ಬೆಂಗಳೂರು: ತುಮಕೂರಿನಲ್ಲಿ ಮಂಗಳವಾರ ನಡೆದ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶಕ್ಕೆ ತೆರಳುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾದ ಸಚಿವರು ಉಪಾಹಾರ ಸೇವಿಸುವ ನೆಪದಲ್ಲಿ ಒಂದೆಡೆ ಸೇರಿ ಚರ್ಚೆ ನಡೆಸಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ನಾನಾ ಚರ್ಚೆಗೆ ಗ್ರಾಸವಾಗಿದೆ.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಸರ್ಕಾರಿ ನಿವಾಸದಲ್ಲಿ ಸಚಿವರಾದ ಎಚ್.ಸಿ. ಮಹದೇವಪ್ಪ, ಬಿ.ಝೆಡ್. ಜಮೀರ್ ಅಹಮದ್ ಖಾನ್, ಕೆ. ವೆಂಕಟೇಶ್ ಒಟ್ಟಿಗೆ ಉಪಾಹಾರ ಸೇವಿಸುತ್ತ ಕೆಲಕಾಲ ಚರ್ಚೆ ನಡೆಸಿದರು. ಬಳಿಕ ಜೊತೆಯಾಗಿಯೇ ಸಮಾವೇಶಕ್ಕೆ ತೆರಳಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನರ್ ರಚನೆ ವಿಚಾರ ಚರ್ಚೆಯಲ್ಲಿದೆ. ಈ ವೇಳೆ ತಮ್ಮ ನಡೆ ಏನಿರಬೇಕು ಎಂಬ ಬಗ್ಗೆ ಸಚಿವರು ವಿಚಾರ ವಿನಿಮಯ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್ ಅಹಮದ್ ಖಾನ್, ‘ನಾವು ಗೋಪ್ಯ ಸಭೆ ನಡೆಸಿಲ್ಲ. ಬದಲಾಗಿ, ಜೊತೆಯಲ್ಲಿ ತಿಂಡಿ ತಿಂದಿದ್ದೇವೆ. ಸಾಧನಾ ಸಮಾವೇಶಕ್ಕೆ ಜೊತೆಯಲ್ಲಿ ಹೋಗಬೇಕು ಎಂಬ ಉದ್ದೇಶದಿಂದ ಒಂದು ಕಡೆ ಸೇರಿದ್ದೇವೆ. ಎಲ್ಲಿಯಾದರೂ ಒಂದು ಕಡೆ ಸೇರಬೇಕಲ್ಲವೆ’ ಎಂದರು.

ಇದೇ ವಿಚಾರವಾಗಿ ಮಾತನಾಡಿದ ಸತೀಶ ಜಾರಕಿಹೊಳಿ, ‘ಕನ್ನಡ ಶಾಲೆ ಹುಡುಗರು ಒಟ್ಟಾಗಿ ಸೇರಿ ಪ್ರವಾಸಕ್ಕೆ ಹೋಗುತ್ತಾರೆಯಲ್ಲವೇ, ಅದೇ ರೀತಿ ನಾವು ತುಮಕೂರಿಗೆ ಹೋಗಲು ಸೇರಿದ್ದೆವು’ ಎಂದರು.

‘ಇದೇ ರೀತಿ ದೆಹಲಿಗೆ ಪ್ರವಾಸ ಹೋಗುವ ವಿಚಾರ ಇದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ದೆಹಲಿಗೆ ನಾವು ಹೋಗುವುದಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರನ್ನು ಹೈಕಮಾಂಡ್ ನಾಯಕರು ಕರೆಯಬಹುದು, ನಮ್ಮನ್ನಲ್ಲ. ರಾಹುಲ್ ಗಾಂಧಿ ಒಂದು ವಾರದ ಬಳಿಕ ದೆಹಲಿಗೆ ಬರುತ್ತಾರೆ. ನಂತರ ಅವರು ರಾಜ್ಯದ ನಾಯಕರನ್ನು ಅಲ್ಲಿಗೆ ಕರೆದು ಚರ್ಚೆ ನಡೆಸಬಹುದು’ ಎಂದರು.

ಜಾರ್ಜ್ ನಿವಾಸದಲ್ಲಿ ‘ಕೈ’ ನಾಯಕರ ಭೋಜನ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನರ್ ರಚನೆಯ ಚರ್ಚೆ ನಡುವೆಯೇ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನಿವಾಸದಲ್ಲಿ ‘ಕೈ’ ನಾಯಕರು ಸೋಮವಾರ ಮಧ್ಯಾಹ್ನ ಭೋಜನ ಸವಿಯುವ ನೆಪದಲ್ಲಿ ಒಟ್ಟಾಗಿ ವಿಚಾರವಿನಿಮಯ ನಡೆಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಸೋಮವಾರ ಬೆಳಿಗ್ಗೆ ಕೇರಳಂ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬೆಂಗಳೂರಿಗೆ ವಾಪಸಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಕೆ.ಎಚ್. ಮುನಿಯಪ್ಪ ಮತ್ತಿತರರು ಜಾರ್ಜ್ ಅವರ ನಿವಾಸಕ್ಕೆ ತೆರಳಿದ್ದರು.

‘ತಿರುವನಂತಪುರದಿಂದ ವಿಮಾನ ಮೂಲಕ ನೇರವಾಗಿ ಬೆಂಗಳೂರಿಗೆ ಬಂದ ನಾಯಕರು, ಜಾರ್ಜ್ ಅವರು ಆಹ್ವಾನ ನೀಡಿದ್ದರಿಂದ ಮಧ್ಯಾಹ್ನದ ಭೋಜನ ಸವಿಯಲು ಅವರ ಮನೆಗೆ ತೆರಳಿದ್ದರು. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ ವಿಚಾರ ಚರ್ಚೆ ಆಗಿಲ್ಲ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.