ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತು ಆಡಳಿತ ಪಕ್ಷದ ಸದಸ್ಯರೇ ಪರ–ವಿರೋಧ ಹೇಳಿಕೆ ನೀಡಿದ್ದಾರೆ. ಈ ಗೊಂದಲ ಬಜೆಟ್ ಮೇಲೂ ಪರಿಣಾಮ ಬೀರಿದೆ ಎಂದು ಬಿಜೆಪಿಯ ಪ್ರತಾಪ್ಸಿಂಹ ನಾಯಕ್ ಹೇಳಿದರು.

ವಿಧಾನಪರಿಷತ್ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬೆಳಗಾವಿ ಅಧಿವೇಶನದಲ್ಲೇ ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಸ್ತಾಪ ಮಾಡಲಾಗಿತ್ತು. ಇದು ನಾಯಕತ್ವ ಬದಲಾವಣೆಯ ಒಪ್ಪಂದದ ಫಲ. ಈ ಬೆಳವಣಿಗೆ ನಂತರ ಮುಖ್ಯಮಂತ್ರಿಯವರು ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ’ ಎಂದರು.

ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, ‘ಮುಖ್ಯಮಂತ್ರಿ ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ ಎನಿಸಿದರೆ ಅವಿಶ್ವಾಸ ನಿರ್ಣಯ ಮಂಡಿಸಿ, ಆಗ ಬಿಜೆಪಿಗೆ ವಾಸ್ತವದ ಅರಿವಾಗುತ್ತದೆ’ ಎಂದು ಸವಾಲು ಹಾಕಿದರು.

ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ‘ಒಪ್ಪಂದದ ಬಗ್ಗೆ ಕಾಂಗ್ರಸ್ ಹೈಕಮಾಂಡ್ ನಿಮಗೆ ಹೇಳಿದೆಯಾ’ ಎಂದು ಪ್ರಶ್ನಿಸಿದರು. ಈ ವಿಚಾರ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿಗೆ ದಾರಿ ಮಾಡಿಕೊಟ್ಟಿತು.

ಮಾತು ಮುಂದುವರಿಸಿದ ಪ್ರತಾಪ್ಸಿಂಹ ನಾಯಕ್, ‘ಆಡಳಿತ ಪಕ್ಷದ ಗೊಂದಲ, ಕಿತ್ತಾಟ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಬಜೆಟ್ ಮಂಡಿಸುವಾಗ ಮುಖ್ಯಮಂತ್ರಿ ಅವರಲ್ಲಿ ಉತ್ಸಾಹವೇ ಇರಲಿಲ್ಲ. ಕಾಂಗ್ರೆಸ್ ಶಾಸಕರು ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ’ ಎಂದರು.

ಕಾಂಗ್ರೆಸ್ನ ಕೆ.ಶಿವಕುಮಾರ್, ಉಮಾಶ್ರೀ, ಡಿ.ಟಿ.ಶ್ರೀನಿವಾಸ್, ಬಿಜೆಪಿಯ ಕಿಶೋರ್ಕುಮಾರ್ ಪುತ್ತೂರು ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದರು.

ಸದಸ್ಯರು ಕಿಮ್ಮತ್ತು ನೀಡುವುದಿಲ್ಲ: ಹೊರಟ್ಟಿ

ನಿಗದಿತ ಸಮಯದ ಒಳಗೆ ಮಾತು ಮುಗಿಸಲು, ಒಬ್ಬರು ಮಾತನಾಡುವಾಗ ಅನಗತ್ಯವಾಗಿ ಎದ್ದು ನಿಲ್ಲುವವರನ್ನು ಎಚ್ಚರಿಸಲು ಬೆಲ್ ಹೊಡೆದರೂ ಸದಸ್ಯರು ಕಿಮ್ಮತ್ತು ನೀಡುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯ ಪ್ರತಾಪ್ಸಿಂಹ ನಾಯಕ್ ಮಾತನಾಡುವಾಗ ಕಾಂಗ್ರೆಸ್ನ ಐವನ್ ಡಿಸೋಜ ಸೇರಿದಂತೆ ಕೆಲ ಸದಸ್ಯರು ಪದೇಪದೇ ಎದ್ದು ನಿಂತು ಅಡ್ಡಿಪಡಿಸಿದಾಗ ಕೋಪಗೊಂಡ ಸಭಾಪತಿ, ‘ನಿಮಗೆ ತಿಳಿದಂತೆ ಮಾಡಿ, ನಿಯಮಗಳನ್ನು ಪಾಲನೆ ಮಾಡುವುದು ತಿಳಿಯದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

ಮೂರು ಗಂಟೆಯೂ ವಿದ್ಯುತ್ ಇಲ್ಲ’

ರೈತರಿಗೆ ಉಚಿತ ವಿದ್ಯುತ್ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಮೂರು ಗಂಟೆಯೂ ವಿದ್ಯುತ್ ನೀಡುತ್ತಿಲ್ಲ ಎಂದು ಬಿಜೆಪಿಯ ಸಿ.ಟಿ.ರವಿ ದೂರಿದರು.

ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್ನ ಗೋವಿಂದ ರಾಜು, ‘ಇದು ಸಾಲದ ಸರ್ಕಾರ. ವಿದ್ಯುತ್ ಇಲಾಖೆ ಕೂಡ ಸಾಲದಲ್ಲೇ ನಡೆಯುತ್ತಿದೆ’ ಎಂದರು.

ಇಂಧನ ಸಚಿವ ಕೆ.ಜೆ. ಜಾರ್ಜ್, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ವಿದ್ಯುತ್ ಇಲಾಖೆಗಳು ಸಾಲದಲ್ಲಿವೆ. ಕಡಿಮೆ ಶುಲ್ಕ ಪಡೆದು ವಿದ್ಯುತ್ ನೀಡಲಾಗುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ವಿದ್ಯುತ್ ಶುಲ್ಕ ಕಡಿಮೆ ಇದೆ ಎಂದು ಸಮಜಾಯಿಷಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.