ಬೆಂಗಳೂರು: ಎಸ್ಎಸ್ಎಲ್ಸಿ ಕನ್ನಡ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿರುವುದಕ್ಕೆ ಶಿಕ್ಷಣದಲ್ಲಿ ಏಕರೂಪತೆಯ ಕೊರತೆ ಸೇರಿ ವಿವಿಧ ಕಾರಣಗಳನ್ನು ಗುರುತಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡದತ್ತ ಆಸಕ್ತಿ ಮೂಡಿಸಲು 22 ಶಿಫಾರಸು ಮಾಡಿದೆ.

‘ಕನ್ನಡ ನಾಡಿನ ಮಕ್ಕಳು ಕನ್ನಡದಲ್ಲೇಕೆ ನಪಾಸಾಗುತ್ತಾರೆ?’ ಶೀರ್ಪಿಕೆಯಡಿ ಸಿದ್ಧಪಡಿಸಿದ ಅಧ್ಯಯನ ವರದಿಯನ್ನು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಗುರುವಾರ ಸಲ್ಲಿಸಿದರು. ಪ್ರಾಧಿಕಾರದ ಸದಸ್ಯರೂ ಆಗಿರುವ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರ ಮಾರ್ಗದರ್ಶನದಲ್ಲಿ ಎಂಟು ಶಿಕ್ಷಕರನ್ನು ಒಳಗೊಂಡ ಸಮಿತಿ ಈ ಸಂಶೋಧನಾ ವರದಿ ಸಿದ್ಧಪಡಿಸಿದೆ.

‘ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡವು ಒಂದು ಭಾಷೆಯಾಗಿ ಯಾವ ಸ್ಥಾನದಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಖ್ಯಾತ್ಮಕ, ದತ್ತಾಂಶ ಆಧಾರಿತ ಅಧ್ಯಯನ ನಡೆಯಬೇಕಿದೆ. ಈ ಅಧ್ಯಯನವು ಎಸ್ಎಸ್ಎಲ್ಸಿ ಫಲಿತಾಂಶಗಳ ದತ್ತಾಂಶವನ್ನು ಆಧರಿಸಿದ್ದು, ಕನ್ನಡ ಭಾಷಾ ಶಿಕ್ಷಣದ ಸ್ಥಿತಿಯನ್ನು ಸಂಖ್ಯಾತ್ಮಕ ಮತ್ತು ವ್ಯಾಖ್ಯಾನಾತ್ಮಕ ದೃಷ್ಟಿಕೋನದಿಂದ ವಿಶ್ಲೇಷಿಸಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಮುಖ ಅಂಶಗಳು: ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 2016ರಲ್ಲಿ ಶೇ 83.13ರಷ್ಟಿದ್ದ ಕನ್ನಡ ಪ್ರಥಮ ಭಾಷಾ ಪ್ರಾಬಲ್ಯ, 2025ರಲ್ಲಿ ಶೇ 81.03ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಆಂಗ್ಲ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಪ್ರಮಾಣ ಶೇ 10.61ರಿಂದ ಶೇ 14.62ಕ್ಕೆ ಏರಿಕೆಯಾಗಿದೆ.

2025ರಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ಅನುತ್ತೀರ್ಣರಾದ 80,373 ವಿದ್ಯಾರ್ಥಿಗಳು ಕೇವಲ ಸಂಖ್ಯೆ ಮಾತ್ರವಲ್ಲ, ಕನ್ನಡಕ್ಕೆ ಭವಿಷ್ಯದಲ್ಲಿ ಒದಗಿರುವ ಅಪಾಯದ ಸೂಚಕವಾಗಿದ್ದಾರೆ. ಇದು ಎಚ್ಚರಿಕೆಯ ಗಂಟೆ. ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ಮತ್ತು ಕರ್ನಾಟಕದಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಲು ಸರ್ಕಾರವು ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಶಾಲಾ ಮಟ್ಟದಲ್ಲಿನ ತುರ್ತು ಹಾಗೂ ಸಮಗ್ರ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ಒಂದು ರಾಜ್ಯ ಒಂದು ಶಿಕ್ಷಣ ಕ್ರಮವನ್ನು ಜಾರಿಗೊಳಿಸಬೇಕು. ವಿದ್ಯಾರ್ಥಿ ಯಾವುದೇ ಶಾಲೆಯಲ್ಲಿ ಕಲಿಯಲಿ, ಕಡ್ಡಾಯ ಶಿಕ್ಷಣದ ಅವಧಿಯಲ್ಲಿ ಒಂದೇ ರೀತಿಯ ಶಿಕ್ಷಣ ನೀಡಿದಾಗ ಶಿಕ್ಷಣದಲ್ಲಿ ಅನಾರೋಗ್ಯಕರ ಸ್ಪರ್ಧೆ ತಪ್ಪಲಿದೆ. ಸಮಾನ ಶಾಲಾ ಶಿಕ್ಷಣ ಪದ್ಧತಿ ಕಡ್ಡಾಯವಾಗಿ ಜಾರಿಯಾಗಬೇಕು. ಶಿಕ್ಷಣದ ವ್ಯವಸ್ಥೆಯಲ್ಲಿ ಯಾವುದೇ ತಾರತಮ್ಯ ಇರಬಾರದು.

‘ಕನ್ನಡ ಕಲಿಕೆ ಕಡ್ಡಾಯಗೊಳಿಸಿ’ –ಕರ್ನಾಟಕದಲ್ಲಿ ಕನ್ನಡವೇ ರಾಜ್ಯ ಭಾಷೆ. ಅಂಗನವಾಡಿಯಿಂದ ಪದವಿವರೆಗೆ ಯಾವುದೇ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೂ ಭಾಷೆಯಾಗಿ ಕನ್ನಡ ಕಲಿಕೆಯನ್ನು ರಾಜ್ಯದಲ್ಲಿ ಕಡ್ಡಾಯಗೊಳಿಸಬೇಕು.

–ಅನಗತ್ಯ ಭಾಷಾ ಕಲಿಕೆಯ ಹೊರೆ ತಗ್ಗಿಸಲು ಈಗಿರುವ ತ್ರಿಭಾಷಾ ಸೂತ್ರವನ್ನು ಕೈಬಿಟ್ಟು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಬೇಕು.

–ಕನ್ನಡದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ ಆಯ್ಕೆಯಲ್ಲಿ ಪ್ರಾಧಾನ್ಯತೆ ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆ ಮೊದಲಾದ ಉತ್ತೇಜನಗಳನ್ನು ನೀಡಬೇಕು.

–ಮಕ್ಕಳ ಸ್ವಯಂ ಕಲಿಕೆಗೆ ಅವರಲ್ಲಿನ ಭಾಷಾ ಕೌಶಲಗಳಿಗೆ ಪೂರಕವಾದ ಚಟುವಟಿಕೆಗಳಿರಬೇಕು. ಮೌಲ್ಯಮಾಪನದಲ್ಲಿ ಭಾಷಾ ಕಲಿಕೆಯ ಸಾಮರ್ಥ್ಯಗಳಿಗೆ ಆದ್ಯತೆ ನೀಡಬೇಕೆ ಹೊರತು ವಿಷಯಕ್ಕಲ್ಲ.

–ಪಠ್ಯಪುಸ್ತಕದಲ್ಲಿ ಸರಳ ಕಥೆ ಕವನ ಚಟುವಟಿಕೆ ಸಂಭಾಷಣೆ ಮೊದಲಾದ ಭಾಷಾ ಚಟುವಟಿಕೆಗಳಿಗೆ ಅವಕಾಶ ಇರಬೇಕು. ಪಠ್ಯಪುಸ್ತಕವು ವಿಷಯ ತುರುಕಿಸುವ ಸಾಧನವಾಗಿರದೆ ಮಕ್ಕಳಲ್ಲಿ ಭಾಷಾ ಕೌಶಲ ಬೆಳೆಸಲು ಪೂರಕವಾಗಿರಬೇಕು.

–ಕನ್ನಡದ ಬಗ್ಗೆ ಒಲವು ಮೂಡಿಸುವ ಕಾರ್ಯವಾಗಬೇಕು. ವೃತ್ತಿಪರ ಅರ್ಹತೆ ಜತೆಗೆ ಕನ್ನಡ ಕಲಿಕೆಗೆ ನಿಗದಿತ ಅಂಕವನ್ನು ಮೀಸಲಿಡಬೇಕು. ಕನ್ನಡಕ್ಕೆ ಕೃಪಾಂಕ ನೀಡಬೇಕು. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ಕನ್ನಡ ಕಡ್ಡಾಯಗೊಳಿಸಬೇಕು.

–ಪ್ರಾಥಮಿಕ ಹಂತದಲ್ಲಿ ಭಾಷಾ ಕೌಶಲಗಳಿಗೆ ಹೆಚ್ಚಿನ ಒತ್ತು ಕೊಟ್ಟು ಭಾಷಾ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು.

–ಪ್ರೌಢಶಾಲಾ ಹಂತದಲ್ಲಿ 8ನೇ ತರಗತಿಯಿಂದಲೇ ವಿದ್ಯಾರ್ಥಿ ಕನ್ನಡ ಭಾಷೆಯಲ್ಲಿ ಪ್ರಾವಿಣ್ಯ ಪಡೆಯುವಂತೆ ಹಂತ ಹಂತವಾಗಿ ಕ್ರಮಕೈಗೊಳ್ಳಬೇಕು.

–ಶಾಲೆಯಲ್ಲಿ ಹೆಚ್ಚು ಹೆಚ್ಚು ಭಾಷಾ ಚಟುವಟಿಕೆಗಳನ್ನು ನಡೆಸಬೇಕು. ಕಡ್ಡಾಯ ಓದಿಗೆ ಪ್ರತಿದಿನ ಅರ್ಧ ಗಂಟೆಯನ್ನಾದರೂ ಮೀಸಲಿಡಬೇಕು.

‘ವಾಸ್ತವ ಚಿತ್ರಣ ನೀಡುವ ವರದಿ’

‘ಕರ್ನಾಟಕದಲ್ಲಿ ತಾಯ್ನುಡಿಯಲ್ಲಿಯೇ ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ನಪಾಸಾಗುತ್ತಿರುವುದು ಆಘಾತಕಾರಿಯಾಗಿದೆ. ಇದಕ್ಕೆ ಸ್ಪಷ್ಟ ಕಾರಣ ಹುಡುಕಿ ಶಿಕ್ಷಣದಲ್ಲಿ ಕನ್ನಡ ಉಳಿದು ಬೆಳೆಯುವಂತೆ ಮಾಡಲು ಪ್ರಾಧಿಕಾರ ವರದಿಯನ್ನು ಸಿದ್ಧಪಡಿಸಿದೆ. ಅನುಷ್ಠಾನ ಯೋಗ್ಯ ಸಲಹೆಗಳನ್ನು ಸರ್ಕಾರದ ಮುಂದಿಟ್ಟಿದೆ. ಈ ವರದಿ ಕನ್ನಡ ಭಾಷಾ ಶಿಕ್ಷಣದ ಸ್ಥಿತಿಗತಿಯ ವಾಸ್ತವ ಚಿತ್ರಣ ನೀಡುವುದರ ಜತೆಗೆ ಬೋಧನಾ ಪದ್ಧತಿಯ ಪರಿಷ್ಕರಣೆ ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಶಿಕ್ಷಣದ ತರಬೇತಿ ಮತ್ತು ಗುಣಾತ್ಮಕ ಪಠ್ಯಪುಸ್ತಕ ರಚನಾ ಪ್ರಕ್ರಿಯೆಯ ಮಹತ್ವದ ಮೇಲೆ ಬೆಳಕು ಚೆಲ್ಲಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.