ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತಾವಧಿಯ ಯಶಸ್ವಿ ಮೂರು ವರ್ಷಗಳನ್ನು ಪೂರೈಸಿದೆ. ಭರ್ಜರಿ ಬಹುಮತದೊಂದಿಗೆ 2023ರಲ್ಲಿ ಅಧಿಕಾರ ಹಿಡಿದಿದ್ದ ಸರ್ಕಾರ, ಇದೀಗ ಮೂರು ವರ್ಷಗಳ ಮೈಲಿಗಲ್ಲನ್ನು ತಲುಪಿದೆ. ಈ ಅವಧಿಯನ್ನು ಸರ್ಕಾರ ‘ಸಾರ್ಥಕ ಪಯಣ’ ಮತ್ತು ‘ಜನಪರ ಆಡಳಿತ’ ಎಂದು ಬಣ್ಣಿಸುತ್ತಿದೆ. ಬಡತನ ನಿರ್ಮೂಲನೆ, ಸಾಮಾಜಿಕ ನ್ಯಾಯ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆರ್ಥಿಕ ಶಕ್ತಿಯಾಗಿ ರಾಜ್ಯವನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಪ್ರಮುಖ ನಿರ್ಧಾರಗಳು, ಐದು ಐತಿಹಾಸಿಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಕೈಗಾರಿಕಾ ಪ್ರಗತಿ ಯೋಜನೆಗಳು ಪ್ರಮುಖ ಸಾಕ್ಷಿಗಳಾಗಿ ಜಾರಿಗೊಂಡಿವೆ.

ಗ್ಯಾರಂಟಿಗಳ ಕ್ರಾಂತಿ: ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಆಡಳಿತದ ಅತಿ ದೊಡ್ಡ ಯಶಸ್ಸು ಎಂದರೆ ಚುನಾವಣೆಗೂ ಮುನ್ನ ಘೋಷಿಸಿದ್ದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಚಾಲನೆಯಲ್ಲಿಟ್ಟಿರುವುದು. ವಾರ್ಷಿಕ ಸರಿಸುಮಾರು 50,000ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಗಳು ಕೋಟ್ಯಂತರ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಿವೆ. ರಾಜ್ಯದ ಸಾರಿಗೆ ಸಂಸ್ಥೆಗಳಾದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆ ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಕಳೆದ ಮೂರು ವರ್ಷಗಳಲ್ಲಿ ಕೋಟ್ಯಂತರ ಮಹಿಳೆಯರು ಇದರ ಲಾಭ ಪಡೆದಿದ್ದಾರೆ. ಇದರಿಂದಾಗಿ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳು ಮತ್ತು ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಿವೆ. ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಸಾರಿಗೆ ವೆಚ್ಚ ಉಳಿತಾಯವಾಗಿದೆ.

ಜತೆಗೆ, ಕುಟುಂಬದ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ 'ಗೃಹ ಲಕ್ಷ್ಮೀ' ಯೋಜನೆ ದೇಶದಲ್ಲೇ ಅತಿ ದೊಡ್ಡ ನಗದು ವರ್ಗಾವಣೆ ಯೋಜನೆಯಾಗಿದೆ. ಅಂದಾಜು 1.2ಕೋಟಿಗೂ ಅಧಿಕ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನವನ್ನು ಇದು ಹೆಚ್ಚಿಸಿದೆ.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ ಪ್ರತಿ ಸದಸ್ಯನಿಗೆ ಮಾಸಿಕ 10 ಕೆಜಿ ಆಹಾರ ಧಾನ್ಯ ನೀಡುವ 'ಅನ್ನಭಾಗ್ಯ' ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಕೇಂದ್ರ ಸರ್ಕಾರದ ಪಾಲಿನ ಹೊರತಾಗಿ, ಉಳಿದ 5 ಕೆಜಿ ಅಕ್ಕಿಯ ಬದಲಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ(ಡಿಬಿಟಿ), ನಂತರ ಯೋಜನೆಯಲ್ಲಿ ಕಾಲಕಾಲಕ್ಕೆ ಜನಪರ ಬದಲಾವಣೆ ಮಾಡುವ ಮೂಲಕ ಸರ್ಕಾರ ಬಡ ಕುಟುಂಬಗಳ ಹಸಿವು ನೀಗಿಸುವಲ್ಲಿ ಯಶಸ್ವಿಯಾಗಿದೆ. ಸದ್ಯದಲ್ಲೇ ಈ ಯೋಜನೆಗೆ ಪೌಷ್ಟಿಕಾಂಶ ವೃದ್ಧಿಗೆ ನೆರವಾಗುವ ಇಂದಿರಾಕಿಟ್ ಸಹ ಸೇರ್ಪಡೆಗೊಳ್ಳಲಿದೆ. ಮನೆಬಳಕೆಯ ವಿದ್ಯುತ್ನಲ್ಲಿ ಪ್ರತಿ ತಿಂಗಳು ಗರಿಷ್ಠ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಮಾಸಿಕ ಬಜೆಟ್ಗೆ ಸರ್ಕಾರ 'ಗೃಹಜ್ಯೋತಿ' ಮೂಲಕ ದೊಡ್ಡ ಆಸರೆ ನೀಡಿದೆ. ಕೋಟ್ಯಂತರ ಗ್ರಾಹಕರು ಇಂದು ‘ಶೂನ್ಯ ವಿದ್ಯುತ್ ಬಿಲ್’ ಪಡೆಯುತ್ತಿದ್ದಾರೆ. ಇದರೊಂದಿಗೆ, ಪದವಿ ಮತ್ತು ಡಿಪ್ಲೊಮಾ ಮುಗಿಸಿ ಉದ್ಯೋಗ ನಿರೀಕ್ಷೆಯಲ್ಲಿದ್ದ ಯುವಕ-ಯುವತಿಯರಿಗೆ ಆರ್ಥಿಕ ನೆರವು ನೀಡುವ ಯುವನಿಧಿ ಯೋಜನೆ ಸಹ ಯಶಸ್ಸಿನ ಹೆಜ್ಜೆಯನ್ನಿಟ್ಟಿದೆ. ಸರ್ಕಾರ ನೀಡಿದ್ದ ಭರವಸೆ ಅನ್ವಯ ಪಂಚ ಗ್ಯಾರಂಟಿಗಳ ಜಾರಿ ಬಳಿಕ, ಬೌನಸ್ ರೀತಿ ಆರನೇ ಗ್ಯಾರಂಟಿಯಾಗಿ 'ಭೂ ಗ್ಯಾರಂಟಿ' ಯೋಜನೆಗೂ ಚಾಲನೆ ನೀಡಿದೆ. ಸಾಧನಾ ಸಮಾವೇಶದ ಅಂಗವಾಗಿ ಹಾವೇರಿಯಲ್ಲಿ ಇತ್ತೀಚೆಗೆ ಮಹತ್ವಾಕಾಂಕ್ಷೆಯ ‘ಭೂ ಗ್ಯಾರಂಟಿ’ ಯೋಜನೆಯನ್ನು ರಾಜ್ಯಕ್ಕೆಅರ್ಪಿಸಿದೆ. ಭೂ ರಹಿತ ಬಡವರಿಗೆ ಭೂಮಿ ಒದಗಿಸುವ ಮತ್ತು ಭೂ ದಾಖಲೆಗಳ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ.

ರಾಜ್ಯದ ಅರ್ಥವ್ಯವಸ್ಥೆಗೆ ಶಕ್ತಿ: ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಬೊಕ್ಕಸ ಬರಿದಾಗಲಿದೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಸರ್ಕಾರ ತನ್ನ ಆರ್ಥಿಕ ಶಿಸ್ತು ಮತ್ತು ಬಂಡವಾಳ ಆಕರ್ಷಣೆಯ ಮೂಲಕ ಉತ್ತರ ನೀಡಿದೆ. ಮೂರು ವರ್ಷಗಳಲ್ಲಿ ಕರ್ನಾಟಕವು ಕೈಗಾರಿಕೆ ಮತ್ತು ವಿದೇಶಿ ನೇರ ಹೂಡಿಕೆಯಲ್ಲಿ (ಎಫ್ಡಿಐ) ಮುಂಚೂಣ ಕಾಯ್ದುಕೊಂಡಿದೆ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶವು ಅಭೂತಪೂರ್ವ ಯಶಸ್ಸು ಕಂಡಿದೆ. ವಿವಿಧ ವಲಯಗಳಲ್ಲಿ ಸುಮಾರು 10ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಬಂಡವಾಳ ಹೂಡಿಕೆಯ ಒಪ್ಪಂದಗಳು ನಡೆದಿವೆ. ಇದರಿಂದ ಮುಂದಿನ ದಿನಗಳಲ್ಲಿ ಕನಿಷ್ಠ 6ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಸುಮಿಟೊಮೊ ಕಾರ್ಪೊರೇಷನ್, ಹೋಂಡಾ, ಜೆಎಫ್ಇ ಶೋಜಿ ಸೇರಿದಂತೆ ಪ್ರಮುಖ ಜಪಾನಿನ ಕಂಪನಿಗಳು ರಾಜ್ಯದಲ್ಲಿ ಸೆಮಿಕಂಡಕ್ಟರ್, ಎಲೆಕ್ಟ್ರಿಕ್ ವಾಹನ (ಇವಿ) ಮತ್ತು ಸ್ಟೀಲ್ ವಲಯದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಇದರೊಂದಿಗೆ, ರಾಜ್ಯದ ಎರಡನೇ ಹಂತದ ನಗರಗಳ ಅಭಿವೃದ್ಧಿಗಾಗಿ ‘ಕ್ವಿನ್ ಸಿಟಿ’ ಮತ್ತು ‘ಸ್ವಿಫ್ಟ್ ಸಿಟಿ’ ನಂತಹ ವಿನೂತನ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಐಟಿ-ಬಿಟಿ ವಲಯವನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸದೆ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಭಾಗಗಳಿಗೂ ವಿಸ್ತರಿಸಲಾಗುತ್ತಿದೆ.

ರಾಜಧಾನಿಗೆ ಹೊಸಸ್ವರೂಪ: ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ರವರ ಕನಸಿನ ಯೋಜನೆಯಾದ ‘ಬ್ರ್ಯಾಂಡ್ ಬೆಂಗಳೂರು’ ಅಡಿಯಲ್ಲಿ ರಾಜಧಾನಿಯ ಮೂಲಸೌಕರ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನಗಳು ನಡೆದಿವೆ. ಬೆಂಗಳೂರಿನ ಅತಿ ದೊಡ್ಡ ಸಮಸ್ಯೆಯಾದ ಟ್ರಾಫಿಕ್ಗೆ ಮುಕ್ತಿ ನೀಡಲು ಜಾಗತಿಕ ತಂತ್ರಜ್ಞಾನ ಬಳಸಿ ಹೈ-ಸ್ಪೀಡ್ ಸುರಂಗ ಮಾರ್ಗ ನಿರ್ಮಾಣದ ಯೋಜನೆಗೆ ಚಾಲನೆ ನೀಡಲಾಗಿದೆ. ಜತೆಗೆ, ನಮ್ಮ ಮೆಟ್ರೋ ಜಾಲವನ್ನು ಬೆಂಗಳೂರಿನ ಹೊರವಲಯ ಮತ್ತು ಪ್ರಮುಖ ಐಟಿ ಹಬ್ಗಳಿಗೆ ಸಂಪರ್ಕಿಸುವ ಕಾಮಗಾರಿಗಳನ್ನು ವೇಗಗೊಳಿಸಲಾಗಿದೆ. ಹೊಸ ಮಾರ್ಗಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ. ಬಿಎಂಆರ್ಸಿಎಲ್ ನೆಟ್ವರ್ಕ್ ವಿಸ್ತರಣೆಯಿಂದ ಲಕ್ಷಾಂತರ ವಾಹನ ಸವಾರರಿಗೆ ಅನುಕೂಲವಾಗಿದೆ. ರಸ್ತೆ ಗುಂಡಿಗಳ ಮುಕ್ತಿಗೆ ಕಠಿಣ ಕ್ರಮ, ಹೈ-ಡೆನ್ಸಿಟಿ ಕಾರಿಡಾರ್ಗಳ ಅಭಿವೃದ್ಧಿ ಮತ್ತು ಪ್ರಮುಖ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಕಸ ವಿಲೇವಾರಿ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಹೊಸ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ.

ಆರೋಗ್ಯ, ಶಿಕ್ಷಣಕ್ಕೂ ವಿಶೇಷ ನಿಗಾ: ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಭಾರಿ ಸುಧಾರಣೆ ತರಲಾಗಿದೆ. ಸರ್ಕಾರಿ ಆಸ್ಪತ್ರೆಗಳ ನವೀಕರಣ, ಔಷಧಗಳ ನಿರಂತರ ಪೂರೈಕೆ ಮತ್ತು ಖಾಲಿ ಇದ್ದ ಸಾವಿರಾರು ವೈದ್ಯಕೀಯ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಲು ‘ಸಿಎಸ್ಆರ್’ ನಿಧಿ ಬಳಸಿಕೊಳ್ಳಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ ವಿಶೇಷ ಅನುದಾನ ನೀಡಲಾಗಿದೆ. ಜತೆಗೆ, ಕರಾವಳಿ ಸೇರಿದಂತೆ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಕೋಮು ಸಂಘರ್ಷಗಳಿಗೆ ಬ್ರೇಕ್ ಹಾಕುವಲ್ಲಿ ಗೃಹ ಇಲಾಖೆ ಯಶಸ್ವಿಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ದಕ್ಷ ಅಧಿಕಾರಿಗಳ ನೇಮಕ ಮಾಡಲಾಗಿದ್ದು, ಕೊಲೆ, ಸುಲಿಗೆಯಂತಹ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆಯಾಗಿದೆ. ಆ ಮೂಲಕ ಜನರಿಗೆ ಸುವ್ಯವಸ್ಥಿತ ಸಮಾಜ ರೂಪಿಸಿಕೊಡುವಲ್ಲಿ ಸರ್ಕಾರ ಯಶಸ್ವಿ ಹೆಜ್ಜೆಗಳನ್ನಿಡುತ್ತಿದೆ. ನೀರಾವರಿ, ಕೃಷಿ, ತೋಟಗಾರಿಕೆ, ಪ್ರವಾಸೋದ್ಯಮ, ಪಂಚಾಯತ್ ರಾಜ್ ಸೇರಿದಂತೆ ಎಲ್ಲಾ ವಲಯಗಳಲ್ಲೂ ಸರ್ಕಾರ ಅತ್ಯುತ್ತಮ ಸಾಧನೆ ಮಾಡುತ್ತಿದ್ದು, ಎಲ್ಲಾ ಯೋಜನೆಗಳಲ್ಲೂ ಜನಪರ ಕಾಳಜಿ ಮೆರೆಯುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-270626625

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.