ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾದ ರಾಜ್ಯದಲ್ಲಿನ 169 ಸಂತ್ರಸ್ತೆಯರಿಗೆ ತಿಂಗಳಿಗೆ ₹50 ಸಾವಿರ ಭತ್ಯೆ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ವಿಧಾನಪರಿಷತ್ನಲ್ಲಿ ಕಾಂಗ್ರೆಸ್ನ ಕೆ.ಶಿವಕುಮಾರ್ ಅವರ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಅವರು, ಆ್ಯಸಿಡ್ ದಾಳಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು, ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು, ಅವರ ಬದುಕನ್ನು ಮತ್ತೆ ಕಟ್ಟಿಕೊಡಲು ಸರ್ಕಾರ ಬದ್ಧವಾಗಿದೆ. ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಆರ್ಥಿಕ ಪರಿಹಾರಗಳನ್ನು ಘೋಷಿಸಲಾಗಿದೆ. ಘಟನೆಯ ತೀವ್ರತೆಯನ್ನು ಆಧರಿಸಿ ತಕ್ಷಣದ ನೆರವು ಮತ್ತು ಮುಂದಿನ ಚಿಕಿತ್ಸೆಗಾಗಿ ಅಗತ್ಯವಿರುವ ಪರಿಹಾರ ಮೊತ್ತವನ್ನು ಸಂತ್ರಸ್ತರ ಕುಟುಂಬಗಳಿಗೆ ನೀಡಲಾಗುತ್ತಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಶಸ್ತ್ರಚಿಕಿತ್ಸೆ, ಔಷಧಗಳು ಮತ್ತು ದೀರ್ಘಕಾಲೀನ ಪುನರ್ವಸತಿ ವೆಚ್ಚಗಳು ಸೇರಿವೆ ಎಂದರು.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಂತ್ರಸ್ತರಿಗೆ ಸರ್ಕಾರಿ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗ ಒದಗಿಸಲು ನೀತಿ ರೂಪಿಸಲಾಗುತ್ತಿದೆ. ಉದ್ಯೋಗ ನೀಡಲು ತಾಂತ್ರಿಕ ಅಡಚಣೆಗಳಿದ್ದರೆ, ಸಂತ್ರಸ್ತರಿಗೆ ಬದುಕನ್ನು ನಿರ್ವಹಿಸಲು ಸಹಾಯವಾಗುವಷ್ಟು ಭತ್ಯೆ ಒದಗಿಸುವ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ಶಿವಕುಮಾರ್ ಮಾತನಾಡಿ, ‘ಆ್ಯಸಿಡ್ ದಾಳಿಗೆ ಒಳಗಾದವರಿಗೆ ಬಾಡಿಗೆ ಮನೆಯೂ ಸಿಗುತ್ತಿಲ್ಲ. ಕೊಟ್ಟರೂ ಮನೆ ಬಿಡುವಂತೆ ಪೀಡಿಸಲಾಗುತ್ತಿದೆ. ಹಲವರಿಗೆ ಭತ್ಯೆಯೂ ಸಿಗುತ್ತಿಲ್ಲ, ಈ ಸೌಲಭ್ಯಗಳು ಸಿಗಲು ಯುಡಿಐ ಕಾರ್ಡ್, ಎಫ್ಐಆರ್ ಪ್ರತಿ ಮತ್ತಿತರ ದಾಖಲೆಗಳನ್ನು ಒದಗಿಸಲು ಹೇಳಲಾಗುತ್ತಿದೆ. ಅವರ ಜೀವನ ನಿರ್ವಹಣೆಗೆ ಪ್ರಸ್ತುತ ತಿಂಗಳಿಗೆ ₹10 ಸಾವಿರ ಭತ್ಯೆ ನೀಡಲಾಗುತ್ತಿದೆ. ಇದರಿಂದ ಬದುಕು ನಡೆಸುವುದೇ ಅವರಿಗೆ ದುಸ್ತರವಾಗಿದೆ’ ಎಂದು ಗಮನ ಸೆಳೆದರು.

ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿಯ ಭಾರತಿ ಶೆಟ್ಟಿ, ಹೇಮಲತಾ ನಾಯಕ್, ಕಾಂಗ್ರೆಸ್ನ ಉಮಾಶ್ರೀ ಸೇರಿದಂತೆ ಆಡಳಿತ, ವಿರೋಧ ಪಕ್ಷದ ಸದಸ್ಯರು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದರೊಂದಿಗೆ, ನಿವೇಶನ, ಮನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.