ಕಂಪ್ಲಿ: ‘ರಾಜ್ಯದ ಗ್ಯಾರಂಟಿಗಳು ಜನರನ್ನು ಸೋಮಾರಿಗಳನ್ನಾಗಿಸಿವೆ ಎಂದು ಆರೋಪಿಸುತ್ತಿದ್ದ ಬಿಜೆಪಿಯವರು ಈಚೆಗೆ ನಡೆದ ಇತರೆ ರಾಜ್ಯಗಳ ಚುನಾವಣೆಯಲ್ಲಿ ಅವುಗಳನ್ನು ನಕಲು ಮಾಡಿ ಗೆಲುವು ಸಾಧಿಸಿದ್ದು, ಅವರಿಗೆ ಮಾನ ಮಾರ್ಯಾದೆ, ನೈತಿಕತೆ ಇದೆಯೇ’ ಎಂದು ಶಾಸಕ ಜೆ.ಎನ್. ಗಣೇಶ್ ಪ್ರಶ್ನಿಸಿದರು.

ಪಟ್ಟಣದ 17ನೇ ವಾರ್ಡ್ ವೀರತ್ ಪೇಟೆಯಲ್ಲಿ ಕೆ.ಕೆ.ಆರ್.ಡಿ.ಬಿ ಅನುದಾನ ₹ 35ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ, ಕಾಂಗ್ರೆಸ್ ಪಕ್ಷದ ಆಡಳಿತ ರೀತಿ ನೀತಿ, ಗ್ಯಾರಂಟಿಗಳಿಂದ ರಾಜ್ಯದಲ್ಲಿ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು, ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಸದ್ಯ ಸಚಿವ ಸಂಪುಟದಲ್ಲಿ ಎರಡು ಸಚಿವ ಸ್ಥಾನ ಖಾಲಿ ಇದ್ದು, ವಿಸ್ತರಣೆಯಾದಲ್ಲಿ ನನಗೆ ಸಚಿವ ಸ್ಥಾನ ದೊರೆಯುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ತಾಲ್ಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ₹ 71.50 ಲಕ್ಷ ವೆಚ್ಚದ ಸಂತೆ ಮಾರುಕಟ್ಟೆ ಬೈಪಾಸ್ ರಸ್ತೆ, ಶ್ರೀರಾಮರಂಗಾಪುರದಲ್ಲಿ ₹ 2.40 ಕೋಟಿ ವೆಚ್ಚದ ನೀರಿನ ಮೇಲ್ತೊಟ್ಟಿ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ಮುಖಂಡರಾದ ಕೆ.ಶ್ರೀನಿವಾಸ ರಾವ್, ಭಟ್ಟ ಪ್ರಸಾದ್, ಸಿ.ಆರ್.ಹನುಮಂತ, ಕೆ.ಮಸ್ತಾನ್ಸಾಬ್, ಮಾಗನೂರು ಬಸವರಾಜ, ಬಿ.ಸಿದ್ದಪ್ಪ, ಬಿ.ನಾರಾಯಣಪ್ಪ, ಡಿ.ಪ್ರಶಾಂತ್, ಜಾಫರ್, ಕೆ.ವೀರೇಶ್, ಎಸ್.ಅನಿಲ್, ಎಮ್ಮಿಗನೂರಿನಲ್ಲಿ ಬಿ.ಸದಾಶಿವಪ್ಪ, ಕನಕಪ್ಪ ಸುಣಗಾರ, ಎಳ್ಳಾರ್ಥಿ ರಾಘವೇಂದ್ರ, ರಾಮಾಂಜಿನಿ, ರಾಜಾಸಾಬ್ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-25-1489817767

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.