ಮಧುಗಿರಿ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕಕ್ಕೆ ಒಂದು ಶತಮಾನ ಕಳೆದರೂ ಕನ್ನಡ ಪರ ಕೆಲಸ ಮಾಡುವ ಮಹಿಳೆ, ದಲಿತ ಇಲ್ಲವೇ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಅಧ್ಯಕ್ಷರಾಗುವುದಿರಲಿ, ಧೈರ್ಯವಾಗಿ ಚುನಾವಣೆಗೆ ಸ್ಪರ್ಧಿಸದಿರುವುದು ಸಾಹಿತ್ಯ ಲೋಕದಲ್ಲಿನ ಸಾಂಸ್ಕೃತಿಕ ರಾಜಕಾರಣಕ್ಕೆ ಹಿಡಿದ ಕನ್ನಡಿ ಎಂದು ಸಾಹಿತಿ ಮಲನ ಮೂರ್ತಿ ಅಭಿಪ್ರಾಯಪಟ್ಟರು.

ಸಾಹಿತ್ಯ ಮಂದಾರ ವೇದಿಕೆಯಿಂದ ಪಟ್ಟಣದ ಟಿವಿವಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.

ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೂ ಮೀಸಲಾತಿ ತರಬೇಕೇ? ಸಮಾಜದ ಎಲ್ಲಾ ವರ್ಗದವರೂ ಹಿಂಜರಿಕೆ ಮನೋಭಾವ ಬಿಟ್ಟು ಮುಂದುವರಿದಾಗ ಮಾತ್ರ ಪರಿಷತ್ ಇನ್ನಷ್ಟು ವಿಶಾಲವಾಗಿ ಕಾರ್ಯನಿರ್ವಹಿಸಬಹುದು ಎಂದು ಹಿರಿಯ ಸಾಹಿತಿ ಮಲನಮೂರ್ತಿ ಅಭಿಪ್ರಾಯಪಟ್ಟರು.

ಪರಿಷತ್ತಿನ ಸಂಶಯಾತ್ಮಕ ಕಾರ್ಯವೈಖರಿಯಿಂದಾಗಿ ಆಗಾಗ ಪರಿಷತ್ಗೆ ಆಡಳಿತಾಧಿಕಾರಿಗಳನ್ನ ನೇಮಿಸುತ್ತಿರುವುದು ಬೇಸರ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರೊ. ಕೃಷ್ಣಪ್ಪ ಮಾತನಾಡಿ ‘ಕರ್ಣಾಟಕ ಸಾಹಿತ್ಯ ಪರಿಷತ್ತು’ ಎಂಬ ಹೆಸರಿನಲ್ಲಿ ಆರಂಭವಾದ ಕಸಾಪ ಮೈಸೂರು, ಹೈದರಾಬಾದ್, ಕೊಡಗು ಪ್ರಾಂತ್ಯ ಪ್ರತಿನಿಧಿಗಳನ್ನು ಒಳಗೊಂಡಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್. ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಇವರುಗಳ ಪ್ರೋತ್ಸಾಹದಿಂದ ಬೆಳೆದು, ಪ್ರಸ್ತುತ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದರು.

ಗ್ರಂಥಪಾಲಕ ನಾಗಭೂಷಣ್, ಉಪನ್ಯಾಸಕರಾದ ಮಂಜುಪ್ರಸಾದ್, ಹನುಮಂತರಾಯಪ್ಪ, ವೆಂಕಟೇಶ್ ಮೂರ್ತಿ, ಸತೀಶ್, ನಿಖಿಲ್, ಅಶ್ವಥ್ ನಾರಾಯಣ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-17-771892681

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.