಿ, ಸಾದೇವಪ್ಪ ಹೊನ್ನಳಿ, ಶಿವಪ್ಪ ಮಲ್ನಾಡದ, ಸಿದ್ದಯ್ಯ ತಂಬೂರ, ರಾಚಪ್ಪ ಬಿಸರಳ್ಳಿ, ಶಂಕ್ರಪ್ಪ ಸಾಗರ, ನಾಗಪ್ಪ ಶಿಗ್ಗಟ್ಟಿ, ಶಂಕ್ರಪ್ಪ ನಡುವಿನಮನಿ, ಪುಷ್ಪಾ ಬಡಿಗೇರ, ಪಕ್ಕೀರಪ್ಪ ಬಿಸರಳ್ಳಿ,ಮಾದೇವಪ್ಪ ಬಿಸರಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.