ಹಂದಿಗುಂದ: 'ಕಲ್ಯಾಣ ಕರ್ನಾಟಕ ನಿರ್ಮಾಣವಾಗಬೇಕಾದರೆ ಸರ್ಕಾರ ಮದ್ಯಪಾನ ನಿಷೇಧ ಕಾಯ್ದೆ ಜಾರಿಗೆ ತರಬೇಕು’ ಎಂದು ಕುಡಚಿ ಮಾಜಿ ಶಾಸಕ ಪಿ. ರಾಜೀವ್ ಹೇಳಿದರು.

ಅವರು ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನ ಸಭಾಭವನದಲ್ಲಿ ಹಮ್ಮಿಕೊಂಡಿರುವ ಮಧ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿಸಿ ಹಾರೂಗೇರಿ ಯೋಜನಾ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಜಿಲ್ಲಾ ಜನ ಜಾಗೃತಿ ವೇದಿಕೆ ಟ್ರಸ್ಟ್ ಅಥಣಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದೊಂದಿಗೆ 2048ನೇ ಮದ್ಯವರ್ವಜನ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮದ್ಯ ವ್ಯಸನಿಗಳಿಂದ ಪ್ರತಿ ವರ್ಷ ₹45 ಸಾವಿರ ಕೋಟಿ ಅಬಕಾರಿ ಇಲಾಖೆಗೆ ಆದಾಯ ಬರುತ್ತದೆ. ಆದರೆ ಅದೆಷ್ಟೋ ಕುಟುಂಬಗಳು ಕಣ್ಣಿರಿನಲ್ಲಿ ಕೈತೊಳೆಯುತ್ತಿವೆ ಎಂದು ವಿಷಾದಿಸಿದರು.

ಅಥಣಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ನಿರ್ದೇಶಕಿ ನಾಗರತ್ನ ಹೆಗಡೆ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಿಸಲು ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡಲು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಮ್ಮಿಕೊಂಡಿರುವ ನೂತನ ಕಾರ್ಯಕ್ರಮ ವ್ಯಸನಿಗಳ ಬದುಕಿನ ಸಂಜೀವಿನಿ ಆಗಿದೆ ಎಂದು ಹೇಳಿದರು.

ಡಾ ಸಿ.ಬಿ. ಕುಲಿಗೋಡ ಮಾತನಾಡಿದರು. ಯೋಜನಾ ಶಿವರಾಧಿಕಾರಿ ದಿನೇಶ್ ಮರಾಠಿ ಪ್ರಸ್ತಾವಿಕವಾಗಿ ಮಾತನಾಡಿದರು.

ಪ್ರಗತಿಪರ ರೈತ ಗುರುಲಿಂಗಯ್ಯ ಹಿರೇಮಠ ಹಾಗೂ ಶ್ರೀ ಸಿದ್ದೇಶ್ವರ ಮಠದ ಅರ್ಚಕ ಗುರುಲಿಂಗಯ್ಯ ಮಠದ ದಿವ್ಯ ಸಾನಿಧ್ಯ ವಹಿಸಿದ್ದರು. ಅಥಣಿ ಜನಜಾಗೃತಿ ವೇದಿಕೆಯ ಟ್ರಸ್ಟ್ ಅಧ್ಯಕ್ಷ ಅಮರ ದುರ್ಗಣ್ಣವರ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಹೆಗ್ಗಾಣಿ, ರಾಮನಗೌಡ ಪಾಟೀಲ, ಪರಪ್ಪ ಭಂಗಿ, ಮಲ್ಲಿಕಾರ್ಜುನ ಖಾನಗೌಡ, ಮಲ್ಲಿಕಾರ್ಜುನ ತೇಲಿ, ಪುರಸಭೆ ಸದಸ್ಯ ಮಂಗಲಾ ಪನದಿ, ಹನುಮಂತ ಸಣ್ಣಕ್ಕಿನ್ನವರ, ಅನ್ನಪೂರ್ಣ ಎರಡೆತ್ತಿ, ಪದ್ಮಜಿತ ಮೂಡಲಗಿ, ಸಂಗಪ್ಪ ಮಿರ್ಜಿ, ಸಿದ್ದು ಮೂಡಲಗಿ , ಷಣ್ಮುಖ ತೇರದಾಳ, ಶೋಭಾ ಘಂಟಿ, ಎಂ ಎಂ ಅಂದಾನಿ, ಭಾಸ್ಕರ ಎನ್ , ದಿನೇಶ ಮರಾಠಿ, ಉಮೇಶ ಹಡಗಲಿ ,ಕುಮಾರಿ ರಂಜಿತ, ಪಾರ್ವತಿ ಕಳ್ಳಿಮನಿ , ಲಕ್ಷ್ಮೀ ನಾಯಕ ಇದ್ದರು.

ಸುರೇಖಾ ಕೋಳಿ ಪ್ರಾರ್ಥಿಸಿದರು. ನಾರಾಯಣ ಜಿ ಸ್ವಾಗತಿಸಿದರು. ಗುರುನಾಥ ಉಳ್ಳಾಗಡ್ಡಿ ನಿರೂಪಿಸಿದರು. ಸುರೇಖಾ ಕೋಳಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-21-349530417

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.