ಮಂಗಳೂರು: ವಿಧಾನ ಮಂಡಲದ ವಿವಿಧ ಪ್ರಕ್ರಿಯೆಗಳಿಗೆ ಕಾಗದರಹಿತ ವ್ಯವಸ್ಥೆ ಜಾರಿಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನ್ಯಾಷನಲ್ ಇ–ವಿಧಾನ್ ಆಪ್ಲಿಕೇಷನ್ (ನೇವಾ) ಬಳಸಿ ವಿಧಾನಮಂಡಲದ ಪ್ರಕ್ರಿಯೆಗಳ ಡಿಜಿಟಲೀಕರಣ ಕೈಗೊಳ್ಳುವ ಕುರಿತು ಸಂಸತ್ತು ಹಾಗೂ ಕರ್ನಾಟಕ ವಿಧಾನಮಂಡಲಗಳ ಸಚಿವಾಲಯಗಳು ಈಚೆಗೆ ಒಪ್ಪಂದಕ್ಕೆ ಸಹಿ ಹಾಕಿವೆ. ಆರು ತಿಂಗಳ ಒಳಗೆ ಇದು ಅನುಷ್ಠಾನಗೊಳ್ಳಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ವಿಧಾನಮಂಡಲದ ಪ್ರಕ್ರಿಯೆಗಳನ್ನು ಕಾಗದರಹಿತಗೊಳಿಸುವ ಬೇಡಿಕೆ ಹಿಂದಿನಿಂದಲೂ ಇದೆ. ಅದಕ್ಕಾಗಿ ಒಂದೋ, ನಾವೇ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಬೇಕಿತ್ತು ಅಥವಾ ವಿಧಾನಮಂಡಲದ ಅಗತ್ಯಗಳಿಗೆ ಅನುಗುಣವಾಗಿ ಕೆಲವೊಂದು ಮಾರ್ಪಾಡು ಮಾಡಿ ನ್ಯಾಷನಲ್ ಇ ವಿಧಾನ್ ಆ್ಯಪ್ ಅನ್ನೇ ಬಳಸುವ ಆಯ್ಕೆ ನಮ್ಮ ಮುಂದಿತ್ತು. ಈ ಎರಡೂ ಆಯ್ಕೆಗಳ ಅನುಕೂಲ ಹಾಗೂ ಅನನುಕೂಲಗಳ ಬಗ್ಗೆ ಚರ್ಚಿಸಿದ್ದೇವೆ. ನ್ಯಾಷನಲ್ ಇ–ವಿಧಾನ್ ಆಪ್ಲಿಕೇಷನ್ ಬಳಸುವ ಪ್ರಸ್ತಾವಕ್ಕೆ ಸರ್ಕಾರವೂ ಅನುಮೋದನೆ ನೀಡಿದೆ’ ಎಂದರು.

‘ನ್ಯಾಷನಲ್ ಇ–ವಿಧಾನ್ ಆಪ್ಲಿಕೇಷನ್ ಬಳಸಿದರೆ ಅದರ ಅನುಷ್ಠಾನದ ಶೇ 60ರಷ್ಟು ಪಾಲನ್ನು ಕೇಂದ್ರವು ನೀಡಲಿದೆ. ನಾವು ವಿಧಾನಸೌಧ ಹಾಗೂ ಬೆಳಗಾವಿಯ ಸುವರ್ಣ ವಿಧಾನ ಸೌಧಗಳೆರಡನ್ನೂ ಡಿಜಿಟಲೀಕರಣಗೊಳಿಸಲಿದ್ದೇವೆ. ವಿಧಾನ ಸಭೆಯ ಡಿಜಿಟಲೀಕರಣಕ್ಕೆ ₹ 72 ಕೋಟಿ ಹಾಗೂ ವಿಧಾನ ಪರಿಷತ್ತಿನ ಡಿಜಿಟಲೀಕರಣಕ್ಕೆ ₹ 52 ಕೋಟಿ ವೆಚ್ಚವಾಗಲಿದೆ. ಈ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ಪ್ರತ್ಯೇಕ ಸಮಿತಿಯನ್ನು ರೂಪಿಸಲಾಗುತ್ತದೆ. ವಿಧಾನಸಭಾ ಸಚಿವಾಲಯದಲ್ಲಿ ಈ ಹೊಸ ವ್ಯವಸ್ಥೆಯ ಅನುಷ್ಠಾನಕ್ಕೆ ಸಚಿವಾಲಯದ ಕಾರ್ಯದರ್ಶಿಯವರು ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದವರು ಕ್ರಮವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಟಿಜಿಟಲೀಕರಣದ ಬಳಿಕ ವಿಧಾನ ಮಂಡಲದ ಕಲಾಪಗಳಿಗೆ ಸಂಬಂಧಿಸಿದ ಪ್ರಶ್ನೆಗಳು, ಉತ್ತರಗಳು, ಬಜೆಟ್ ಪ್ರತಿಗಳು, ಮಸೂದೆಗಳ ಪ್ರತಿ, ಮತ್ತಿತರ ದಾಖಲೆಗಳ ಮುದ್ರಣ, ಸಾಗಾಟ, ಅದಕ್ಕೆ ಬಳಸುವ ಕಾಗದದ ವೆಚ್ಚಗಳ ಉಳಿಕೆಯಾಗಲಿದೆ. ಈ ಯೋಜನೆಗೆ ಮಾಡುವ ಖರ್ಚು, ಒಂದೆರಡು ವರ್ಷಗಳಲ್ಲಿ ಆಗುವ ಉಳಿತಾಯ ಮೊತ್ತದಲ್ಲೇ ಸರಿದೂಗಲಿದೆ’ ಎಂದು ಅವರು ವಿವರಿಸಿದರು.

ಬೆಂಗಳೂರಿನ ವಿಧಾನಸೌಧ ಹಾಗೂ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವಾಗ ಅಗತ್ಯ ಟ್ಯಾಬ್ ಗಳನ್ನು ಅಳವಡಿಸುತ್ತೇವೆ. ಶಾಸಕರಿಗೆ ಐ–ಪ್ಯಾಡ್ ನೀಡಲಾಗುತ್ತದೆ. ಆಯಾ ದಿನದ ಕಲಾಪಗಳ ಕಾರ್ಯಸೂಚಿಗಳು, ಶಾಸಕರು ಕೇಳುವ ಪ್ರಶ್ನೆಗಳ ಉತ್ತರಗಳು, ಮಸೂದೆಯ ಕರಡುಗಳು, ಶಾಸಕರ ತಲುಪಿಸಬೇಕಾದ ಇತರ ಮಾಹಿತಿಗಳನ್ನೂ ಅದರಲ್ಲೇ ಪಡೆಯಬಹುದು. ಅದರ ಬಳಕೆ ಕುರಿತು ಶಾಸಕರಿಗೆ ತರಬೇತಿ ಆಯೋಜಿಸಲಾಗುತ್ತದೆ. ಇದು ವೆಚ್ಚವನ್ನು ಕಡಿತಗೊಳಿಸುವುದರ ಜೊತೆ ಸಮಯವನ್ನೂ ಉಳಿಸಲಿದೆ’ ಎಂದು ಅವರು ವಿವರಿಸಿದರು.

ಅಧಿವೇಶನಗಳ ಸಂದರ್ಭದಲ್ಲಿ ಪ್ರಸ್ತುತ ಶಾಸಕರ ಸಹಿ ಪಡೆದು ಅವರ ಹಾಜರಾತಿಯನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಇದಕ್ಕೂ ಹೊಸ ವ್ಯವಸ್ಥೆ ಬರಲಿದೆ. ಶಾಸಕರಿಗೆ ಪ್ರತ್ಯೇಕ ಮೊಬೈಲ್ ನೀಡಲಾಗುತ್ತದೆ. ಅಧಿವೇಶನದಲ್ಲಿ ಅವರಿಗೆ ಹಂಚಿಕೆ ಮಾಡಲಾದ ಆಸನದಲ್ಲಿ ಕುಳಿತಾದ ಮಾತ್ರ ಹಾಜರಾತಿ ದಾಖಲಿಸುವ ವ್ಯವಸ್ಥೆ ಜಾರಿಯಾಗಲಿದೆ. ಯುವ ಶಾಸಕರು ಇಂತಹ ಆಧುನಿಕ ವ್ಯವಸ್ಥೆ ಬಳಕೆಗೆ ಹೊಂದಿಕೊಂಡಿದ್ದಾರೆ. ಹಿರಿಯರು ಈ ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯಾವಕಾಶ ಬೇಕಾಗಬಹುದು ಎಂದರು.

ಕಿಯಾಸ್ಕ್: ವಿಧಾನ ಸೌಧ ಕಟ್ಟಡದಲ್ಲಿ ವಿವಿಧ ಸಚಿವಾಲಯಗಳ ಕಚೇರಿಗಳು ಎಲ್ಲಿವೆ. ಯಾವ ಸಚಿವರ ಕಚೇರಿ ಎಲ್ಲಿದೆ ಎಂಬ ಮಾಹಿತಿ ನೀಡಲು ಪ್ರತಿ ಮಹಡಿಯಲ್ಲಿ ಎರಡು ಕಿಯಾಸ್ಕ್ಗಳನ್ನು ಅಳವಡಿಸಲಾಗುತ್ತದೆ. ಸಚಿವರ ಭೇಟಿಗಾಗಿ ಬಂದವರಿಗೆ ಇದರಿಂದ ಅನುಕೂಲ ಆಗಲಿದೆ ಎಂದರು.

ಹೊಸ ಮಸೂದೆಗಳ ಕರಡು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಿ ಜನರ ಅಭಿಪ್ರಾಯ ಸಂಗ್ರಹಿಸುವ ಚಿಂತನೆಯೂ ಇದೆ. ವಿಧಾನಸಭೆಯಲ್ಲಿ ಸಚಿವರ, ಶಾಸಕರ ಭಾಷಣವನ್ನು ಕೃತಕ ಬುದ್ಧಿಮತ್ತ ಬಳಸಿ ಜನರಿಗೆ ಬೇಕಾದ ಭಾಷೆಯಲ್ಲಿ ತಲುಪಿಸುವ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶವೂ ಇದೆ. ವಿಧಾನ ಸೌಧ ಪಾರಂಪರಿಕ ಕಟ್ಟಡ. ಹಾಗಾಗಿ ಅಲ್ಲಿ ಇಂತಹ ಆಧುನಿಕ ವ್ಯವಸ್ಥೆ ಅಳವಡಿಸುವಾಗ ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.