ಬೆಂಗಳೂರು: ಹೈಕಮಾಂಡ್ ಆದೇಶಕ್ಕೆ ಮಣಿದು ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜಕೀಯದ ಜಗಜಟ್ಟಿಯಂತಿದ್ದ ಸಿದ್ದರಾಮಯ್ಯ ಸಹ ಕಾಂಗ್ರೆಸ್ ಪಕ್ಷದ ದೆಹಲಿ ಹುಕುಂಗೆ ಕುರ್ಚಿ ಬಿಟ್ಟುಕೊಟ್ಟಿದ್ದಾರೆ. ಹಾಗೆ ನೋಡಿದರೆ, ಕರ್ನಾಟಕದಲ್ಲಿ ಹೈಕಮಾಂಡ್ ಗುಟುರಿಗೆ ಅವಧಿಪೂರ್ವ ಪದತ್ಯಾಗ ಮಾಡಿದ ಸಿಎಂಗಳ ಸಂಖ್ಯೆ ಬಹಳಷ್ಟಿದೆ. ಈ ಸಾಲಿನಲ್ಲಿ ಕೇಳಿಬರುವ ಮೊದಲ ಹೆಸರು ವೀರೇಂದ್ರ ಪಾಟೀಲ್.

1. ವೀರೇಂದ್ರ ಪಾಟೀಲ್

ಕಾಂಗ್ರೆಸ್ನಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಲಿಂಗಾಯತ ನಾಯಕ ವೀರೇಂದ್ರ ಪಾಟೀಲ್ ಅವರನ್ನು 1990ರಲ್ಲಿ ಅವರ ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಗಾದಿಯಿಂದ ಕೆಳಗಿಳಿಸುವ ಆದೇಶವನ್ನು ರಾಜೀವ್ ಗಾಂಧಿ ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಮಾಡಿದ್ದರು. ಅದಕ್ಕೆ ಅನಾರೋಗ್ಯ ಮತ್ತು ಹಳೆ ಮೈಸೂರು ಭಾಗದಲ್ಲಿ ಕೋಮು ಗಲಭೆಯನ್ನು ಸೂಕ್ತವಾಗಿ ನಿರ್ವಹಿಸಿಲ್ಲ ಎಂಬ ಕಾರಣ ನೀಡಲಾಗಿತ್ತು. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಒಬಿಸಿ ನಾಯಕ, ಸಮಾಜವಾದಿ ಹಿನ್ನೆಲೆ ಹೊಂದಿದ್ದ ಸಾರೆಕೊಪ್ಪ ಬಂಗಾರಪ್ಪನವರು ಕುರ್ಚಿ ಅಲಂಕರಿಸಿದ್ದರು.

1968 ಏಪ್ರಿಲ್ 29ರಿಂದ 1971ರ ಮಾರ್ಚ್ 18 ಮತ್ತು 1989ರ ಮಾರ್ಚ್ 30ರಿಂದ 1990ರ ಅಕ್ಟೋಬರ್ 10ರವರೆಗೆ ಅವರು ಎರಡು ಬಾರಿಇ ಮುಖ್ಯಮಂತ್ರಿಯಾಗಿದ್ದರು.

2. ಸಾರೆಕೊಪ್ಪ ಬಂಗಾರಪ್ಪ

ಕ್ಲಾಸಿಕ್ ಕಂಪ್ಯೂಟರ್ ಹಗರಣದಲ್ಲಿ ಹೆಸರು ಮತ್ತು ಕಾವೇರಿ ನದಿ ನೀರು ವಿವಾದ ಸಂಬಂಧ ತಮಿಳು ವಿರೋಧಿ ಹಿಂಸಾಚಾರವನ್ನು ಸೂಕ್ತವಾಗಿ ನಿರ್ವಹಿಸಿಲ್ಲ ಎಂಬ ಆರೋಪವೂ ಬಂಗಾರಪ್ಪ ಅವರ ಮೇಲೆ ಕೇಳಿಬಂದಿತ್ತು. ಎ.ಕೆ. ಆ್ಯಂಟನಿ ಅವರನ್ನೂ ಒಳಗೊಂಡ ಕಾಂಗ್ರೆಸ್ ಹೈಕಮಾಂಡ್ ರಚಿಸಿದ್ದ ಸಮಿತಿಯು ಬಂಗಾರಪ್ಪನವರ ಪದಚ್ಯುತಿಗೆ ಶಿಫಾರಸು ಮಾಡಿತ್ತು.

3. ಬಿ. ಎಸ್. ಯಡಿಯೂರಪ್ಪ

ರಾಜ್ಯದ ಲಿಂಗಾಯತ ನಾಯಕ ಬಿ.ಎಸ್. ಯಡಿಯೂರಪ್ಪನವರು ಹೈಕಮಾಂಡ್ ಅವಕೃಪೆಗೆ ಒಳಗಾಗಿ ಎರಡು ಬಾರಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2010ರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲೇಬೇಕಾಗಿ ಬಂದಿತ್ತು. 2021ರಲ್ಲಿ ಪಕ್ಷದೊಳಗಿನ ಆಂತರಿಕ ಕಲಹದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹೈಕಮಾಂಡ್ ಆದೇಶಕ್ಕೆ ಮಣಿದು ರಾಜೀನಾಮೆ ನೀಡಿದ್ದರು. ಬಳಿಕ, ಬಸವರಾಜ ಬೊಮ್ಮಾಯಿ ಸಿಎಂ ಹುದ್ದೆಗೆ ಏರಿದ್ದರು.

4. ಡಿ.ವಿ. ಸದಾನಂದ ಗೌಡ

ಯಡಿಯೂರಪ್ಪನವರು ಮೊದಲ ಅವಧಿಯಲ್ಲಿ ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿಗಾದಿ ಅಲಂಕರಿಸಿದ್ದರು. ಯಡಿಯೂರಪ್ಪನವರೇ ಡಿವಿಎಸ್ ಹೆಸರನ್ನು ಸೂಚಿಸಿದ್ದರು ಎಂದು ಹೇಳಲಾಗಿತ್ತು. ಬಳಿಕ, ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಸದಾನಂದಗೌಡ ಪದಚ್ಯುತಿಗೆ ಯಡಿಯೂರಪ್ಪನವರೇ ಹೈಕಮಾಂಡ್ಗೆ ಸೂಚಿಸಿದ್ದರು. 2012ರಲ್ಲಿ ಸದಾನಂದ ಗೌಡ ರಾಜೀನಾಮೆ ನೀಡಿ ಜಗದೀಶ್ ಶೆಟ್ಟರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

5. ಈಗ ಸಿದ್ದರಾಮಯ್ಯ

ದೇವರಾಜ ಅರಸು ನಂತರ ಐದು ವರ್ಷ ಪೂರ್ಣಾವಧಿ ಪೂರೈಸಿದ ಏಕೈಕ ಮುಖ್ಯಂತ್ರಿ(2013–18) ಮತ್ತು ದೀರ್ಘಾವಧಿ ಅಧಿಕಾರ ನಡೆಸಿದ ಮುಖ್ಯಮಂತ್ರಿ ಎಂಬ ಖ್ಯಾತಿಯನ್ನೂ ಹೊಂದಿರುವ ಅವರ ಎರಡನೇ ಅವಧಿಗೆ ಮೂರು ವರ್ಷ ತುಂಬಿದ ತಕ್ಷಣ ಹೈಕಮಾಂಡ್ ಕೊಕ್ಕೆ ಹಾಕಿದೆ. ಯಾವುದೇ ಆರೋಪಗಳಿಲ್ಲದಿದ್ದರೂ ಅತ್ಯಂತ ಪ್ರಭಾವಶಾಲಿ ನಾಯಕನೆನಿಸಿದ್ದರೂ ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆಗಿನ ಅಧಿಕಾರ ಹಸ್ತಾಂತರ ಒಪ್ಪಂದದ ಆಧಾರದ ಮೇಲೆ ಹೈಕಮಾಮಡ್ ಆದೇಶಕ್ಕೆ ಮಣಿದು ರಾಜೀನಾಮೆ ನೀಡಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಹೈಕಮಾಂಡ್ ಮಾತಿಗೆ ಮಣಿದು ರಾಜೀನಾಮೆ ನೀಡುತ್ತಿರುವುದಾಗಿ ಬಹಿರಂಗವಾಗಿ ಹೇಳಿದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ.
.I Want to become a Chief Minister: ಹೇಳಿದನ್ನ ಸಾಧಿಸಿದ್ದ ಸಿದ್ದರಾಮಯ್ಯ.ಮಗ ರಾಜನಾಗುತ್ತಾನೆಂದು ಕನಸು ಕಂಡಿದ್ದ ಬೋರಮ್ಮ.. 2 ಬಾರಿ ಸಿಎಂ ಆದ ಸಿದ್ದರಾಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.