ಬೆಂಗಳೂರು: ‘ಆದ್ಯತಾ ಪಡಿತರ ಚೀಟಿದಾರರನ್ನು (ಬಿಪಿಎಲ್) ಗುರುತಿಸಲು ವಾರ್ಷಿಕ ₹1.20 ಲಕ್ಷ ಆದಾಯವನ್ನು ಮಾನದಂಡವಾಗಿ ಈಗಲೂ ಅನುಸರಿಸುತ್ತಿರುವುದು ಸರಿಯಲ್ಲ. ಇದನ್ನು ₹3 ಲಕ್ಷಕ್ಕೆ ಹೆಚ್ಚಿಸುವಂತೆ ಆಡಳಿತ ಸುಧಾರಣಾ ಆಯೋಗ ಹೇಳಿದೆ. ಈ ಬಗ್ಗೆ ಆಹಾರ ಇಲಾಖೆ ಪರಿಶೀಲಿಸಲಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬಿಜೆಪಿಯ ಸಿ.ಎನ್. ಅಶ್ವತ್ಥನಾರಾಯಣ ಅವರ ಪ್ರಶ್ನೆಗೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಪರವಾಗಿ ಉತ್ತರಿಸಿದ ದಿನೇಶ್ ಗುಂಡೂರಾವ್, ‘2017ರ ಮಾನದಂಡಗಳನ್ನು ಪರಿಷ್ಕರಿಸಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಅನರ್ಹ ಆದ್ಯತಾ ಪಡಿತರ ಚೀಟಿದಾರರನ್ನು (ಬಿಪಿಎಲ್, ಅಂತ್ಯೋದಯ) ಗುರುತಿಸುವ ನೆಪದಲ್ಲಿ ಅರ್ಹ ಕುಟುಂಬಗಳ ಬಿಪಿಎಲ್ ಕಾರ್ಡುಗಳನ್ನೂ ಎಪಿಎಲ್ಗೆ ಪರಿವರ್ತಿಸಿದ ಕಾರಣ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ ಎಂದು ಸದಸ್ಯರು ಪಕ್ಷಭೇದ ಮರೆತು ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದರು.

‘ಆದ್ಯತಾ ಪಡಿತರ ಚೀಟಿಗಳನ್ನು ಪಡೆಯಲು ಇರುವ 2017ರ ಮಾನದಂಡಗಳನ್ನು ಎಂಟು ವರ್ಷ ಕಳೆದರೂ ಸರ್ಕಾರ ಪರಿಷ್ಕರಿಸಿಲ್ಲ. ತಿಂಗಳಿಗೆ ₹10 ಸಾವಿರ ಸಂಬಳ ತೆಗೆದುಕೊಳ್ಳುವವನ ಆದಾಯವೂ ವರ್ಷಕ್ಕೆ ₹1.20 ಲಕ್ಷ ಆಗುತ್ತದೆ. ಆದರೆ, ಈ ಮಾನದಂಡ ಇಟ್ಟುಕೊಂಡು ಲಕ್ಷಾಂತರ ಕುಟುಂಬಗಳು, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದಿದ್ದರೂ ಐಟಿ ರಿಟರ್ನ್ ಪಡೆದಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ಗೆ ಪರಿವರ್ತಿಸಲಾಗಿದೆ. ಆಹಾರ ಭದ್ರತಾ ಕಾಯ್ದೆ ಅನುಸಾರ ನಗರ ಪ್ರದೇಶದಲ್ಲಿ ಶೇ 50ರಷ್ಟು, ಗ್ರಾಮೀಣ ಭಾಗದಲ್ಲಿ ಶೇ 75ರಷ್ಟು ಜನರಿಗೆ ಆದ್ಯತಾ ಪಡಿತರ ಚೀಟಿ ನೀಡಬೇಕು. ಆದರೆ, ಸರ್ಕಾರ ಇದನ್ನು ಪಾಲಿಸುವುದಿಲ್ಲ’ ಎಂದು ಅಶ್ವತ್ಥನಾರಾಯಣ ಆರೋಪಿಸಿದರು.

‘ಭದ್ರತಾ ಸಿಬ್ಬಂದಿ, ಬಾಡಿಗೆ ವಾಹನಗಳ ಚಾಲಕರು ಕಡುಬಡವರ ಬಿಪಿಎಲ್ ಕಾರ್ಡುಗಳನ್ನೂ ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ಆದಾಯ ತೆರಿಗೆ ವ್ಯಾಪ್ತಿಗೆ ಬರದಿದ್ದರೂ ಐಟಿ ರಿಟರ್ನ್ ಸಲ್ಲಿಸಿರುವವರ ಕಾರ್ಡುಗಳನ್ನೂ ಎಪಿಎಎಲ್ಗೆ ಪರಿವರ್ತಿಸಲಾಗಿದೆ. ಹೀಗಾಗಿ, ಅರ್ಹತೆ ಇದ್ದರೂ ಬಿಪಿಎಲ್ ಪಡಿತರ ಚೀಟಿ ಕಳೆದುಕೊಂಡು ಲಕ್ಷಾಂತರ ಕುಟುಂಬಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ’ ಎಂದು ಬಿಜೆಪಿಯ ಕೆ. ಗೋಪಾಲಯ್ಯ, ಜೆಡಿಎಸ್ನ ಸುರೇಶ್ ಬಾಬು, ಕಾಂಗ್ರೆಸ್ನ ನಯನಾ ಮೋಟಮ್ಮ ಮತ್ತಿತರರು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.