ಸಿಂಧನೂರು: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಆಡಳಿತ 3 ವರ್ಷ ಪೂರ್ಣಗೊಂಡಿದೆ. ಈ ಮಧ್ಯೆ 6 ವಿಧಾನಸಭಾ ಉಪ ಚುನಾವಣೆಗಳು ನಡೆದಿದ್ದು, ಎಲ್ಲಾ ಕಡೆಯಲ್ಲೂ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ಇದರಿಂದ ಸಿದ್ದರಾಮಯ್ಯ ಸಾರಥ್ಯದ ಸರ್ಕಾರಕ್ಕೆ ಜನ ಬೆಂಬಲವಿದೆ ಎನ್ನುವುದು ಸಾಬೀತಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಬೇಕಾಗಿದೆ. ರಾಷ್ಟ್ರೀಯ ನಾಯಕರೂ ಸಂಪುಟ ವಿಸ್ತರಣೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆದಷ್ಟು ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಬಹುದು’ ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,‘ಮುಖ್ಯಮಂತ್ರಿಗಳೇ ಈಗಾಗಲೇ ಹಲವಾರು ಬಾರಿ ಉತ್ತರಿಸಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ಅವರು ಬದ್ಧರಾಗಿರುತ್ತಾರೆ’ ಎಂದು ಹೇಳಿದರು.

‘ಸಂಪುಟ ವಿಸ್ತರಣೆ ಸಮಯದಲ್ಲಿ ತಂದೆಯ ಸಮಾನರಾದ ಹಂಪನಗೌಡರಿಗೆ ಸಚಿವ ಸ್ಥಾನ ಲಭಿಸಬೇಕೆನ್ನುವ ಆಸೆ ನನಗೂ ಇದೆ. ತಂದೆಯವರೊಂದಿಗೆ ಅತ್ಯಂತ ಆತ್ಮೀಯರಾದವರಿಗೆ ಸಚಿವ ಸ್ಥಾನ ಲಭಿಸಿದರೆ, ಅತ್ಯಂತ ಸಂತಸ ಪಡುತ್ತೇನೆ’ ಎನ್ನುತ್ತಿದ್ದಂತೆ, ಅಲ್ಲಿಯೇ ಇದ್ದ ಕಾರ್ಯಕರ್ತರು ಹಂಪನಗೌಡರ ಹಿರಿತನಕ್ಕೆ ಎಂದೋ ಸಚಿವ ಸ್ಥಾನ ಲಭಿಸಬೇಕಾಗಿತ್ತು. ಅವರಿಗೆ ಅನ್ಯಾಯವಾಗಿದೆ’ ಎಂದು ಹೇಳಿದರು. ಆಗ ‘ನಾನು ನನ್ನ ಸಾಮರ್ಥ್ಯಕ್ಕೆ ಅನುಗುಣ ವಾಗಿ ಅವರ ಹಿತಕ್ಕಾಗಿ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಎಐಸಿಸಿ ಆದೇಶದ ಮೇರೆಗೆ ಕೆಪಿಸಿಸಿ ಮತ್ತು ಡಿಸಿಸಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ಶಿಬಿರ ನಡೆಸಿ, ಎಸ್.ಐ.ಆರ್ನಿಂದ ಆಗುವ ಅಪಾಯಗಳನ್ನು ತಿಳಿಸುವ ಮೂಲಕ ಅರ್ಹ ಮತದಾರರಿಗೆ ಜಾಗೃತಿ ಮೂಡಿಸಿ ಯಾರನ್ನೂ ಹೊರಗುಳಿಯದಂತೆ ನಿಗಾ ವಹಿಸಲಾ ಗುವುದು’ ಎಂದು ಹೇಳಿದರು.

ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ತುರ್ವಿಹಾಳ, ಮುಖಂಡರಾದ ಪಂಪನಗೌಡ ಬಾದರ್ಲಿ, ಖಾಜಿ ಮಲಿಕ್ ವಕೀಲ, ದೊಡ್ಡ ಬಸನಗೌಡ ಬಾದರ್ಲಿ, ಅನಿಲ ಕುಮಾರ, ಅಶೋಕ ಉಮಲೂಟಿ, ರಾಮಣ್ಣ ಗೋನವಾರ, ದುರಗಪ್ಪ ದಿದ್ದಗಿ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ಧಡೇಸುಗೂರು, ದುರಗಪ್ಪ ಕಟಾಲಿ, ಹನುಮೇಶ ನಾಯಕ, ಸಿದ್ದನಗೌಡ ವಿರುಪಾಪೂರ, ವೀರೇಶ ಹಟ್ಟಿ, ಶಿವನಗೌಡ ಎಲೆಕೂಡ್ಲಗಿ, ಕೆಪಿಸಿಸಿ ಸದಸ್ಯ ವೆಂಕಟೇಶ್ವರರಾವ್ ಮಲ್ಲದಗುಡ್ಡ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-32-1171691400

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.