ಬೆಂಗಳೂರು: ಲೋಪಗಳನ್ನು ಸರಿಪಡಿಸಲು ಹಲವು ಸುಧಾರಣೆಗಳನ್ನು ಕೈಗೊಂಡ ಕಾರಣ ಔಷಧ ಪೂರೈಕೆಯಲ್ಲಿ ಸ್ವಲ್ಪ ಪ್ರಮಾಣದ ವ್ಯತ್ಯಯವಾಗಿತ್ತು. ಈಗಾಗಲೇ ₹880.68 ಕೋಟಿ ಮೊತ್ತದಲ್ಲಿ 890 ವಿಧಗಳ ಔಷಧಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗಂಡೂರಾವ್ ಹೇಳಿದರು.

ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, 534 ಔಷಧಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಮೂಲಕ, 356 ಔಷಧಗಳನ್ನು ಸ್ಥಳೀಯ ಖರೀದಿ ವಿಧಾನದ ಮೂಲಕ ಖರೀದಿಸಲಾಗುತ್ತಿದೆ. 39 ಔಷಧಗಳು ಈಗಾಗಲೇ ಉಗ್ರಾಣಗಳಿಗೆ ಸರಬರಾಜಾಗಿವೆ. 155 ಔಷಧಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.

ಭ್ರೂಣಹತ್ಯೆ ವಿರುದ್ಧ ಕ್ರಮ:

ಕಾಂಗ್ರೆಸ್ನ ಉಮಾಶ್ರೀ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ‘ಭ್ರೂಣಹತ್ಯೆಯ 150 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. 80 ಪ್ರಕರಣಗಳಲ್ಲಿ ದಂಡ ವಿಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗೆ ಇದ್ದ ಪ್ರಯೋಗಾಲಯಗಳ ಸ್ಕ್ಯಾನಿಂಗ್ ಯಂತ್ರಗಳ ತಪಾಸಣಾ ಅಧಿಕಾರವನ್ನು ಆಯುಕ್ತರೂ ಸೇರಿದಂತೆ ಇತರೆ ಅಧಿಕಾರಿಗಳಿಗೂ ನೀಡಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.