ದಕ್ಷಿಣ ಕರ್ನಾಟಕದಲ್ಲಿನ ಮಧ್ಯಮ ಕುಟುಂಬದಲ್ಲಿ ಜನಿಸಿದ ವಿಕಾಸ್ ಮೌರ್ಯ ಅವರಿಗೆ ‘ಅಸ್ಪೃಶ್ಯತೆ’ ಆಚರಣೆಯ ಅನುಭವ ಆಗಿದ್ದು ಅವರು ಸಂಡೂರಿನಲ್ಲಿ ಶಿಕ್ಷಕರಾಗಿದ್ದ ಸಂದರ್ಭದಲ್ಲಿ. ಅವರ ‘ಜಾತಿಯೇ’ ಅವರ ಮೂಲ ಗುರುತು ಎನ್ನುವಂತಾದಾಗ ವಿಚಲಿತರಾದ ವಿಕಾಸ್, ತಮ್ಮ ಅನುಭವಗಳನ್ನೆಲ್ಲ ದಾಖಲಿಸುತ್ತಾ ಹೋದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಆರಾಧಿಸುತ್ತಲೇ ಸಾಗಿದ ವಿಕಾಸ್, ದಲಿತ ಸಂಘರ್ಷ ಸಮಿತಿಯಿಂದಲೂ ಪ್ರಭಾವಿತರಾದರು. ದಲಿತ ಸಾಹಿತ್ಯ ಇದ್ದರೆ ಮಾತ್ರ ಕನ್ನಡ ಸಾಹಿತ್ಯಕ್ಕೊಂದು ಪರಿಪೂರ್ಣತೆ ದಕ್ಕುತ್ತದೆ ಎಂಬುದು ಅವರ ಬಲವಾದ ವಾದ. ಅವರ ಪ್ರೇರಣಾದಾಯಕ ಕಥನವೇ ಈ ವಿಡಿಯೊ.