ತಮ್ಮ ಉತ್ತರಾಧಿಕಾರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಟ್ಟ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೂತನ ಸಚಿವರ ಆಯ್ಕೆಯಲ್ಲಿ ಮಾತ್ರ ಪಟ್ಟುಹಾಕಿ ಸಾಧಿಸುವ ತಮ್ಮ ಜಟ್ಟಿತನವನ್ನು ಬಿಟ್ಟುಕೊಟ್ಟಿಲ್ಲ.

ಮೇಲ್ನೋಟಕ್ಕೆ ಕಾಂಗ್ರೆಸ್ ಹೈಕಮಾಂಡ್ನ ಪಟ್ಟಿ ಎನಿಸಿದರೂ ಬುಧವಾರ ಪ್ರಮಾಣವಚನ ಸ್ವೀಕರಿಸಿದ ಸಚಿವರ ಯಾದಿ ನೋಡಿದರೆ, ಮಗ ಯತೀಂದ್ರ ಸೇರಿ ತಮ್ಮ ಆಪ್ತರಿಗೆ ಮೊದಲ ಕಂತಿನಲ್ಲೇ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂದೆ ಮುಂದೆ ಓಡಾಡುತ್ತಿದ್ದವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳಲು ಶಿವಕುಮಾರ್ಗೆ ಸಾಧ್ಯವಾಗಿಲ್ಲ. ಸಚಿವರಾದವರ ಪೈಕಿ ಕೆಲವರು ಕೆಲವೊಮ್ಮೆ ‘ಬಣ’ ಬದಲಿಸಿದರೂ ಲಾಗಾಯ್ತಿನಿಂದಲೂ ಸಿದ್ದರಾಮಯ್ಯನವರ ಜತೆಗೆ ಗುರುತಿಸಿಕೊಂಡವರೇ ಎಂಬುದು ಗಮನಾರ್ಹ.

13 ಸಚಿವರ ಪೈಕಿ ಏಳು ಮಂದಿ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡವರು. ರಾಮಲಿಂಗಾರೆಡ್ಡಿ ಮತ್ತು ಕೃಷ್ಣ ಬೈರೇಗೌಡ ಅವರು ಕೊನೆಗಳಿಗೆಯವರೂ ದೆಹಲಿಗೆ ಹೋಗದೇ, ಕ್ಷೇತ್ರದಲ್ಲೇ ತಮ್ಮ ಕೆಲಸ ಮಾಡುತ್ತಿದ್ದರು. ಕೃಷ್ಣ ಅವರು ಸಿದ್ದರಾಮಯ್ಯ ಅವರ ನಿಕಟವರ್ತಿಯಾಗಿದ್ದರೂ ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ.

ಸಂಪುಟದ ಅತ್ಯಂತ ಹಿರೀಕ ಕೆ.ಎಚ್. ಮುನಿಯಪ್ಪ ವರಿಷ್ಠರ ಜತೆಗೆ ಉತ್ತಮ ಬಾಂಧವ್ಯ ಹೊಂದಿದವರು. ಸಚಿವ ಸ್ಥಾನ ತೊರೆದು ತಮ್ಮ ಮಗಳು ರೂಪಕಲಾ ಅವರನ್ನು ಸಚಿವರಾಗಿಸುವ ಇರಾದೆಯಲ್ಲಿದ್ದರು. ಆದರೆ, ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರು. ಮೂರು ಬಾರಿ ಆಯ್ಕೆಯಾಗಿರುವ ಬಂಗಾರಪೇಟೆಯ ನಾರಾಯಣಸ್ವಾಮಿ ಅವರ ಹೆಸರು ಕೋಲಾರ ಕೋಟಾದಲ್ಲಿ ಮುಂಚೂಣಿಗೆ ಬಂದಿದ್ದೇ ತಡ, ಮಗಳ ಬದಲು ತಮಗೇ ಕೊಡಿ ಎಂದು ಮುನಿಯಪ್ಪ ಪಟ್ಟು ಹಿಡಿದು ಸಂಪುಟ ಸೇರ್ಪಡೆಯಾದರು.

ರಾಮಲಿಂಗಾರೆಡ್ಡಿ, ಯು.ಟಿ ಖಾದರ್, ಈಶ್ವರ ಖಂಡ್ರೆ ವರಿಷ್ಠ ಆಯ್ಕೆ ಎಂಬುದು ಸ್ಪಷ್ಟ. ಕೊನೆ ಗಳಿಗೆಯವರೆಗೂ ಖಂಡ್ರೆ ಅವರ ಹೆಸರು ಮುನ್ನೆಲೆಯಲ್ಲಿ ಇರಲಿಲ್ಲ. ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಅವರ ಹೆಸರನ್ನು ಕಲ್ಯಾಣ ಕರ್ನಾಟಕದ ಕೋಟಾದಲ್ಲಿ ವರಿಷ್ಠರು ಶಿಫಾರಸು ಮಾಡಿದರು ಎಂದು ಗೊತ್ತಾಗಿದೆ.

ಇನ್ನು ಪ್ರಿಯಾಂಕ್ ಖರ್ಗೆ ಹಾಗೂ ಶರಣ ಪ್ರಕಾಶ ಪಾಟೀಲ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆಯಾಗಿದೆ.

ಸಿದ್ದರಾಮಯ್ಯ ಮೇಲುಗೈ...

ಸಿದ್ದರಾಮಯ್ಯ ಅವರ ಬಣದಲ್ಲಿ ಬಲವಾಗಿ ನಿಂತಿದ್ದ ಜಿ. ಪರಮೇಶ್ವರ, ಕೆ.ಜೆ. ಜಾರ್ಜ್, ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್ ಹಾಗೂ ಯತೀಂದ್ರ ಅವರನ್ನು ಸಂಪುಟಕ್ಕೆ ಸೇರಿಸುವಲ್ಲಿ ಅವರು ಮೇಲುಗೈ ಸಾಧಿಸಿದ್ದಾರೆ.

‘ಅಧಿಕಾರ ಹಸ್ತಾಂತರ ಸೂತ್ರ’ದಂತೆ ತಮಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕರೆ ಪ್ರಿಯಾಂಕ್ ಖರ್ಗೆ ಅವರು ಉಪ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಶಿವಕುಮಾರ್ ಪ್ರತಿಪಾದಿಸುತ್ತಿದ್ದರು ಎಂಬ ಮಾತು ಕಾಂಗ್ರೆಸ್ ಪಡಸಾಲೆಯಲ್ಲಿ ಹರಿದಾಡುತ್ತಿತ್ತು. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟ ಬಳಿಕ, ಅಸ್ತಿತ್ವಕ್ಕೆ ಬರಲಿದ್ದ ಹೊಸ ಸರ್ಕಾರದಲ್ಲಿ ಮೂರು ಅಥವಾ ನಾಲ್ಕು ಉಪ ಮುಖ್ಯಮಂತ್ರಿಗಳು ಇರಬಹುದು ಎಂಬ ಚರ್ಚೆಯೂ ನಡೆದಿತ್ತು.

ಹಾಗಾದಲ್ಲಿ, ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ, ಪ್ರಿಯಾಂಕ್ ಖರ್ಗೆ ಅವರಿಗೆ ಈ ಸ್ಥಾನ ದಕ್ಕಲಿದೆ. ಪರಮೇಶ್ವರ ಅವರನ್ನು ಬಿಟ್ಟು ಪ್ರಿಯಾಂಕ್ಗೆ ಮಹತ್ವದ ಸ್ಥಾನ ಸಿಗಲಿದೆ ಎಂಬ ಮಾತುಗಳು ಇದ್ದವು.

ಆದರೆ, ಈಚೆಗಿನ ವರ್ಷಗಳಲ್ಲಿ ತಮ್ಮ ಬಣದಲ್ಲಿ ಗುರುತಿಸಿಕೊಂಡಿದ್ದ ಪರಮೇಶ್ವರ ಅವರನ್ನು ಉಪ ಮುಖ್ಯಮಂತ್ರಿ ಮಾಡಲೇಬೇಕೆಂದು ಸಿದ್ದರಾಮಯ್ಯ ಅವರು ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರಿದರು. ಅದನ್ನು ಕೊಡಿಸುವಲ್ಲಿ ಮೇಲುಗೈ ಅನ್ನೂ ಸಾಧಿಸಿದರು. ಹೀಗಾಗಿ, ಪ್ರಿಯಾಂಕ್ಗೆ ಮಹತ್ವದ ಸ್ಥಾನವೂ ಕೈ ತಪ್ಪಿತು.

ಮತ್ತೆ ಅಸಮತೋಲನ...

ಮೊದಲ ಕಂತಿನ ಸಚಿವ ಸಂಪುಟದಲ್ಲಿ ಪ್ರಾದೇಶಿಕ ಹಾಗೂ ಸಮುದಾಯವಾರು ನ್ಯಾಯವನ್ನು ಕಲ್ಪಿಸಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗಲಿಲ್ಲ. ವಾಡಿಕೆಯಾಗಿ ಹೋಗಿರುವ ಬೆಂಗಳೂರಿಗೆ ಹೆಚ್ಚಿನ ಪ್ರಾಧಾನ್ಯ ಎಂಬುದು ಈ ಬಾರಿಯೂ ಮುಂದುವರಿದಿದೆ. ರಾಮಲಿಂಗಾರೆಡ್ಡಿ, ಜಾರ್ಜ್, ಕೃಷ್ಣ ಹಾಗೂ ಬೈರತಿ ಸುರೇಶ್ ಹೀಗೆ ನಾಲ್ಕು ಸ್ಥಾನಗಳು ಬೆಂಗಳೂರು ಪಾಲಾಗಿವೆ.

ಮುಖ್ಯಮಂತ್ರಿ ಬೆಂಗಳೂರು ದಕ್ಷಿಣದವರಾದರೆ, ಬೆಂಗಳೂರು ಗ್ರಾಮಾಂತರಕ್ಕೆ ಒಂದು ಸ್ಥಾನ ಸಿಕ್ಕಿದೆ. ಖರ್ಗೆಯವರ ಕರ್ಮಭೂಮಿ ಕಲಬುರಗಿ ಎರಡು ಸ್ಥಾನ ಪಡೆದಿದ್ದರೆ, ಅತಿ ದೊಡ್ಡ ಜಿಲ್ಲೆ ಬೆಳಗಾವಿ ಒಂದು ಸಚಿವ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಧಾರವಾಡ, ದಾವಣಗೆರೆ, ಗದಗ, ಹಾವೇರಿ ಸೇರಿದಂತೆ ಮಧ್ಯ ಕರ್ನಾಟಕ, ಮಂಡ್ಯ, ಹಾಸನ ಸೇರಿದಂತೆ ಹಳೆ ಮೈಸೂರು ಹಾಗೂ ಮಲೆನಾಡು ಭಾಗಕ್ಕೆ ಯಾವುದೇ ಪ್ರಾತಿನಿಧ್ಯ ಲಭ್ಯವಾಗಲಿಲ್ಲ.

ಪರಮಾಧಿಕಾರ ಕಿತ್ತುಕೊಂಡ ‘ಹೈಕಮಾಂಡ್’

ಸಂವಿಧಾನವನ್ನೇ ಹಿಡಿದು ಓಡಾಡುವ ಲೋಕಸಭೆ ನಾಯಕ ರಾಹುಲ್ ಗಾಂಧಿ ಅವರು, ಸಚಿವ ಸಂಪುಟ ರಚನೆಯು ಮುಖ್ಯಮಂತ್ರಿಯ ಪರಮಾಧಿಕಾರ ಎಂಬ ಆಶಯವನ್ನೇ ಕಿತ್ತುಕೊಂಡಿದ್ದಾರೆ.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ದೆಹಲಿಗೆ ಕರೆಯಿಸಿಕೊಂಡು ಹೈಕಮಾಂಡ್ ನಾಯಕರು, ಇಬ್ಬರಿಂದಲೂ ಅಭಿಪ್ರಾಯ ಸಂಗ್ರಹಿಸಿ ಪಟ್ಟಿಯನ್ನು ಪಡೆದರು. ನೀವಿಬ್ಬರೂ ಬೆಂಗಳೂರಿಗೆ ಹೋಗಿ, ಪಟ್ಟಿ ಕಳುಹಿಸುತ್ತೇವೆ ಎಂದು ನಿರ್ದೇಶನವನ್ನು ನೀಡಿದರು. ಬುಧವಾರ ಬೆಳಿಗ್ಗೆಯವರೆಗೂ ಪಟ್ಟಿ ಪರಿಷ್ಕರಣೆಯಾಗುತ್ತಲೇ ಇತ್ತು. ಕೊನೆಗಳಿಗೆಯಲ್ಲಿ ಹಲವರ ಹೆಸರು ತೆಗೆಯುವುದು, ಸೇರಿಸುವುದು ನಡೆಯಿತು. ಇದರ ಯಾವ ಮಾಹಿತಿಯೂ ಶಿವಕುಮಾರ್ ಅವರಿಗೆ ಸಿಕ್ಕಿರಲಿಲ್ಲ ಎನ್ನಲಾಗುತ್ತಿದೆ. ಸಚಿವರ ಆಯ್ಕೆಯು ಮುಖ್ಯಮಂತ್ರಿಯ ವಿವೇಚನೆಗೆ ಬಿಡದೇ ಹೈಕಮಾಂಡ್ ನೇರ ಹಸ್ತಕ್ಷೇಪ ಮಾಡಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.