ಅಭಿವೃದ್ಧಿ ವಿರೋಧಿ ಬಜೆಟ್‌ನಲ್ಲಿ, ಯುವ ಜನರತ್ತ ನಿರ್ಲಕ್ಷ್ಯ ತೋರಲಾಗಿದೆ. ‘ಯುವ ನಿಧಿ’ಗೆ ಈ ಬಾರಿ ಅನುದಾನ ಮೀಸಲಿಟ್ಟಿಲ್ಲ. ಇದು ಗ್ಯಾರಂಟಿ ಯೋಜನೆ ಕೈ ಬಿಡುವ ಮುನ್ಸೂಚನೆ. ರಾಜ್ಯವನ್ನು ಆರ್ಥಿಕ ಪ್ರಗತಿಯತ್ತ ಒಯ್ಯುವ ಬದಲು ಸಂಕಷ್ಟಕ್ಕೆ ದೂಡಲಾಗಿದೆ.
– ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ರಾಜ್ಯದ ಒಟ್ಟು ಸಾಲದ ಹೊರೆ ಈಗಾಗಲೇ ₹8.24 ಲಕ್ಷ ಕೋಟಿ ದಾಟಿದ್ದು, ಪ್ರತಿ ಕನ್ನಡಿಗನ ಮೇಲೂ ಸರಾಸರಿ ₹1.25 ಲಕ್ಷ ಸಾಲದ ಭಾರವನ್ನು ರಾಜ್ಯ ಸರ್ಕಾರ ಹೊರಿಸಿದೆ. ಇದು ಖಾಲಿ ಮಾತುಗಳ ಬಜೆಟ್.
– ಎನ್.ರವಿಕುಮಾರ್, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ
ಬಜೆಟ್‌ನಲ್ಲಿ ‘ಗ್ಯಾರಂಟಿ’ಗೆ ನೀಡಿರುವ ಅನುದಾನ ಬಿಟ್ಟರೆ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಹೊಸ ಯೋಜನೆಗಳು ಇಲ್ಲ. ಹಿಂದಿಗಿಂತ ಹೆಚ್ಚು ಸಾಲ ಮಾಡಿರುವುದೇ ಸರ್ಕಾರದ ಸಾಧನೆ.
– ಸಿ.ಬಿ.ಸುರೇಶ್ ಬಾಬು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಹುಬ್ಬಳ್ಳಿಯಲ್ಲಿ ಹಜ್ ಭವನ, ಸಂತ ಶಿಶುನಾಳ ಶರೀಫ ವಸತಿಶಾಲೆ ನಿರ್ಮಾಣ ಸೇರಿ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುವ ಆಶಯ ಹೊಂದಿದೆ.
–ಸಲೀಂ ಅಹ್ಮದ್, ವಿಧಾನಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ,