ಅತ್ತಿಬೆಲೆ(ಆನೇಕಲ್): ಅಧಿಕಾರಕ್ಕಾಗಿ ದಲಿತರನ್ನು ವಿಭಜನೆ ಮಾಡಲಾಗುತ್ತಿದ್ದು, ಬಲಗೈ, ಎಡಗೈ ಎಂದು ವಿಂಗಡಿಸಲಾಗಿದೆ. ಕರ್ನಾಟಕದಲ್ಲಿ 1 ಕೋಟಿಗೂ ಹೆಚ್ಚು ದಲಿತರಿದ್ದರೂ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯ ಇನ್ನೂ ಕನಸಾಗಿ ಉಳಿದಿದೆ ಎಂದು ಕನ್ನಡ ಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ದೇವ ಹೇಳಿದರು.

ತಾಲ್ಲೂಕಿನ ಅತ್ತಿಬೆಲೆ ಕೈಗಾರಿಕ ಪ್ರದೇಶ ವ್ಯಾಪ್ತಿಯ ಗುಡ್ಡಹಟ್ಟಿಯಲ್ಲಿ ಅಂಬೇಡ್ಕರ್ ಗೆಳೆಯರ ಬಳಗದಿಂದ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.

ನೆಹರು, ಗಾಂಧೀ ಅವರ ವಿಚಾರೆಧಾರೆಗಳಲ್ಲಿ ಜಾತಿ ಪರಿಗಣಿಸುವುದಿಲ್ಲ. ಆದರೆ ಅಂಬೇಡ್ಕರ್ ಅವರ ವಿಚಾರಧಾರೆಗಳಲ್ಲಿ ಜಾತಿಯ ಬಣ್ಣ ಕಟ್ಟುವುದು ಅತ್ಯಂತ ದುಃಖದ ಸಂಗತಿಯಾಗಿದೆ ಎಂದು ಬೇಸರಿಸಿದರು.

ಅಂಬೇಡ್ಕರ್ ಅವರ ಜ್ಞಾನದ ಪ್ರತೀಕ. ಅವರ ಗ್ರಂಥಾಲಯದಲ್ಲಿ 50ಸಾವಿರ ಪುಸ್ತಕಗಳಿದ್ದವು ಮತ್ತು ಅವರು 25 ಸಾವಿರ ಪುಟಗಳಷ್ಟು ಕೈಬರಹದಲ್ಲಿ ಪುಸ್ತಕಗಳನ್ನು ಬರೆದ ಮಹಾಜ್ಞಾನಿಯಾಗಿದ್ದರು. ಅವರ ಆದರ್ಶ, ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮತಗಳನ್ನು ಮಾರಿಕೊಳ್ಳುವುದರಿಂದ ಉತ್ತಮ ಸಮಾಜ ನಿರ್ಮಾಣ ಆಗುವುದಿಲ್ಲ. ಅಂಬೇಡ್ಕರ್ ಅವರು ತಮ್ಮ ವಿಚಾರಧಾರೆಗಳಲ್ಲಿ ತಿಳಿಸಿರುವಂತೆ ಮತಗಳನ್ನು ಮಾರಿಕೊಳ್ಳುವುದು ಮಗಳನ್ನು ಮಾರಿದಷ್ಟೇ ತಪ್ಪಾಗುತ್ತದೆ ಎಂದು ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ಅಧ್ಯಕ್ಷ ಸಿಂಗೇನಅಗ್ರಹಾರ ಎಸ್.ಕೆ.ಗೌರೀಶ್ ಹೇಳಿದರು.

ಅಂಬೇಡ್ಕರ್ ಅವರ ಜಾತೀಯತೆ ವಿರುದ್ಧ ಮತ್ತು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಧ್ವನಿ ಇಲ್ಲದವರಿಗೆ ದನಿ ಆಗಬೇಕಾದರೆ ಅಂಬೇಡ್ಕರ್ ವಿಚಾರಧಾರೆಗಳ ಅವಶ್ಯಕ. ಶೋಷಿತ ಸಮುದಾಯಗಳ ಹಕ್ಕುಗಳನ್ನು ಸಂರಕ್ಷಿಸಲು ಯುವಕರು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟಾಪಟ್ ರವಿ, ಶ್ರೀನಿವಾಸ್, ಅಶೋಕ್, ರಾಮಸ್ವಾಮಿ, ಶ್ರೀಧರ್, ನಾಗರಾಜು ಮೌರ್ಯ, ನವೀನ್, ಕನ್ನಡ ಸೋಮು, ರಾಮಣ್ಣ, ನಾಗರಾಜು, ಮಂಜು, ಜಯಣ್ಣ, ವೆಂಕಟಸ್ವಾಮಿ, ವೆಂಕಟೇಶ್, ಬಳಗಾರನಹಳ್ಳಿ ಕುಮಾರ್, ಮಂಜು, ಗಣೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-15-939532618

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.