ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ಕುಸಿದಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.

ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದ ಸಾಲ, ಗ್ಯಾರಂಟಿ ಯೋಜನೆಗಳು, ಬಿಪಿಎಲ್ ಕಾರ್ಡ್ ರದ್ದತಿ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಟೀಕಿಸಿದರು.

ರಾಜ್ಯದ ಸಾಲ ₹8.5 ಲಕ್ಷ ಕೋಟಿಯಿಂದ ₹10 ಲಕ್ಷ ಕೋಟಿಗೆ ಮುಟ್ಟಲಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಾಲ ಶೇ 53ರಷ್ಟು ಹೆಚ್ಚಾಗಿದೆ. ಈ ಸಾಲ ಅಭಿವೃದ್ಧಿಗೆ ಬಳಸಿದ್ದಾರೆಯೇ? ಹಳ್ಳ ಬಿದ್ದ ರಸ್ತೆಗಳು, ಸಂಬಳ ನೀಡಲು ಹಣವಿಲ್ಲದ ಸ್ಥಿತಿ, ರೈತರ ಆತ್ಮಹತ್ಯೆ ಹೆಚ್ಚಳವೇ ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು.

ಯಡಿಯೂರಪ್ಪ ಸರ್ಕಾರ ಸೈಕಲ್ ಕೊಟ್ಟಿತು. ರೈತರ ಖಾತೆಗೆ ಕೇಂದ್ರದ ₹6 ಸಾವಿರದ ಜೊತೆಗೆ ರಾಜ್ಯದಿಂದ ₹4 ಸಾವಿರ ಸೇರಿಸಿ ಕೊಟ್ಟೆವು. ಆದರೆ ಅದನ್ನು ಗ್ಯಾರಂಟಿ ಎನ್ನಲಿಲ್ಲ. ಚುನಾವಣೆಗಾಗಿ ಗ್ಯಾರಂಟಿ ಘೋಷಿಸಿ ಈಗ ಬಿಪಿಎಲ್ ಕಾರ್ಡ್ ರದ್ದು ಮಾಡುವ ಹುನ್ನಾರ ನಡೆದಿದೆ. ನಾನು ಕಂದಾಯ ಸಚಿವನಾಗಿ ಕೆಲಸ ಮಾಡಿದ್ದೇನೆ. ಸತ್ತವರು ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತಾರೆ. ಇದು ಅನ್ನಕ್ಕೆ ಕನ್ನ ಹಾಕುವ ಕೆಲಸ. ಅನ್ನಭಾಗ್ಯ ಸಿದ್ದರಾಮಯ್ಯ ಸರ್ಕಾರದ ಕೊಡುಗೆಯಲ್ಲ. ಚುನಾವಣೆಯಲ್ಲಿ ಅಕ್ಕಿ ಕೊಡುವುದಾಗಿ ಹೇಳಿದರು. ಈಗ ಅಕ್ಕಿ ಕೊಟ್ಟಿಲ್ಲ ಎಂದು ಕಿಡಿಕಾರಿದರು.

4 ಲಕ್ಷ ಟನ್ ಅಕ್ಕಿ ಬೇಕೆಂದು ಇಂಡೆಂಟ್ ಹಾಕಿದ್ದಾರೆ. ಆದರೆ ರಾಜ್ಯ ಸರ್ಕಾರ ಹಣ ನೀಡಿಲ್ಲ. ರೈತರಿಂದ ಖರೀದಿಸಿ ಕೊಡಬೇಕಾದ ಅಕ್ಕಿಯನ್ನು ಕೊಡುತ್ತಿಲ್ಲ. ಮೂರು ತಿಂಗಳಿಂದ ಪಿಂಚಣಿ ನೀಡುತ್ತಿಲ್ಲ. ಕೇಳಿದರೆ ಕೆವೈಸಿ ಕಾರಣ ನೀಡುತ್ತಾರೆ ಎಂದು ಆರೋಪಿಸಿದರು.

ಮಳೆ ಕೊರತೆ, ಆಡಳಿತದಲ್ಲಿ ನಿರ್ಲಕ್ಷ್ಯ: ಹಾಸನ ಜಿಲ್ಲೆಯಲ್ಲಿ ಶೇ 30ರಷ್ಟು ಮಳೆ ಕಡಿಮೆಯಾಗಿದೆ. ಶೇ 70ರಷ್ಟು ಬಿತ್ತನೆಯಾಗಿಲ್ಲ. ಜೋಳ ಮಾತ್ರ ಸ್ವಲ್ಪ ಬಿತ್ತನೆಯಾಗಿದೆ. ಆದರೆ ರಾಜ್ಯ ಸರ್ಕಾರ ಯಾವುದೇ ತಯಾರಿ ಮಾಡಿಲ್ಲ. ಜಿಲ್ಲಾ ಪ್ರವಾಸ ಬಿಟ್ಟು ದೆಹಲಿ ಪ್ರವಾಸ ಮಾಡುತ್ತಿದ್ದಾರೆ. ಕುಂದುಕೊರತೆ ಸಭೆಗಳಿಲ್ಲ. ಅಧಿಕಾರ ಹಂಚಿಕೆ ಜಗಳದಿಂದ ಆಡಳಿತ ಕುಸಿದಿದೆ. ಗೃಹ ಸಚಿವರೇ ಆಡಳಿತ ಕುಸಿದಿದೆ ಎಂದು ಹೇಳಿದ್ದಾರೆ. ಒಂದು ವರ್ಷದಿಂದಲೇ ಕುಸಿದಿದೆ. ಇದು ಹೈಕಮಾಂಡ್ ಅಲ್ಲ, ವೀಕ್ ಕಮಾಂಡ್ ಎಂದು ಟೀಕಿಸಿದರು.

ಸರ್ಕಾರದ ಆದಾಯ, ಕಂದಾಯ ವಸೂಲಿ ನಿಂತು ಹೋಗಿದೆ. ಅಬಕಾರಿ ಮಾತ್ರ ಶರವೇಗದಲ್ಲಿದೆ. ₹28ಸಾವಿರದಿಂದ ₹45 ಸಾವಿರ ಕೋಟಿ ತೆಗೆದುಕೊಂಡು ಹೋಗಿದ್ದಾರೆ. ಗಾಂಧೀಜಿ ಆಶಯವನ್ನು ಈಡೇರಿಸುತ್ತಿದ್ದಾರೆ. ಮದ್ಯದ ಕಿಕ್ನಲ್ಲೇ ಸರ್ಕಾರ ಮುನ್ನಡೆಯುತ್ತಿದೆ ಎಂದು ಟೀಕಿಸಿದರು.

ಶಾಸಕ ಸಿಮೆಂಟ್ ಮಂಜು, ಸಿದ್ದೇಶ್ ನಾಗೇಂದ್ರ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-36-1631297950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.