ಬೆಂಗಳೂರು: ಕರ್ನಾಟಕದ ಮಟ್ಟಿಗೆ 17ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣವು ಯಾಂತ್ರಿಕವಾಗಿತ್ತು. ಅವರ ಮಾತುಗಳಲ್ಲಿ ಭಾವನೆಗಳೇ ಇರಲಿಲ್ಲ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಸಿಎಂ ಬಜೆಟ್ ಭಾಷಣದ ಕುರಿತು ಸುರೇಶ್ ಕುಮಾರ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಫೇಸ್ಬುಕ್ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದಾಗ ಹೀಗೆ ಅನಿಸಿತು. ಅವರ ಆಯವ್ಯಯ ಭಾಷಣವು ಬಹಳ ಯಾಂತ್ರಿಕವಾಗಿತ್ತು. ದಾಖಲೆಯ ಬಜೆಟ್ ಮಂಡಿಸುತ್ತಿರುವ ಉತ್ಸಾಹ ಕಾಣೆಯಾಗಿತ್ತು. ಅವರ ಮಾತುಗಳಲ್ಲಿ ಲವಲವಿಕೆ ಇರಲಿಲ್ಲ. ಮಹನೀಯರ ಮಾತುಗಳು, ವಚನಗಳನ್ನು ಹೇಳುವಾಗಲೂ ಅವರ ಧ್ವನಿಯಲ್ಲಿ ಯಾವುದೇ ಭಾವನೆಗಳು ವ್ಯಕ್ತವಾಗಲಿಲ್ಲ' ಎಂದು ಬರೆದುಕೊಂಡಿದ್ದಾರೆ.

ಬಜೆಟ್ನಲ್ಲಿ ಉಲ್ಲೇಖಿಸಲಾಗಿರುವ ಪೂರ್ಣಚಂದ್ರ ತೇಜಸ್ವಿ ಅವರ ಬರಹವನ್ನು ಉದಾಹರಣೆಯಾಗಿ ಪ್ರಸ್ತಾಪಿಸಿರುವ ಸುರೇಶ್ ಕುಮಾರ್, 'ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತು ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ, ಅವು ಬತ್ತಿದರೆ ನಮ್ಮ ಉಸಿರು ಉಡುಗುತ್ತಾ ಬಂದಂತೆ' – ಎಂತಹ ಅರ್ಥಪೂರ್ಣ ಮತ್ತು ಮಹತ್ವದ ಸಾಲುಗಳು ಇವು. ಆದರೆ, ಇದನ್ನು ಓದುತ್ತಿದ್ದಾಗಲೂ ಸಿದ್ದರಾಮಯ್ಯನವರ ಧ್ವನಿಯಲ್ಲಿ ಯಾವುದೇ ಭಾವನೆಗಳು ಕಾಣಲಿಲ್ಲ. ಭಾಷಣದಲ್ಲಿ ಈ ಮಾತುಗಳನ್ನು ಸೇರಿಸಿದ ಮಹನೀಯರು ತಲೆ ಚಚ್ಚಿಕೊಂಡಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಮುಂದುವರಿದು, 'ಏಕೆ ಹೀಗೆ?' ಎಂದು ಕೇಳುತ್ತಾ.. ಊಹೆಯ ಉತ್ತರವನ್ನೂ ನೀಡಿದ್ದಾರೆ. 'ಇದು ನಾನು ಮಂಡಿಸುತ್ತಿರುವ ಕೊನೆಯ ಬಜೆಟ್ ಆಗಬಹುದು ಎಂಬ ವಿಷಾದ ಸಿದ್ದರಾಮಯ್ಯ ಅವವರ ಮನಸ್ಸಿನಲ್ಲಿ ಹಾದು ಹೋಗಿತ್ತೇ?' ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ, 'ಆಳುವ ಪಕ್ಷದ ಸಾಲಿನಿಂದಲೂ ಭಾಷಣಕ್ಕೆ ತಲೆದೂಗುವ ಅಥವಾ ಟೇಬಲ್ ಕುಟ್ಟಿ ಹೆಮ್ಮೆಪಡುವ ದೃಶ್ಯಗಳು ಅತಿ ವಿರಳವಾಗಿದ್ದವು' ಎಂದು ಉಲ್ಲೇಖಿಸಿದ್ದಾರೆ.

ಸಿಎಂ ಕಾಲೆಳೆದಿದ್ದ ಶಾಸಕ
ಸಿದ್ದರಾಮಯ್ಯ ಅವರು ರಾಹುಕಾಲಕ್ಕೂ ಮುನ್ನ ಬಜೆಟ್ ಮಂಡನೆ ಆರಂಭಿಸಲಿದ್ದಾರೆ ಎಂಬುದಾಗಿ ಸುರೇಶ್ ಕುಮಾರ್ ಅವರು ಗುರುವಾರ ಪೋಸ್ಟ್ ಹಂಚಿಕೊಂಡು ಕಾಲೆಳೆದಿದ್ದರು.

#ಮೂಢನಂಬಿಕೆ ಟ್ಯಾಗ್ ಹಾಗೂ ನಗುವ ಎಮೋಜಿ ಬಳಸಿದ್ದ ಅವರು, 'ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ 10.15ಕ್ಕೆ ವಿಧಾನಸಭೆಯಲ್ಲಿ ಈ ವರ್ಷದ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. 10 ಗಂಟೆ ಅಲ್ಲ, 10.30 ಅಲ್ಲ, 11.00 ಗಂಟೆಯೂ ಅಲ್ಲ. 10.15ಕ್ಕೆ ಏಕೆ?' ಎಂದು ಕೇಳಿದ್ದರು.

ಮುಂದುವರಿದು, 'ಕುತೂಹಲದಿಂದ ವಿಚಾರಿಸಿದಾಗ ಗೊತ್ತಾಗಿದ್ದು ಏನೆಂದರೆ, ಶುಕ್ರವಾರ ಬೆಳಿಗ್ಗೆ 10.30ರಿಂದ ರಾಹುಕಾಲ. ಬೆಳಿಗ್ಗೆ 7.30ರಿಂದ 9ರ ವರೆಗೆ ಗುಳಿಕಾಲ' ಎಂದು ಬರೆದುಕೊಂಡಿದ್ದರು.

ಮೌಢ್ಯ ಆಚರಣೆಗಳನ್ನು ತಿರಸ್ಕರಿಸುವಂತೆ, ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಳ್ಳುವಂತೆ ಸಿದ್ದರಾಮಯ್ಯ ಅವರು ಹಲವು ಸಂದರ್ಭಗಳಲ್ಲಿ ಜನರಿಗೆ ಕರೆ ನೀಡಿದ್ದಾರೆ. ಅದೇ ಕಾರಣಕ್ಕೆ ಬಿಜೆಪಿ ಶಾಸಕ ಈ ಪೋಸ್ಟ್ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.