ಬೆಂಗಳೂರು: ವೇತನ, ಪಿಂಚಣಿ ಮತ್ತು ಬಡ್ಡಿ ಪಾವತಿಯಂತಹ ಬದ್ಧವೆಚ್ಚವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ.

2026–27ನೇ ಸಾಲಿನಲ್ಲಿ ₹1.86 ಲಕ್ಷ ಕೋಟಿಯಷ್ಟಿರುವ ಬದ್ಧವೆಚ್ಚವು, 2029–30ನೇ ಸಾಲಿನಲ್ಲಿ ₹2.44 ಲಕ್ಷ ಕೋಟಿಗೆ ಏರಿಕೆಯಾಗಲಿದೆ.

ಬದ್ಧವೆಚ್ಚದಲ್ಲಿನ ಹೆಚ್ಚಳವು ಬಂಡವಾಳ ವೆಚ್ಚ ಹಂಚಿಕೆಗೆ ಹಣಕಾಸಿನ ಲಭ್ಯತೆಯನ್ನು ಕಡಿಮೆ ಮಾಡುತ್ತದೆ. ಇವುಗಳ ಮಧ್ಯೆ ಸರ್ಕಾರವು ಸಮತೋಲನ ಸಾಧಿಸುವುದು ಅಗತ್ಯ ಎನ್ನುತ್ತದೆ 2026–30ನೇ ಮಧ್ಯಮಾವಧಿ ವಿತ್ತೀಯ ಮುನ್ನಂದಾಜು.

ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಅದರ ಪರಿಣಾಮವಾಗಿ ಪಿಂಚಣಿಯಲ್ಲಿನ ಬದಲಾವಣೆಯು ಪ್ರತಿ ಆರ್ಥಿಕ ವರ್ಷದಲ್ಲೂ ಏರಿಕೆಯಾಗುತ್ತಿದೆ. 2026–27ನೇ ಸಾಲಿನಲ್ಲಿ ಸರ್ಕಾರವು ನೇಮಕಾತಿ ಪ್ರಕ್ರಿಯೆ ನಡೆಸುವುದರಿಂದ ಈ ವೆಚ್ಚದಲ್ಲಿ ಇನ್ನಷ್ಟು ಏರಿಕೆ ಆಗಬಹುದು ಎಂಬ ವಿಶ್ಲೇಷಣೆ ಮುನ್ನಂದಾಜಿನಲ್ಲಿದೆ.

ಸಿಬ್ಬಂದಿಯ ಹಿತಾಸಕ್ತಿ ಕಾಪಾಡಲು ಮತ್ತು ಸಾರ್ವಜನಿಕ ಸೇವೆಗಳ ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸಿಕೊಳ್ಳುವ ಈ ಎರಡೂ ವೆಚ್ಚಗಳನ್ನು ಹೆಚ್ಚಿಸಬೇಕಾದ ಅನಿವಾರ್ಯ ಇದೆ. ಇದು ರಾಜ್ಯದ ಹಣಕಾಸು ಸ್ಥಿತಿಯ ಮೇಲೆ ಗಣನೀಯ ಪರಿಣಾಮ ಬೀರುವುದಲ್ಲದೆ, ಬಂಡವಾಳ ವೆಚ್ಚ ಹಂಚಿಕೆಗೆ ವಿತ್ತೀಯ ಅವಕಾಶಗಳನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಮುನ್ನಂದಾಜಿನಲ್ಲಿ ವಿಶ್ಲೇಷಿಸಲಾಗಿದೆ.

ಜತೆಗೆ, ಅಭಿವೃದ್ಧಿ ಮತ್ತು ಬಂಡವಾಳ ವೆಚ್ಚಗಳಿಗೆ ಸೂಕ್ತ ಆದ್ಯತೆ ನೀಡಬೇಕಾಗುತ್ತದೆ ಎಂದೂ ಹೇಳಿದೆ.

ರಾಜಸ್ವ ವೆಚ್ಚ ಹೆಚ್ಚಳಕ್ಕೂ ಕಾರಣ

ರಾಜ್ಯ ಸರ್ಕಾರದ ರಾಜಸ್ವ ವೆಚ್ಚವೂ ಏರಿಕೆ ಹಾದಿಯಲ್ಲಿದೆ. 2026–27ನೇ ಸಾಲಿನಲ್ಲಿ ₹3.38 ಲಕ್ಷ ಕೋಟಿ ಇರುವ ರಾಜಸ್ವ ವೆಚ್ಚವು, 2029–30ನೇ ಸಾಲಿನ ಅಂತ್ಯದ ಹೊತ್ತಿಗೆ ₹4.23 ಲಕ್ಷ ಕೋಟಿಗೆ ತಲುಪಲಿದೆ.

ಬದ್ಧ ವೆಚ್ಚದಲ್ಲಿನ ಏರಿಕೆಯೇ ರಾಜಸ್ವ ವೆಚ್ಚದ ಹೆಚ್ಚಳಕ್ಕೆ ಪ್ರಮುಖ ಕಾರಣ. ಇದರ ಜತೆಯಲ್ಲಿ ಸಾಮಾಜಿಕ ಭದ್ರತೆ ಪಿಂಚಣಿ–ಸಹಾಯಧನದಲ್ಲಿನ ಏರಿಕೆಯೂ ಕಾರಣ ಎಂಬುದನ್ನು ಮುನ್ನಂದಾಜಿನಲ್ಲಿನ ದತ್ತಾಂಶಗಳು ಬೊಟ್ಟು ಮಾಡುತ್ತವೆ.

ಗ್ಯಾರಂಟಿ ಯೋಜನೆಗಳ ಮರುವಿನ್ಯಾಸ

ಗ್ಯಾರಂಟಿ ಕಾರ್ಯಕ್ರಮಗಳಂತಹ ಸಹಾಯಧನ ಮತ್ತು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳನ್ನು ಮರುವಿನ್ಯಾಸ ಮಾಡಬೇಕು ಎಂಬ ಸಲಹೆಯನ್ನು ಮಧ್ಯಮಾವಧಿ ವಿತ್ತೀಯ ಮುನ್ನಂದಾಜು ನೀಡಿದೆ.

ಹಿಂದುಳಿದ ಮತ್ತು ಅಂಚಿನ ಸಮುದಾಯಗಳಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಅತ್ಯಂತ ಅಗತ್ಯವಾದರೂ, ವಿವೇಚನೆಯಿಂದ ಅವುಗಳನ್ನು ವಿತರಣೆ ಮಾಡಬೇಕು. ಸಹಾಯಧನಗಳನ್ನು ನಿಯಮಿತವಾಗಿ ಪರಿಶೀಲಿಸದೇ ಇದ್ದರೆ, ವಿತ್ತೀಯ ಅವಕಾಶಗಳನ್ನು ಅದು ಸಂಕುಚಿತಗೊಳಿಸುತ್ತದೆ. ಹೀಗಾಗಿ ದೀರ್ಘಾವಧಿಯಲ್ಲಿ ಸುಸ್ಥಿರ ಹಣಕಾಸು ಸ್ಥಿತಿ ಕಾಯ್ದುಕೊಳ್ಳುವಂತೆ ಸಹಾಯಧನ ಯೋಜನೆಗಳನ್ನು ಮರುವಿನ್ಯಾಸ ಮಾಡಬೇಕು ಎಂದು ಮುನ್ನಂದಾಜು ಒತ್ತಿ ಹೇಳಿದೆ.

ಚುನಾವಣಾ ಸಂದರ್ಭದಲ್ಲಿ ಇಂತಹ ಹೊಸ ಯೋಜನೆಗಳನ್ನು ಘೋಷಿಸಿದರೆ, ರಾಜ್ಯದ ಆರ್ಥಿಕ ಸ್ಥಿತಿ ಮತ್ತು ಆರ್ಥಿಕ ಶಿಸ್ತು ಕಾಯ್ದುಕೊಳ್ಳುವುದು ಸವಾಲಾಗಬಹುದು ಎಂದು ಮುನ್ನಂದಾಜು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.